ತಿರುವನಂತಪುರಂ: ಕೇರಳದಲ್ಲಿ ದೇಗುಲಗಳ ಪೂಜೆ ಸೇರಿದಂತೆ ಯಾವುದೇ ಪವಿತ್ರ ಆಚರಣೆಯಲ್ಲಿ ಕಣಗಲೆ ಹೂವಿನ ಬಳಕೆ ನಿಷೇಧಿಸಿ, ಕೇರಳದ ಎರಡು ಪ್ರಮುಖ ದೇಗುಲ ಮಂಡಳಿಗಳು ನಿರ್ಧಾರ ತೆಗೆದುಕೊಂಡಿವೆ.
ಕೇರಳದ ಬಹುತೇಕ ದೇಗುಲಗಳ ನಿರ್ವಹಣೆ ಮಾಡುವ ಟ್ರವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಮಲಬಾರ್ ದೇವಸ್ವಂ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಹೂವಿನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಇದು ಮನುಷ್ಯರು ಮತ್ತು ಪ್ರಾಣಿಗಳಿಗೆ ಹಾನಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಕಣಗಲೆ ಹೂವನ್ನು ಪೂಜೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಎರಡು ಮಂಡಳಿಗಳ ಅಡಿ ಕಾರ್ಯ ನಿರ್ವಹಿಸುವ ಎಲ್ಲ ದೇಗುಲದಲ್ಲಿ ದೇವರ ನೈವೇದ್ಯ ಸೇರಿದಂತೆ ಪ್ರಸಾದದಲ್ಲಿ ಸಂಪೂರ್ಣವಾಗಿ ಕಣಗಲೆ ಹೂವಿನ ಬಳಕೆ ನಿಷೇಧಿಸಿಸಲು ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದ ಆಚರಣೆಗಳಲ್ಲಿ ಈ ಕಣಗಲೆ ಹೂವಿನ ಬದಲಾಗಿ, ತುಳಸಿ, ಮಲ್ಲಿಗೆ, ಧಾಸವಾಳ, ಗುಲಾಬಿ ಬಳಕೆ ಮಾಡಲಾಗುವುದು. ಈ ಕುರಿತು ಮಂಡಳಿಯ ಸಭೆಯಲ್ಲಿ ನಿರ್ಧಾರ ನಡೆಸಲಾಗಿದೆ ಎಂದು ಟಿಡಿಎಸ್ನ ಅಧ್ಯಕ್ಷ ಪಿಎಸ್ ಪ್ರಶಾಂತ್ ತಿಳಿಸಿದ್ದಾರೆ.
ಭಕ್ತರು ಕಣಗಲೆಯ ಬದಲಾಗಿ ತುಳಸಿಯನ್ನು ದೇವರಿಗೆ ಅರ್ಪಿಸಬಹುದಾಗಿದೆ. ತೆಚಿ ಮತ್ತು ಗುಲಾಬಿ ಹೂವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು. ಈ ನಿರ್ಧಾರದ ಮೂಲಕ ದೇಗುಲದಿಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ಕಣಗಲೆ ಹೂವು ನೇರವಾಗಿ ತಲುಪುವುದನ್ನು ತಪ್ಪಿಸಲಾಗುವುದು.
ಕಣಗಲೆ ಹೂವನ್ನು ದೇಗುಲಗಳ ಆಚರಣೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವುದಿಲ್ಲ. ಆದರೆ, ಭಕ್ತರ ಸುರಕ್ಷತೆ ದೃಷ್ಟಿಯಿಂದ ಇದನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಅಧ್ಯಯನದಲ್ಲಿ ಕೂಡ ಈ ಹೂವಿನಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದೆ ಎಂದು ಎಂಡಿಪಿ ಅಧ್ಯಕ್ಷ ಎಂ ಆರ್ ಮುರಳಿ ತಿಳಿಸಿದ್ದಾರೆ.
ಟಿಡಿಬಿ ತಿರುವಾಂಕೂರುನಲ್ಲಿ 1,248 ದೇಗುಲಗಳ ನಿರ್ವಹಣೆ ಮಾಡುತ್ತದೆ. ಇನ್ನು ಎಂಡಿಪಿ ಅದರ ಆಡಳಿತದ ಅಡಿಯಲ್ಲಿ 1,400 ದೇಗುಲ ನಿರ್ವಹಣೆ ನಡೆಸುತ್ತಿದೆ. ಆಲಪ್ಪುಳಂನಲ್ಲಿನ ವಿದೇಶಕ್ಕೆ ಉದ್ಯೋಗ ಸೇರಲು ಹೋಗಬೇಕಿದ್ದ ಯುವತಿಯೊಬ್ಬಳು ಫೋನ್ನಲ್ಲಿ ಮಾತನಾಡುತ್ತಾ, ಕಣಗಲೆ ಹೂವು ಮತ್ತು ಎಲೆಗಳನ್ನು ಸೇವಿಸಿದ್ದಳು. ಆಕೆ ವಿಮಾನ ನಿಲ್ದಾಣಕ್ಕೆ ಬಂದಾಗ ಅಸ್ವಸ್ಥಳಾಗಿ ಸಾವನ್ನಪ್ಪಿದಳು. ಆಕೆಯ ಸಾವಿಗೆ ಕಣಗಲೆ ಹೂವು ಸೇವನೆ ಕಾರಣ ಎಂಬುದು ಬಹಿರಂಗವಾಗಿದೆ. ಈ ಬೆನ್ನಲ್ಲೇ ಟಿಡಿಬಿ ಮತ್ತು ಎಂಡಿಬಿ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಚಾರ್ಧಾಮ್ ಯಾತ್ರೆ ಆರಂಭ: ಕೇದಾರನಾಥ ದೇವಾಲಯದ ಬಾಗಿಲು ಓಪನ್