ETV Bharat / bharat

ಆರ್ಥಿಕ ಸಮೀಕ್ಷೆ: ನವಭಾರತಕ್ಕಾಗಿ 6 ಮಂತ್ರಗಳು, ಎಫ್​​ಡಿಐ ಹೆಚ್ಚಳ ಗುರಿ, ಬ್ಯಾಂಕಿಂಗ್​, ಷೇರು ಮಾರುಕಟ್ಟೆ ಬಲವರ್ಧನೆ - Economic Survey key points - ECONOMIC SURVEY KEY POINTS

ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿಯ ಮಂಡಿಸಲಾಗಿದ್ದು, ಇದು ಕೇಂದ್ರ ಬಜೆಟ್​ನ ದಿಕ್ಸೂಚಿಯಾಗಿದೆ. ದೇಶದ ಅಭಿವೃದ್ಧಿಯ ಬೆಳವಣಿಗೆಯನ್ನು ಇದು ಸಾಕ್ಷೀಕರಿಸುತ್ತದೆ.

ಆರ್ಥಿಕ ಸಮೀಕ್ಷೆ
ಆರ್ಥಿಕ ಸಮೀಕ್ಷೆ (ETV Bharat)
author img

By ETV Bharat Karnataka Team

Published : Jul 22, 2024, 4:13 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2047 ರ ನವಭಾರತ ಗುರಿಯನ್ನು ಪ್ರಸ್ತಾಪಿಸಿದ್ದಾರೆ. ಸತತ ಮೂರನೇ ವರ್ಷವೂ ಶೇಕಡಾ 7 ರಷ್ಟು ಜಿಡಿಪಿ ದರದ ಬೆಳವಣಿಗೆ, 5.4ಕ್ಕೆ ಹಣದುಬ್ಬರ ಇಳಿಕೆಯಾಗಿದೆ ಎಂಬ ಅಂಶಗಳು ಇದರಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್​ ಅನ್ನು ನಿರ್ಮಲಾ ಅವರು ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಸೋಮವಾರ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಕೆಲ ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ.

ನವಭಾರತಕ್ಕಾಗಿ 6 ಮಂತ್ರಗಳು: ನವ ಭಾರತಕ್ಕಾಗಿ ಸರ್ಕಾರವು ಹೊಸ ಅಭಿವೃದ್ಧಿ ವಿಧಾನ ಅಳವಡಿಸಿಕೊಳ್ಳಬೇಕು ಎಂಬುದನ್ನ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಅಭಿವೃದ್ಧಿ ದೆಸೆಯಲ್ಲಿ ಯೋಚಿಸುವ ಸರ್ಕಾರವು ಕೆಳ ಮತ್ತು ಮೇಲಿನ ​ಸ್ಥರದ ಸುಧಾರಣೆಗೆ ಒತ್ತು ನೀಡಬೇಕು. ಇವು ರಚನಾತ್ಮಕ ಸುಧಾರಣೆಗಳು, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ನೀಡುತ್ತವೆ. ಅವುಗಳಲ್ಲಿ ಈ ಆರು ಕ್ಷೇತ್ರಗಳು ಪ್ರಮುಖವಾಗಿವೆ.

  • ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು.
  • ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ, ವಿಸ್ತರಣೆ ಹೆಚ್ಚಿಸುವುದು.
  • ಭವಿಷ್ಯದ ಬೆಳವಣಿಗೆಗೆ ಕೃಷಿ ಕ್ಷೇತ್ರ ಮೂಲಾಧಾರ. ಅದಕ್ಕಿರುವ ಸಮಸ್ಯೆಗಳ ನಿವಾರಣೆ.
  • ದೇಶದಲ್ಲಿ ಹಸಿರು ಕ್ರಾಂತಿಗೆ ಹಣಕಾಸಿನ ನೆರವು.
  • ಶಿಕ್ಷಣ-ಉದ್ಯೋಗದ ನಡುವಿನ ಅಂತರವನ್ನು ನಿವಾರಿಸಬೇಕು.
  • ದೇಶದ ಪ್ರಗತಿಯಲ್ಲಿ ರಾಜ್ಯಗಳ ಪಾಲಿದೆ. ರಾಜ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು

ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳ: ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು. ಕಳೆದ ಹಣಕಾಸು ವರ್ಷದಲ್ಲಿ ಎಫ್‌ಡಿಐ ಒಳಹರಿವು ಕಡಿಮೆಯಾಗಿದೆ. ದುರ್ಬಲಗೊಳ್ಳುತ್ತಿರುವ ಬೆಳವಣಿಗೆ ದರ, ಆರ್ಥಿಕ ಮುಗ್ಗಟ್ಟು, ವ್ಯಾಪಾರ, ಭೌಗೋಳಿಕ, ರಾಜಕೀಯ ಬಿಕ್ಕಟ್ಟುಗಳು, ಕೈಗಾರಿಕಾ ನೀತಿಗಳಿಂದ ಎಫ್​ಡಿಐ ಇಳಿಕೆಯಾಗಿದೆ. ಇದನ್ನು ಶೀಘ್ರವಾಗಿ ಹೆಚ್ಚಿಸಬೇಕು. 2024ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ 26.5 ಬಿಲಿಯನ್​​ ಡಾಲರ್​ ಎಫ್​ಡಿಐ ಹೂಡಿಕೆಯಾಗಿದೆ. 2023 ರಲ್ಲಿ ಇದು 42 ಬಿಲಿಯನ್​ ಡಾಲರ್​ ಇತ್ತು. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಗುರಿ ಹೊಂದಲಾಗಿದೆ.

ವಿದ್ಯುತ್​ ಸಾಮರ್ಥ್ಯ 2 ಪಟ್ಟು ಹೆಚ್ಚಳ ಅಗತ್ಯ : ಆರ್ಥಿಕ ಸಮೀಕ್ಷೆ ಪ್ರಕಾರ, ಅಭಿವೃದ್ಧಿಯ ಆದ್ಯತೆಗಳನ್ನು ಪೂರೈಸಲು 2047 ರ ವೇಳೆಗೆ ಭಾರತದ ಇಂಧನ ಸಾಮರ್ಥ್ಯ 2 ರಿಂದ 2.5 ಪಟ್ಟು ಹೆಚ್ಚಾಗುವ ಅಗತ್ಯವಿದೆ. ಇದಕ್ಕೆ ಸಂಪನ್ಮೂಲಗಳ ಕೊರತೆ ಇದ್ದರೂ, ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕತ್ವ ಸುಧಾರಣೆಯನ್ನು ಗಮನದಲ್ಲಿಟ್ಟಿಕೊಂಡು ಪರ್ಯಾಯ ಮಾರ್ಗಗಳಿಂದ ವಿದ್ಯುತ್​ ಸಾಮರ್ಥ್ಯವನ್ನ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.

ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆ ಹೆಚ್ಚಳದ ವಿಚಾರದಲ್ಲಿ ಭಾರತದ ಸಾಧನೆಯು ವಿಶ್ವಮಟ್ಟದಲ್ಲಿ ಉತ್ತಮವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಮೇ 31, 2024 ರ ಹೊತ್ತಿಗೆ ಪಳೆಯುಳಿಕೆಯೇತರ ಮೂಲಗಳಿಂದ ಪಡೆಯುವ ಇಂಧನ ಪಾಲನ್ನು ಶೇಕಡಾ 45.4 ಹೆಚ್ಚಿಸಲಾಗಿದೆ. 2005 ರಿಂದ 2019 ರ ನಡುವೆ ಇದು ಶೇಕಡಾ 33 ರಷ್ಟಿತ್ತು ಎಂದಿದೆ.

ಬ್ಯಾಂಕಿಂಗ್, ಹಣಕಾಸು ವಲಯದ ಬಲವರ್ಧನೆ: ಕಳೆದ ವರ್ಷಕ್ಕಿಂತ ಈ ಬಾರಿ ಹಣಕಾಸು ಮತ್ತು ಬ್ಯಾಂಕಿಂಗ್​ ವಲಯ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ ತಿಳಿಸಿದೆ. ಅದರ ಒಟ್ಟು ಮತ್ತು ನಿವ್ವಳ ಅನುತ್ಪಾದಕ ಆಸ್ತಿಗಳು (NPAs) ಕನಿಷ್ಠ ಮಟ್ಟ ತಲುಪಿವೆ. ಬ್ಯಾಂಕ್ ಆಸ್ತಿಗಳ ಗುಣಮಟ್ಟವು ಹೆಚ್ಚಿವೆ. ಬಂಡವಾಳ ಮಾರುಕಟ್ಟೆಲ್ಲಿ 2024 ರ ಹಣಕಾಸು ವರ್ಷದಲ್ಲಿ 10.9 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ. ಅಂದರೆ, ಇದು 2023 ರ ಹಣಕಾಸುವ ವರ್ಷಕ್ಕಿಂತ ಶೇಕಡಾ 29 ರಷ್ಟು ಸ್ಥಿರ ಬಂಡವಾಳ ಹೆಚ್ಚಳವಾಗಿದೆ.

ಷೇರು ಮಾರುಕಟ್ಟೆಯಲ್ಲಿ ಪ್ರಗತಿ: ಭಾರತೀಯ ಷೇರು ಮಾರುಕಟ್ಟೆಯು ಗಣನೀಯ ಪ್ರಗತಿಯಲ್ಲಿದೆ. ಭಾರತದ ಮಾರುಕಟ್ಟೆ ಬಂಡವಾಳೀಕರಣ ಮತ್ತು ಅದರ ಜಿಡಿಪಿ ಅನುಪಾತವು ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ಗುರಿ ಆಧರಿತ ವಿಧಾನ, ಮಾರುಕಟ್ಟೆ ಅಭಿವೃದ್ಧಿ, ಮೂಲಸೌಕರ್ಯ ಬಲಪಡಿಸುವಿಕೆ, ನಾವೀನ್ಯತೆ, ತಂತ್ರಜ್ಞಾನ, ಗ್ರಾಹಕ ಸುರಕ್ಷತೆ ಮತ್ತು ಆರ್ಥಿಕ ಜ್ಞಾನದ ಮೇಲೆ ಕೇಂದ್ರೀಕರಿಸಲಾಗಿದೆ. ನೇರ ಲಾಭ ಪಡೆಯಲು ಬ್ಯಾಂಕ್​ ಖಾತೆಗಳ ಬಳಕೆ, ರುಪೇ ಕಾರ್ಡ್‌ಗಳು ಮತ್ತು ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಒತ್ತು ನೀಡಲಾಗಿದೆ.

ಇದನ್ನೂ ಓದಿ: 2024-25ರ ಆರ್ಥಿಕ ಸಮೀಕ್ಷೆ ಮಂಡನೆ: ಶೇ 6.5ರಿಂದ 7ರಷ್ಟು ಜಿಡಿಪಿ ಬೆಳವಣಿಗೆ ಅಂದಾಜು - Economic Survey

ETV Bharat Logo

Copyright © 2025 Ushodaya Enterprises Pvt. Ltd., All Rights Reserved.