ETV Bharat / bharat

ತಾಯಿಯ ಪಕ್ಕದಲ್ಲಿ ಮಲಗಿದ್ದ 6ರ ಬಾಲಕಿ ಹೊತ್ತೊಯ್ದು ಅತ್ಯಾಚಾರ, ಕೊಲೆ: ವಲಸೆ ಕಾರ್ಮಿಕನ ಸೆರೆ - GIRL RAPE AND MURDER - GIRL RAPE AND MURDER

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಬಿಹಾರ ಮೂಲದ ಕಾರ್ಮಿಕನೋರ್ವ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

Representative image
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jun 15, 2024, 1:23 PM IST

ಪೆದ್ದಪಲ್ಲಿ (ತೆಲಂಗಾಣ): ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕೃತ್ಯ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ತಾಯಿಯ ಪಕ್ಕದಲ್ಲಿ ಮಲಗಿದ್ದ ಬಾಲಕಿಯನ್ನು ರಾತ್ರಿಯಲ್ಲಿ ದುರುಳರು ಹೊತ್ತೊಯ್ದು ಈ ನೀಚ ಕೃತ್ಯ ಎಸಗಿದ್ದಾರೆ. ಬಾಲಕಿಯನ್ನು ಆರೋಪಿ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇಲ್ಲಿನ ಸುಲ್ತಾನಾಬಾದ್ ಮಂಡಲದ ವ್ಯಾಪ್ತಿಯಲ್ಲಿ ಗುರುವಾರ ಮಧ್ಯರಾತ್ರಿ ಈ ಘಟನೆ ಜರುಗಿದೆ. ರೈಸ್​​​​ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವಿನೋದ್ ಮಾಜೆ (28) ಎಂಬಾತ ಈ ಹೀನ ಕೃತ್ಯ ಎಸಗಿದ್ದಾನೆ. ಈತನನ್ನು ಈಗಾಗಲೇ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕಾಮುಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೆದ್ದಪಲ್ಲಿ ಎಸಿಪಿ ಕೃಷ್ಣ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ತಿಂಗಳ ಹಿಂದೆ ರೈಸ್ ಮಿಲ್​ವೊಂದರಲ್ಲಿ ಹಮಾಲಿ ಕೆಲಸಕ್ಕೆ ಸೇರಿದ್ದರು. ಇವರಿಗೆ ಆರು ವರ್ಷ ಮತ್ತು ಏಳು ತಿಂಗಳ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಗುರುವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶೆಡ್‌ನ ಹೊರಭಾಗದ ಶೀಟ್‌ಗಳ ಕೆಳಗೆ ದಂಪತಿ ಮಕ್ಕಳೊಂದಿಗೆ ಮಲಗಿದ್ದರು. ಈ ವೇಳೆ, ರಾತ್ರಿ 11.30ರ ಸುಮಾರಿಗೆ ತಾಯಿ ಎದ್ದು ನೋಡಿದಾಗ ಪಕ್ಕದಲ್ಲಿ ಇರಬೇಕಿದ್ದ ಹಿರಿಯ ಮಗಳು ಕಾಣಿಕೊಂಡಿಲ್ಲ. ಹೀಗಾಗಿ ಪತಿಯನ್ನು ಎಚ್ಚರಿಸಿದ್ದಾರೆ.

ಇದಾದ ಬಳಿಕ ಮಿಲ್​ನ ಕಾರ್ಮಿಕರು, ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ, ಸುಲ್ತಾನಾಬಾದ್ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಕಾರ್ಮಿಕರು ಹಾಗೂ ಪೊಲೀಸರು ಮಿಲ್​ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಡೀ ರಾತ್ರಿ ಶೋಧ ನಡೆಸಿದ್ದಾರೆ. ಆದರೆ, ಕತ್ತಲಾಗಿದ್ದ ಕಾರಣ ಬಾಲಕಿ ಪತ್ತೆಯಾಗಿರಲಿಲ್ಲ. ಬಳಿಕ ಮಿಲ್​ ಮಾಲೀಕರು ಹಾಗೂ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಪೋಷಕರು ಮಲಗಿದ್ದ ಶೆಡ್ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕಿಯನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಹೀಗಾಗಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಮಗುವಿನ ತಂದೆ ಮತ್ತೊಂದು ರೈಸ್​ ಮಿಲ್​ ಹಿಂಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಪೊದೆಯಲ್ಲಿ ಮಡುವಿನಲ್ಲಿ ಬಾಲಕಿ ಬಿದ್ದಿದ್ದು ಪತ್ತೆಯಾಗಿದೆ. ಬಾಲಕಿಯ ಮೇಲೆ ದೌರ್ಜನ್ಯ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುಷ್ಕೃತ್ಯ ಎಸಗಿದ್ದ ಆರೋಪಿ ವಿನೋದ್ ಮಜೆ ತನಗೆ ಏನೂ ಗೊತ್ತಿಲ್ಲ ಎಂಬಂತಿದ್ದ. ಶುಕ್ರವಾರ ಬೆಳಗ್ಗೆ ಮಿಲ್​ ಆವರಣದಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಹೋಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆಗ ಆತ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ಬಂಧಿಸಲಾಗಿದೆ. ಈ ಆರೋಪಿಗೆ ಈಗಾಗಲೇ ಮದುವೆಯಾಗಿದೆ. ಪತ್ನಿ ಮತ್ತು ಮೂವರು ಮಕ್ಕಳು ಬಿಹಾರದಲ್ಲಿದ್ದಾರೆ. ಹತ್ತು ದಿನಗಳ ಹಿಂದೆ ಒಬ್ಬನೇ ಬಂದು ಮತ್ತೊಂದು ಮಿಲ್​ನಲ್ಲಿ ಹಮಾಲಿ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: ಮದುವೆ ನೆಪದಲ್ಲಿ ಅತ್ಯಾಚಾರ, ಅಪ್ರಾಪ್ತೆ ಗರ್ಭಿಣಿ; ಮಂಗಳೂರಲ್ಲಿ ಮೂರು ಪ್ರತ್ಯೇಕ ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.