ETV Bharat / bharat

ವಾರಾಣಸಿ ಸೇರಿ ದೇಶದ 30 ವಿಮಾನ ನಿಲ್ದಾಣಗಳ ಮೇಲೆ ಬಾಂಬ್ ಬೆದರಿಕೆ: ಭದ್ರತಾ ಸಂಸ್ಥೆಗಳಿಂದ ಹೈ ಅಲರ್ಟ್​ ಘೋಷಣೆ - BOMB THREAT AIRPORT - BOMB THREAT AIRPORT

ವಾರಾಣಸಿ ಸೇರಿದಂತೆ ದೇಶದ 30 ವಿಮಾನ ನಿಲ್ದಾಣಗಳಲ್ಲಿ ಸರಣಿ ಬಾಂಬ್​ ಸ್ಫೋಟ ನಡೆಸುವ ಬೆದರಿಕೆಯ ಇ-ಮೇಲ್ ಬಂದಿದೆ. ಈವರೆಗೂ ಇ-ಮೇಲ್ ಕಳುಹಿಸಿದವರ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ದೇಶದಾದ್ಯಂತ ಇರುವ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ಜೊತೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

THREAT TO BOMB VARANASI AIRPORT  VARANASI AIRPORT  THREAT TO BOMB AIRPORT  VARANASI CRIME
ವಾರಣಾಸಿ ಸೇರಿ ದೇಶದ 30 ವಿಮಾನ ನಿಲ್ದಾಣಗಳ ಮೇಲೆ ಬಾಂಬ್ ಬೆದರಿಕೆ
author img

By ETV Bharat Karnataka Team

Published : Apr 30, 2024, 9:56 AM IST

ವಾರಾಣಸಿ (ಉತ್ತರ ಪ್ರದೇಶ): ಬನಾರಸ್ ಸೇರಿದಂತೆ ದೇಶದ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶವೊಂದು ಸೋಮವಾರ ಸಂಜೆ ವಿಮಾನ ನಿಲ್ದಾಣದ ಅಧಿಕೃತ ಇ- ಮೇಲ್ ಐಡಿಗೆ ಬಂದಿದೆ.

ಬೆದರಿಕೆ ಹಾಕಿರುವ ವ್ಯಕ್ತಿಯ ಬಗ್ಗೆ ಲಭಿಸದ ಮಾಹಿತಿ: ವಿಮಾನ ನಿಲ್ದಾಣದಲ್ಲಿ ಬಾಂಬ್ ಅಳವಡಿಸಿ ರಿಮೋಟ್​ನಲ್ಲಿ ಬಟನ್ ಒತ್ತಿದ ತಕ್ಷಣವೇ ಸ್ಫೋಟ ಆಗಲಿದೆ ಎಂದು ಇ- ಮೇಲ್​​ನಲ್ಲಿ​ ತಿಳಿಸಲಾಗಿದೆ. ಬೆದರಿಕೆ ಹಿನ್ನೆಲೆ ವಿಮಾನ ನಿಲ್ದಾಣದ ಎಲ್ಲ ಗೇಟ್‌ಗಳ ಮೇಲೆ ನಿಗಾ ಹೆಚ್ಚಿಸಿ ತಡರಾತ್ರಿವರೆಗೂ ತಪಾಸಣೆ ನಡೆಸಲಾಯಿತು. ಆದರೆ, ತಡರಾತ್ರಿಯವರೆಗೂ ಬೆದರಿಕೆ ಹಾಕಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ವಿಮಾನ ನಿಲ್ದಾಣದ ಎಲ್ಲ ಗೇಟ್‌ಗಳಲ್ಲಿ ಬಿಗಿ ಭದ್ರತೆ: ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಸೋಮವಾರ ಸಂಜೆ ವಾರಾಣಸಿ ವಿಮಾನ ನಿಲ್ದಾಣದ ಅಧಿಕೃತ ಇ-ಮೇಲ್ ಐಡಿಗೆ ಮೇಲ್ ಬಂದಿದೆ. ಎಲ್ಲ 30 ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ಗಳನ್ನು ಅಳವಡಿಸಿದ್ದೇವೆ. ಮತ್ತು ರಿಮೋಟ್‌ನ ಬಟನ್ ಒತ್ತಿದರೆ, ಒಂದರ ನಂತರ ಒಂದರಂತೆ ಸ್ಫೋಟಗೊಳ್ಳಲು ಪ್ರಾರಂಭವಾಗುತ್ತವೆ ಎಂದು ಕಳುಹಿಸಿದ ಮೇಲ್​ನಲ್ಲಿ ಬರೆಯಲಾಗಿದೆ. ಇ- ಮೇಲ್ ಬಂದ ನಂತರ, ವಿಮಾನ ನಿಲ್ದಾಣದಲ್ಲಿ ಹೈ ಸೆಕ್ಯುರಿಟಿ ತಂಡವು ತಕ್ಷಣವೇ ಸಭೆ ನಡೆಸಿ ಹೈ ಅಲರ್ಟ್ ಘೋಷಣೆ ಮಾಡಿದೆ. ವಿಮಾನ ನಿಲ್ದಾಣದ ಎಲ್ಲಾ ಗೇಟ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ ತೀವ್ರ ತಪಾಸಣೆಯನ್ನು ಸಹ ಮುಂದುವರಿಸಲಾಗಿದೆ.

ಹಿರಿಯ ಸಿಐಎಸ್‌ಎಫ್ ಕಮಾಂಡೆಂಟ್ ಮಾಹಿತಿ: ತಡರಾತ್ರಿಯವರೆಗೂ, ಬೆದರಿಕೆ ಹಾಕುವ ವ್ಯಕ್ತಿಯ ಬಗ್ಗೆ ದೆಹಲಿ ಅಥವಾ ಇತರ ಯಾವುದೇ ಕೇಂದ್ರ ಕಚೇರಿಗೆ ಯಾವುದೇ ಮಾಹಿತಿ ಲಭಿಸಿಲ್ಲ. ಹಿಂದಿಯಲ್ಲಿ ಒಂದು ಸಾಲು ಬರೆಯುವುದರೊಂದಿಗೆ, ಬಾಂಬ್‌ನ ಎಮೋಜಿಯನ್ನು ಸಹ ಇ - ಮೇಲ್‌ನಲ್ಲಿ ಮಾಡಲಾಗಿದೆ. ಮೇಲ್​ ಬಂದ ನಂತರ ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್‌ನಲ್ಲಿ ತುರ್ತು ಸಭೆ ಕರೆಯಲಾಯಿತು. ಈ ಸಂದರ್ಭದಲ್ಲಿ, ಸಿಐಎಸ್ಎಫ್ ಮತ್ತು ಉತ್ತರ ಪ್ರದೇಶ ಪೊಲೀಸರ ಭದ್ರತಾ ಅಧಿಕಾರಿಗಳ ಸಮ್ಮುಖದಲ್ಲಿ ವಿಮಾನ ನಿಲ್ದಾಣದಲ್ಲಿ ಅಲರ್ಟ್ ಘೋಷಿಸಲಾಯಿತು. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಂಟಿ ತಪಾಸಣೆ ಅಭಿಯಾನವನ್ನು ಸಹ ಪ್ರಾರಂಭಿಸಲಾಯಿತು. ಸೋಮವಾರ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಅಪರಿಚಿತ ಇ-ಮೇಲ್ ಬಂದಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಸಿಐಎಸ್‌ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: EXCLUSIVE: ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ; ಈಟಿವಿ ಭಾರತದೊಂದಿಗಿನ ಸಂವಾದದ ವೇಳೆ ಶಾ ಅಚಲ ವಿಶ್ವಾಸ - Amit Shah To ETV Bharat

ETV Bharat Logo

Copyright © 2025 Ushodaya Enterprises Pvt. Ltd., All Rights Reserved.