ಹೈದರಾಬಾದ್: ಮಹಿಳಾ ಹೆಡ್ ಕಾನ್ಸ್‌ಟೇಬಲ್ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಇಲ್ಲಿನ ಕಲೇಶ್ವರಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಎಸ್‌ಐ) ಭವಾನಿ ಸೇನ್ ಎಂಬಾತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಸಂತ್ರಸ್ತ ಮಹಿಳಾ ಹೆಡ್ಕಾನ್ಸ್ಟೇಬಲ್ ನೀಡಿದ ದೂರಿನನ್ವಯ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆಯ ವಿವರ: ಕಾಲೇಶ್ವರಂನ ಲಕ್ಷ್ಮೀ ಪಂಪ್ ಹೌಸ್ ಸಮೀಪದ ಹಳೆಯ ಪೊಲೀಸ್ ಠಾಣಾ ಪ್ರದೇಶದ ಕಟ್ಟಡದಲ್ಲಿ ಮಹಿಳಾ ಹೆಡ್ ಕಾನ್ಸ್‌ಟೇಬಲ್ ವಾಸವಿದ್ದರು. ಇದೇ ಕಟ್ಟಡದ ಎರಡನೇ ಮಹಡಿಯಲ್ಲಿ ಆರೋಪಿ ಎಸ್‌ಐ ಸೆನ್ ಕೂಡಾ ಇದ್ದರು. ಜೂನ್ 15ರಂದು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಮನೆ ಕದ ತಟ್ಟಿದ ಎಸ್‌ಐ, ಗನ್ ಪಾಯಿಂಟ್ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಘಟನೆಯನ್ನೂ ಯಾರಿಗೂ ತಿಳಿಸದಂತೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದಕ್ಕೂ 20 ದಿನಗಳ ಹಿಂದೆ ತನ್ನ ಕೊಠಡಿಗೆ ಕರೆದಿದ್ದ ಎಸ್‌ಐ, ಅತ್ಯಾಚಾರಕ್ಕೆ ಮುಂದಾಗಿದ್ದರು. ಇದರಿಂದ ಪಾರಾಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮೂವರು ಡಿಎಸ್ಪಿ ಮತ್ತು ಐವರು ಸಬ್‌ಇನ್ಸ್‌ಪೆಕ್ಟರ್‌ಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಎಸ್‌ಐ ಬಳಿಯಿದ್ದ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಗುರುವಾರ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಇದೀಗ ಕರೀಂನಗರ ಜೈಲಿನಲ್ಲಿದ್ದಾರೆ.
ಆರೋಪಿ ಎಸ್‌ಐ ಈ ಹಿಂದೆಯೂ ಮೂವರು ಮಹಿಳಾ ಕಾನ್ಸ್‌ಟೇಬಲ್‌ಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವಿದೆ. 2022ರಲ್ಲಿ ಪ್ರಕರಣ ದಾಖಲಾಗಿತ್ತು.
ಐಟಿ ಮತ್ತು ಕೈಗಾರಿಕಾ ಸಚಿವ ದುಡ್ಡಿಲ್ಲಾ ಶ್ರೀಧರ್ ಬಾಬು ಪ್ರತಿಕ್ರಿಯಿಸಿ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ಗೆ ಜಾಮೀನು ನೀಡಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಇಡಿ