ETV Bharat / bharat

ತೇಜಸ್ವಿ ಯಾದವ್ ವಿದ್ಯಾರ್ಥಿಗಳ ಪ್ರತಿಭಟನೆಯ ನೇತೃತ್ವ ವಹಿಸಬೇಕಿತ್ತು: ಪ್ರಶಾಂತ್ ಕಿಶೋರ್ - STUDENT PROTEST

ಪ್ರಶಾಂತ್ ಕಿಶೋರ್ ಭಾನುವಾರ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಶಾಂತ್ ಕಿಶೋರ್
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಶಾಂತ್ ಕಿಶೋರ್ (ANI)
author img

By ETV Bharat Karnataka Team

Published : Jan 5, 2025, 2:32 PM IST

ಪಾಟ್ನಾ(ಬಿಹಾರ್): ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಬೇಕಿತ್ತು ಎಂದು ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇತ್ತೀಚೆಗೆ ನಡೆಸಲಾದ ಬಿಹಾರ ನಾಗರಿಕ ಸೇವೆಗಳ (ಬಿಪಿಎಸ್​ಸಿ) ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಭಾನುವಾರ ಬೆಳಗ್ಗೆ ಧರಣಿಯಲ್ಲಿ ಭಾಗವಹಿಸಿದ ಕಿಶೋರ್, ಬಿಹಾರದ ಎತ್ತರದ ನಾಯಕನಾಗಿರುವ ಹಾಗೂ ವಿರೋಧ ಪಕ್ಷದ ನಾಯಕನೂ ಆಗಿರುವ ತೇಜಸ್ವಿ ಯಾದವ್ ಈ ಪ್ರತಿಭಟನೆಗಳ ನೇತೃತ್ವ ವಹಿಸಬೇಕಿತ್ತು ಎಂದು ಒತ್ತಾಯಿಸಿದರು.

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಿಶೋರ್, ಯಾದವ್ ಪ್ರತಿಪಕ್ಷ ನಾಯಕನಾಗಿರುವುದರಿಂದ ನನ್ನ ಬದಲು ಅವರೇ ವಿದ್ಯಾರ್ಥಿಗಳ ನೇತೃತ್ವ ವಹಿಸಬೇಕಿತ್ತು ಎಂದರು.

"ತೇಜಸ್ವಿ ಯಾದವ್ ಎತ್ತರದ ನಾಯಕ. ಅವರು ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಅವರು ಪ್ರತಿಭಟನೆಯ ನೇತೃತ್ವ ವಹಿಸಬೇಕಿತ್ತು. ಬೇಕಾದರೆ ನಾವು ಪ್ರತಿಭಟನೆಯಿಂದ ದೂರ ಹೋಗುತ್ತೇವೆ. ಈಗಲಾದರೂ ಅವರು ಇದರ ನೇತೃತ್ವ ವಹಿಸಿಕೊಳ್ಳಲಿ ಎಂದು ನಾನು ಅವರಿಗೆ ಕರೆ ನೀಡುತ್ತಿದ್ದೇನೆ. 5 ಲಕ್ಷ ವಿದ್ಯಾರ್ಥಿಗಳೊಂದಿಗೆ ಗಾಂಧಿ ಮೈದಾನಕ್ಕೆ ಬರುತ್ತೇವೆ ಎಂದು ಅವರು ಹೇಳಿದ್ದರಲ್ಲ. ವಿದ್ಯಾರ್ಥಿಗಳು ಮತ್ತು ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಿದೆ. ರಾಜಕೀಯ ಮತ್ತೆ ಯಾವಾಗಲಾದರೂ ಮಾಡಬಹುದು. ಇಲ್ಲಿ ನಾವು ಯಾವುದೇ ರಾಜಕೀಯ ಬ್ಯಾನರ್ ಹಾಕಿಲ್ಲ. ವಿದ್ಯಾರ್ಥಿಗಳ ಹಿತವೇ ನಮಗೆ ಮುಖ್ಯವಾಗಿದೆ" ಎಂದು ಜನ್ ಸುರಾಜ್ ಸಂಸ್ಥಾಪಕ ಕಿಶೋರ್ ಸುದ್ದಿಗಾರರಿಗೆ ತಿಳಿಸಿದರು.

ಮಧ್ಯರಾತ್ರಿಯ ನಂತರ ದಟ್ಟ ಮಂಜು ಹಾಗೂ ಚಳಿಯ ನಡುವೆ ಸ್ಥಳಕ್ಕಾಗಮಿಸಿದ ಕಿಶೋರ್, ಬಿಪಿಎಸ್​ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.

"ಇದು ಧರಣಿಯಲ್ಲ. ತಮ್ಮ ಪರಿಸ್ಥಿತಿಗಳನ್ನು ಸುಧಾರಿಸಿಕೊಳ್ಳಲು ಮತ್ತು ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಲು ಇದು ಬಿಹಾರ ಜನತೆಯ ಪ್ರಯತ್ನವಾಗಿದೆ. ಈ ಚಳಿಯ ವಾತಾವರಣದಲ್ಲಿಯೂ ಕೆಲವರು ಉತ್ಸಾಹದಿಂದ ಹಾಡು ಹಾಡುತ್ತಿದ್ದಾರೆ ಇಲ್ಲಿ ಸಮಾಜದ ಎಲ್ಲಾ ವರ್ಗಗಳ ಜನ ಸೇರಿದ್ದಾರೆ. ಆರೋಪಗಳಿಗೆ ಉತ್ತರಿಸಿ ಸಾಕಾಗಿದೆ. ಸುತ್ತಲೂ ಎಲ್ಲಾದರೂ ವ್ಯಾನಿಟಿ ವ್ಯಾನ್ ಇದೆಯಾ ಅಂತ ನೀವೇ ನೋಡಿ. ನಾನು ಇಲ್ಲಿಯೇ ಮಲಗುತ್ತೇನೆ" ಎಂದು ಕಿಶೋರ್ ಹೇಳಿದರು.

ಆಮರಣಾಂತ ಉಪವಾಸ ಹಾಗೂ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಕಿಶೋರ್, "ನಾನು ಅಷ್ಟು ಬೇಗ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ನಾನು ಸದ್ಯಕ್ಕೆ ಚೆನ್ನಾಗಿದ್ದೇನೆ. ಗಂಟಲು ಸ್ವಲ್ಪ ಕಟ್ಟಿಕೊಂಡಿದೆ. ಚೆನ್ನಾಗಿ ನಿದ್ರೆ ಮಾಡುವಂತೆ ವೈದ್ಯರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಗಂಭೀರ ಸಮಸ್ಯೆ ಏನೂ ಇಲ್ಲ" ಎಂದು ತಿಳಿಸಿದರು.

ಇದಕ್ಕೂ ಮುನ್ನ, ಬಿಪಿಎಸ್​ಸಿ ಪ್ರತಿಭಟನೆಯ ವಿಷಯವನ್ನು ಭಾರತೀಯ ಜನತಾ ಪಕ್ಷ ರಾಜಕೀಯಗೊಳಿಸುತ್ತಿದೆ ಎಂದು ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದರು. ಎಎನ್ಐ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಸ್ವತಂತ್ರ ಆಂದೋಲನವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದರು ಮತ್ತು ಪ್ರತಿಭಟನೆಗೆ ಬಂದಿರುವ ಜನ ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.