ETV Bharat / bharat

ಉತ್ತರಾಖಂಡ್​​ ಟ್ರೆಕ್ಕಿಂಗ್​ ದುರಂತ:​ ಬೆಂಗಳೂರಿನ ಐವರು ಸಾವು, ನಾಲ್ವರು ನಾಪತ್ತೆ, 11 ಜನರ ರಕ್ಷಣೆ - TREKKING TRAGEDY - TREKKING TRAGEDY

ಉತ್ತರಾಖಂಡದ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿದ್ದ ಐದು ಜನರು ಸಾವನ್ನಪ್ಪಿದ್ದಾರೆ.

ಉತ್ತರಾಖಂಡ್​ನಲ್ಲಿ ​ಟ್ರೆಕ್ಕಿಂಗ್​ಗೆ​ ತೆರಳಿದ್ದ 8 ಜನ ಸಾವು
ಉತ್ತರಾಖಂಡ್​ನಲ್ಲಿ ​ಟ್ರೆಕ್ಕಿಂಗ್​ಗೆ​ ತೆರಳಿದ್ದ 8 ಜನ ಸಾವು (ETV Bharat)
author img

By ETV Bharat Karnataka Team

Published : Jun 5, 2024, 1:09 PM IST

Updated : Jun 5, 2024, 10:42 PM IST

ಉತ್ತರಕಾಶಿ: ಇಲ್ಲಿನ ಉತ್ತರಕಾಶಿ-ತೆಹ್ರಿ ಜಿಲ್ಲೆಯ ಗಡಿಯಲ್ಲಿರುವ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಸಾವನ್ನಪ್ಪಿದ್ದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಐವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರೂ ಕರ್ನಾಟಕದವರು ಆಗಿದ್ದಾರೆ. ನಾಪತ್ತೆಯಾದ ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಮದಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಲಾಗಿದೆ.

ಕರ್ನಾಟಕದ 18, ಮಹಾರಾಷ್ಟ್ರ ಒಬ್ಬ ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು 22 ಜನರ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರಿಂದ ಹಿಮದಲ್ಲಿ ಸಿಲುಕಿ ಐದು ಮಂದಿ ಅಸುನೀಗಿದ್ದಾಗಿ ವರದಿಯಾಗಿದೆ.

22 ಸದಸ್ಯರ ಟ್ರೆಕ್ಕಿಂಗ್ ತಂಡವು ಮೇ 29ರಂದು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಮುಖಾಂತರವಾಗಿ ಮಲ್ಲ-ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರತಾಲ್​ಗೆ ಟ್ರೆಕ್ಕಿಂಗ್​ಗೆ ತೆರಳಿತ್ತು. ಈ ತಂಡವು ಜೂನ್​ 7ರೊಳಗೆ ಹಿಂತಿರುಗಬೇಕಿತ್ತು. ಟ್ರೆಕ್ಕಿಂಗ್​ ತಂಡ ಮಂಗಳವಾರ ಸಹಸ್ತ್ರತಾಲ್​ಗೆ ಹಿಂತಿರುಗಿದ್ದ ವೇಳೆ ಹಠಾತ್ ಹವಾಮಾನ ಬದಲಾಗಿಯಾಗಿದೆ. ದಟ್ಟವಾದ ಮಂಜು ಮತ್ತು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಚಾರಣಿಗರು ಇಡೀ ರಾತ್ರಿ ಚಳಿಯಲ್ಲಿ ಸಿಲುಕಿಕೊಂಡಿದ್ದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡ 2 ಗುಂಪುಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಮೂವರು ಸದಸ್ಯರ ತಂಡವನ್ನು ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್​ ಮೂಲಕ ರಕ್ಷಣೆಗಾಗಿ ಕಳುಹಿಸಿತ್ತು. ಈ ತಂಡವು 11 ಜನರನ್ನು ರಕ್ಷಣೆ ಮಾಡಿ ಡೆಹರಾಡೂನ್​ನ ಆಸ್ಪತ್ರೆಗೆ ಸಾಗಿಸಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಸಾವನ್ನಪ್ಪಿದವರ ಗುರುತು ಪತ್ತೆ: ಮೃತರನ್ನು ಆಶಾ ಸುಧಾಕರ್​ (71), ಸಿಂಧು (45), ಸುಜಾತ (51), ವಿನಾಯಕ್ (54), ಚಿತ್ರಾ ಪರಿಣೀತ್ (48) ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಮೃತದೇಹಗಳಿಗೆ ಹುಡುಕಾಟ ನಡೆದಿದೆ.

ರಕ್ಷಣೆ ಆದವರು; ವಿ.ಎಸ್. ಜಯಪ್ರಕಾಶ್ (61), ವಿ.ಭರತ್ (53), ಅನಿಲ್ ಭಟ್​ (52), ಮಧುಕಿರಣ್ ರೆಡ್ಡಿ (52), ಶೀನಾ ಲಕ್ಷ್ಮಿ (48) ಶೌಮ್ಯಾ ಕೆ (31), ಶಿವ ಜ್ಯೋತಿ(45), ಎಂ.ಕೆ.ವಿನಾಯಕ್ (47), ಶ್ರೀರಾಮಲು ಸುಧಾಕರ್ (64), ವಿವೇಕ ಶ್ರೀಧರ್ (37), ಮಹಾರಾಷ್ಟ್ರದ ಸ್ಮೂರ್ತಿ (45) ಅವರನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಭಾರಿ ಮಳೆ; 10 ಮಂದಿ ಸಾವು, ಐವರು ನಾಪತ್ತೆ - heavy rains in Sri Lanka

Last Updated : Jun 5, 2024, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.