ETV Bharat / bharat

ಬಿಜೆಪಿ ಸೇರ್ಪಡೆ ಊಹಾಪೋಹ: ಕಮಲ್​ನಾಥ್​ ನಿಷ್ಠ ಶಾಸಕರು ದೆಹಲಿಗೆ ಆಗಮನ - ಕಮಲ್​ನಾಥ್​

ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ನಿಷ್ಠರಾಗಿರುವ ಹಲವಾರು ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Kamal Nath
Kamal Nath
author img

By PTI

Published : Feb 18, 2024, 3:15 PM IST

ಭೋಪಾಲ್ : ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಅವರು ಆಡಳಿತಾರೂಢ ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಕಮಲ್ ನಾಥ್ ಅವರಿಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಸುಮಾರು ಅರ್ಧ ಡಜನ್ ಶಾಸಕರು ಭಾನುವಾರ ದೆಹಲಿಗೆ ತಲುಪಿರುವುದು ಕುತೂಹಲ ಮೂಡಿಸಿದೆ. ಈ ಶಾಸಕರ ಪೈಕಿ ಮೂವರು ಚಿಂದ್ವಾರದವರಾಗಿದ್ದಾರೆ ಎಂದು ಕಮಲನಾಥ್ ಅವರ ಆಪ್ತ ಮೂಲಗಳು ತಿಳಿಸಿವೆ.

ಈ ಶಾಸಕರು ಯಾವುದೇ ಕರೆಗಳಿಗೆ ಉತ್ತರಿಸುತ್ತಿಲ್ಲ ಮತ್ತು ಕಮಲ್ ನಾಥ್ ನಿಷ್ಠಾವಂತ ಹಾಗೂ ಮಾಜಿ ರಾಜ್ಯ ಸಚಿವ ಲಖನ್ ಘಂಗೋರಿಯಾ ಕೂಡ ದೆಹಲಿಯಲ್ಲಿ ಅವರೊಂದಿಗಿದ್ದಾರೆ ಎಂದು ಕಾಂಗ್ರೆಸ್​ನ ಆಂತರಿಕ ಮೂಲಗಳು ಹೇಳಿವೆ.

ಮಧ್ಯಪ್ರದೇಶದ ಮಾಜಿ ಸಚಿವ ಮತ್ತು ಕಮಲ್ ನಾಥ್ ನಿಷ್ಠಾವಂತ ದೀಪಕ್ ಸಕ್ಸೇನಾ ಚಿಂದ್ವಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಸೋಲಿನ ನಂತರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ರೀತಿಯಿಂದ ತಮಗೆ ನೋವಾಗಿದೆ ಎಂದು ಹೇಳಿದರು.

"ಹಿರಿಯ ನಾಯಕನಿಗೆ ಸಲ್ಲಬೇಕಾದ ಗೌರವ ಸಿಗಬೇಕೆಂದು ಎಂದು ನಾವು ಬಯಸುತ್ತೇವೆ. ಕಮಲನಾಥ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರೊಂದಿಗೆ ಇರುತ್ತೇವೆ" ಎಂದು ಸಕ್ಸೇನಾ ಹೇಳಿದರು.

ನಾಥ್ ಅವರ ಮತ್ತೊಬ್ಬ ನಿಷ್ಠಾವಂತ, ಮಾಜಿ ರಾಜ್ಯ ಸಚಿವ ವಿಕ್ರಮ್ ವರ್ಮಾ ಅವರು ತಮ್ಮ ಎಕ್ಸ್ ಪ್ರೊಫೈಲ್​ನಲ್ಲಿ 'ಜೈ ಶ್ರೀ ರಾಮ್' ಎಂದು ಬರೆದಿದ್ದಾರೆ.

ಪಕ್ಷಾಂತರ ವಿರೋಧಿ ಕಾನೂನಿನ ಕುಣಿಕೆಯಿಂದ ಪಾರಾಗಲು 23 ಶಾಸಕರ ಬೆಂಬಲ ಪಡೆಯಲು ಕಮಲ್ ನಾಥ್ ಬಣ ಪ್ರಯತ್ನಿಸುತ್ತಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. 230 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ 66 ಸ್ಥಾನಗಳನ್ನು ಹೊಂದಿದೆ. ಒಂದು ವೇಳೆ ಮೂರನೇ ಒಂದು ಭಾಗದಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ವಕೀಲ ರಾಕೇಶ್ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.

ಚಿಂದ್ವಾರಾದಿಂದ ಒಂಬತ್ತು ಬಾರಿ ಸಂಸದ ಮತ್ತು ಪ್ರಸ್ತುತ ಇದೇ ಕ್ಷೇತ್ರದಲ್ಲಿ ಶಾಸಕರಾಗಿರುವ ಕಮಲ್ ನಾಥ್ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ನವೆಂಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಕಳಪೆ ಪ್ರದರ್ಶನದ ನಂತರ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ಮಾರ್ಚ್ 2020 ರಲ್ಲಿ ಮತ್ತೊಬ್ಬ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ನಿಷ್ಠಾವಂತ ಹಲವಾರು ಶಾಸಕರು ಬಿಜೆಪಿಗೆ ಸೇರಿದ್ದರಿಂದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು.

ಇದನ್ನೂ ಓದಿ : 'ಪ್ರತಿಪಕ್ಷಗಳ ಹತಾಶೆ, ಬಿಜೆಪಿಯೇ ಭರವಸೆ': I.N.D.I.A ಮೈತ್ರಿಕೂಟದ ವಿರುದ್ಧ ಅಮಿತ್ ಶಾ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.