ನವದೆಹಲಿ: ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗೆಗಿನ ಘೋಷಣೆಯ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಗಂಭೀರವಾದ ಮತ್ತೊಂದು ಆರೋಪ ಮಾಡಿದ್ದಾರೆ. ಇಂದು ಕೂಡ ಅತಿಶಿ ಪೋಷಕರ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.
आतिशी मर्लेना के माता पिता के SAR Geelani के साथ गहरे संबंध थे।
— Swati Maliwal (@SwatiJaiHind) September 18, 2024
गिलानी पे आरोप थे कि संसद पे हमले में उनका भी हाथ था। 2016 में उन्होंने अफ़ज़ल गुरु की याद में दिल्ली के प्रेस क्लब में एक प्रोग्राम किया था। उस प्रोग्राम में आतिशी मर्लेना के माता पिता स्टेज पे गिलानी के साथ थे।… pic.twitter.com/BWmUN7fMJd
ಸಾಮಾಜಿಕ ಮಾಧ್ಯಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದಾರೆ. 'ಅತಿಶಿ ಮರ್ಲೆನಾ ಅವರ ಪೋಷಕರು ಎಸ್‌ಎಆರ್ ಗಿಲಾನಿ ಅವರೊಂದಿಗೆ ಆಳವಾದ ಸಂಬಂಧ ಹೊಂದಿದ್ದರು. ಸಂಸತ್ತಿನ ಮೇಲಿನ ದಾಳಿಯಲ್ಲಿ ಗಿಲಾನಿ ಕೈವಾಡವಿದೆ ಎಂಬ ಆರೋಪಗಳಿದ್ದವು ಎಂಬ ಅಂಶವನ್ನು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಮಲಿವಾಲ್ ಎಕ್ಸ್ ಹ್ಯಾಂಡಲ್ನಲ್ಲಿ ಹೇಳಿರುವುದಿಷ್ಟು: 2016ರಲ್ಲಿ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಅಫ್ಜಲ್ ಗುರು ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಅತಿಶಿಯ ಪೋಷಕರು ಗಿಲಾನಿಯೊಂದಿಗೆ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದಲ್ಲಿ “ಒಬ್ಬ ಅಫ್ಜಲ್‌ನನ್ನು ಕೊಂದರೆ ಲಕ್ಷ ಜನ ಹುಟ್ಟುತ್ತಾರೆ, ಕಾಶ್ಮೀರ ಸ್ವಾತಂತ್ರ್ಯ ಬೇಡುತ್ತದೆ” ಎಂಬ ಘೋಷವಾಕ್ಯಗಳನ್ನು ಹಾಕಲಾಗಿತ್ತು ಎಂದು ಅವರು ತಮ್ಮ ಎಕ್ಸ್ ಹ್ಯಾಂಡಲ್ ಬರಹದಲ್ಲಿ ಹೇಳಿದ್ದಾರೆ. ತಮ್ಮ ಟ್ವೀಟ್ನ ಕೊನೆಯಲ್ಲಿ 'ದೇವರೇ ದೆಹಲಿಯನ್ನು ಕಾಪಾಡು!' ಎಂದು ಕೂಡಾ ಬರೆದುಕೊಂಡಿದ್ದಾರೆ.
"ಇಂದು ದೆಹಲಿಗೆ ಅತ್ಯಂತ ದುಃಖದ ದಿನ, ಮಹಿಳೆಯೊಬ್ಬರು ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಆದರೆ ಅವರ ಕುಟುಂಬವು ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣುಗಂಬದಿಂದ ರಕ್ಷಿಸಲು ಸುದೀರ್ಘ ಹೋರಾಟ ನಡೆಸಿತ್ತು. ಆಕೆಯ ಪೋಷಕರು ಭಯೋತ್ಪಾದಕ ಅಫ್ಜಲ್ ಗುರುವನ್ನು ರಕ್ಷಿಸುವಂತೆ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು. ಅತಿಶಿ ಪೋಷಕರ ಪ್ರಕಾರ, ಅಫ್ಜಲ್ ಗುರುವನ್ನು ರಾಜಕೀಯ ಪಿತೂರಿಯಲ್ಲಿ ಸಿಲುಕಿಸಲಾಗಿದೆ, ಆದರೆ ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದೆ! ” ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಎಎಪಿ ಕೊಟ್ಟ ಕೌಂಟರ್ ಹೀಗಿದೆ: ಮಲಿವಾಲ್ ಈ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ಶಾಸಕ ದಿಲೀಪ್ ಪಾಂಡೆ, ಸ್ವಾತಿ ಮಲಿವಾಲ್ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆ ಹೋಗಿದ್ದಾರೆ. ಆದರೆ ಬಿಜೆಪಿಯ ಸ್ಕ್ರಿಪ್ಟ್ ಓದುತ್ತಿದ್ದಾರೆ. ಅವರು ಈಗ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಪಡೆಯಲು ಪ್ರಯತ್ನಿಸಬೇಕಿದೆ. ಅವರಿಗೆ ಸ್ವಲ್ಪವಾದರೂ ನಾಚಿಕೆ ಮತ್ತು ನೈತಿಕತೆ ಅನ್ನುವುದು ಉಳಿದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.