ETV Bharat / bharat

ಮಹಾ ಕುಂಭಕ್ಕಾಗಿ 2,000 ಕಿ.ಮೀ ಬೈಕ್​ನಲ್ಲಿ ಪ್ರಯಾಣಿಸಲಿರುವ ಬುಲೆಟ್​ ರಾಣಿ - BULLET RANI

ಬುಲೆಟ್​ ರಾಣಿ ಮಹಾ ಕುಂಭಕ್ಕೆ ಬೈಕ್​ನಲ್ಲಿ ಸಾಗಿದ್ದು, ಈ ವೇಳೆ ಅವರು ಜ್ಯೋತಿರ್ಲಿಂಗ ಮತ್ತು ಸನಾತನ ಧರ್ಮದ ಪ್ರಾಮುಖ್ಯತೆಯನ್ನು ಹರಡುತ್ತಿದ್ದಾರೆ.

tamil-nadus-bullet-rani-on-way-to-maha-kumbh-travelling-2000-km-across-36-dists
ಬುಲೆಟ್​ ರಾಣಿ (ETV Bharat)
author img

By ETV Bharat Karnataka Team

Published : Jan 20, 2025, 4:47 PM IST

ಕಾನ್ಪುರ್​ (ಉತ್ತರ ಪ್ರದೇಶ)​ : ಮಹಾಕುಂಭ ಮೇಳ ಮತ್ತು ಭಾರತೀಯ ಸಂಸ್ಕೃತಿಯ ಪ್ರಾಮುಖ್ಯತೆ ಸಾರುವ ಉದ್ದೇಶದಿಂದ ತಮಿಳುನಾಡು ಮೂಲದ ಬುಲೆಟ್​ ರಾಣಿ ಎಂದೇ ಖ್ಯಾತಿ ಪಡೆದಿರುವ ಮಹಿಳೆ ಪ್ರಯಾಗ್​ರಾಜ್​ವರೆಗೆ ಬುಲೆಟ್​ನಲ್ಲಿ ಪ್ರಯಾಣ ಬೆಳೆಸಿದ್ದು, ಭಾನುವಾರ ಅವರು ತಮ್ಮ ರಾಯಲ್​ ಎನ್​​ಫೀಲ್ಡ್​​ ಬೈಕ್​ನಲ್ಲಿ ಕಾನ್ಪುರಕ್ಕೆ ಬಂದು ತಲುಪಿದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಈ ಕುರಿತು ಮಾತನಾಡಿರುವ ಬುಲೆಟ್​​ ರಾಣಿ ಅಲಿಯಾಸ್​ ರಾಜಿಲಕ್ಷ್ಮೀ, ಜನವರಿ 9ರಂದು ಭದೋಹಿಯಿಂದ ಪ್ರಯಾಣವನ್ನು ಆರಂಭಿಸಿದೆ. 22 ದಿನದ ಈ ಪ್ರಯಾಣ ತ್ರಿವೇಣಿ ಸಂಗಮದಲ್ಲಿ ಮುಕ್ತಾಯವಾಗಲಿದೆ. ಈ ಪ್ರಯಾಣ 36 ಜಿಲ್ಲೆಗಳಲ್ಲಿ ಸಾಗಿದ್ದು, 2,000 ಕಿ.ಮೀ ದೂರ ಎಂದಿದ್ದಾರೆ.

ಈ ಐತಿಹಾಸಿಕ ಹಬ್ಬದಲ್ಲಿ ಭಾಗಿಯಾಗಲು ಅತಿ ಹೆಚ್ಚಿನ ಜನರು ಪ್ರಯಾಗ್​​ರಾಜ್​ಗೆ ಆಗಮಿಸಬೇಕು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೇಳಿ ಶುದ್ಧರಾಗಬೇಕು ಎಂದು ಇಡೀ ದೇಶದ ಜನರಿಗೆ ನಾನು ತಿಳಿಸುತ್ತೇನೆ ಎಂದರು.

ರಾಜಿಲಕ್ಷ್ಮೀ ತಮಿಳುನಾಡಿನ ಮಧುರೈ ಮೂಲದವರಾಗಿದ್ದು, ಭದೋಹಿಯ ಸುಂದರ್​ಬನ್​ನಲ್ಲಿ ವಾಸವಾಗಿದ್ದಾರೆ. ಇವರು ತನ್ನನ್ನು ಸನ್ಯಾಸಿ ಎಂದು ಕರೆದುಕೊಂಡಿದ್ದು, ಭದೋಹಿಯಲ್ಲಿನ ರಾಮ್​ ಜಾನಕಿ ಮಂದಿರ ಆಶ್ರಮದಲ್ಲಿ 180 ಅಡಿ ತಾಮ್ರದ ಶಿವಲಿಂಗ ಸ್ಥಾಪಿಸಿದ್ದಾರೆ.

ಬುಲೆಟ್​ ರಾಣಿ ಮಹಾ ಕುಂಭಕ್ಕೆ ಬೈಕ್​ನಲ್ಲಿ ಸಾಗಿದ್ದು, ಈ ವೇಳೆ ಅವರು ಜ್ಯೋತಿರ್ಲಿಂಗ ಮತ್ತು ಸನಾತನ ಧರ್ಮದ ಪ್ರಾಮುಖ್ಯತೆ ಕುರಿತು ಪ್ರಚುರ ಪಡಿಸುತ್ತಾರೆ. ವಾರಣಾಸಿ, ಗಾಜಿಪುರ, ಅಯೋಧ್ಯೆ, ಲಕ್ನೋ, ಮೊರದಾಬಾದ್​, ದೆಹಲಿ, ಮಥುರಾ, ಇಟಾವಾ ಮತ್ತು ಚಿತ್ರ​ಕೂಟ್​ ಮೂಲಕ ಇವರು ಪ್ರಯಾಗ್​ರಾಜ್​ ತಲುಪಿದ್ದಾರೆ.

ಕಾನ್ಫುರದಲ್ಲಿ ಸಣ್ಣ ವಿರಾಮ ಪಡೆದ ಅವರು ಬಳಿಕ ಚಿತ್ರಕೂಟ್​ ತಲುಪಿದರು. ನಾನು ನಂಬಿಕೆ ಮತ್ತು ಸಂಸ್ಕೃತಿ ಉಳಿವಿಗಾಗಿ ಮಹಾ ಕುಂಭಕ್ಕೆ ಹೋಗುತ್ತಿದ್ದೇನೆ, ಪ್ರತಿಯೊಬ್ಬರು ಪ್ರಯಾಗ್​ರಾಜ್​ಗೆ ಹೋಗಿ ಪವಿತ್ರ ನೀರಿನ ಸ್ನಾನ ಮಾಡಬೇಕು ಎಂದರು.

ಸನಾತನ ಮಂಡಳಿ ಸ್ಥಾಪನೆ ಮಾಡಬೇಕು ಎನ್ನುವ ಬುಲೆಟ್​ ರಾಣಿ, ನಮ್ಮ ಸಂಸ್ಕೃತಿ, ದೇಗುಲ ಮತ್ತು ಸನಾತನ ಧರ್ಮ ಉಳಿಸುವುದು ಅತ್ಯಂತ ಅವಶ್ಯಕ. ಇದಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಇದಕ್ಕಾಗಿ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.

ಬುಲೆಟ್​ ರಾಣಿ ಅನೇಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಬರೆದಿದ್ದಾರೆ. 2016ರಲ್ಲಿ ಇವರು 9 ಟನ್​ ತೂಕದ ಟ್ರಕ್​ ಎಳೆದಿದ್ದರು. ಆರು ಟನ್ ತೂಕವನ್ನು ಹಲ್ಲು ಮತ್ತು ಐದು ಟನ್ ತೂಕವನ್ನು ಕೂದಲಿನಿಂದ ಎಳೆಯುವ ಮೂಲಕ ಮೂಲಕ ಗಿನ್ನಿಸ್​ ಬುಕ್​ನಲ್ಲಿ ದಾಖಲೆ ಬರೆದಿದ್ದಾರೆ.

2022ರಲ್ಲಿ ಕೂಡ ಇವರು 9 ಟನ್​ ತೂಕದ 9 ಅಡಿ ಉದ್ದದ ಶಿವಲಿಂಗ ಹೊಂದಿದ ಟ್ರಕ್​ ಎಳೆದಿದ್ದರು. ಬಧೋಹಿಯಲ್ಲಿ ಶಿವಲಿಂಗ ಸ್ಥಾಪನೆಗೆ ಮುನ್ನ 12 ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ್ದರು. 2024ರಲ್ಲಿ 21 ಸಾವಿರ ಕಿ.ಮೀ ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಹಾ ಕುಂಭ: 100ಕ್ಕೂ ಹೆಚ್ಚು ನಾಗ ಸನ್ಯಾಸಿನಿಯರಿಗೆ ದೀಕ್ಷೆ ಪ್ರಕ್ರಿಯೆ: 3 ವಿದೇಶಿ ಮಹಿಳೆಯರಿಗೂ ದೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.