ETV Bharat / bharat

'ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆ ಸ್ಥಳಾಂತರಿಸಿ' ಫಾರೂಕ್ ಅಬ್ದುಲ್ಲಾ ಹೀಗೆ ಹೇಳಿದ್ದು ಏಕೆ?

ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆಗೆ ಶಿಫ್ಟ್​ ಮಾಡಬೇಕೆಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ಕಂಡು ಬಂದ ವಾಯು ಮಾಲಿನ್ಯ
ದೆಹಲಿಯಲ್ಲಿ ಕಂಡು ಬಂದ ವಾಯು ಮಾಲಿನ್ಯ (IANS)
author img

By ETV Bharat Karnataka Team

Published : 3 hours ago

ಜಮ್ಮು: ಭಾರತದ ರಾಜಧಾನಿಯನ್ನು ನವದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್​ಸಿ) ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಆಗ್ರಹಿಸಿದ್ದಾರೆ. ಎಲ್ಲಿಯವರೆಗೆ ರಾಷ್ಟ್ರ ರಾಜಧಾನಿಯನ್ನು ನವದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸುವುದಿಲ್ಲವೋ ಅಲ್ಲಿಯವರೆಗೆ ಮಹಾನಗರದಲ್ಲಿ ಉಸಿರುಗಟ್ಟಿಸುವ ಮಾಲಿನ್ಯವು ಕಡಿಮೆಯಾಗುವುದಿಲ್ಲ ಎಂದು ಅವರು ಭಾನುವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ರಾಷ್ಟ್ರ ರಾಜಧಾನಿಯನ್ನು ದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸದ ಹೊರತು, ಅಲ್ಲಿನ ಜನರ ಜೀವನದ ಮೇಲೆ ಪರಿಣಾಮ ಬೀರುವ ಮಾಲಿನ್ಯ ಕಡಿಮೆಯಾಗಲಾರದು" ಎಂದು ಹೇಳಿದರು.

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ಎನ್ ಸಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, "ಈ ಅಲ್ಪಾವಧಿಯಲ್ಲಿ ನಾವು ಬಹಳಷ್ಟು ಸಾಧಿಸಿದ್ದೇವೆ. ನಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಹೇಳಿದರು.

ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ಭಾನುವಾರ ಬೆಳಿಗ್ಗೆ 7.30 ಕ್ಕೆ ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 428 ರಷ್ಟಿದ್ದು, ಸತತ ಐದನೇ ದಿನವೂ 'ತೀವ್ರ' ಮಾಲಿನ್ಯ ಉಂಟಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಗೋಚರತೆ ಬೆಳಿಗ್ಗೆ 7:30 ಕ್ಕೆ 800 ಮೀಟರ್ ಗೆ ಇಳಿದಿದೆ. ಇದರಿಂದಾಗಿ 107 ವಿಮಾನಗಳ ಹಾರಾಟ ವಿಳಂಬವಾಗಿದೆ ಮತ್ತು 3 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಫ್ಲೈಟ್ ರಡಾರ್ ತಿಳಿಸಿದೆ.

ನಗರದ 35 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳ ಪೈಕಿ 22 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ "ತೀವ್ರ ಮಾಲಿನ್ಯ" ಎಂದು ದಾಖಲಾಗಿದ್ದರೆ, ಆರು ಕೇಂದ್ರಗಳಲ್ಲಿ "ಅತ್ಯಂತ ಕಳಪೆ" ಎಂದು ದಾಖಲಾಗಿದೆ. ವಿಪರೀತ ಮಾಲಿನ್ಯದಿಂದ ಜನತೆ ಕಣ್ಣಿನ ಉರಿ, ಉಸಿರಾಟದ ಸಮಸ್ಯೆಗಳು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿಗ್ರಹಿಸಲು ಕ್ರಮಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್ ವೆಬ್ ಸೈಟ್​ನಲ್ಲಿ ಅಪ್ಲೋಡ್ ಮಾಡಲಾದ ನವೆಂಬರ್ 18 ರ ವಿಚಾರಣಾ ಪಟ್ಟಿಯ ಪ್ರಕಾರ, ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ : ಮಾರಾಟವಾಗದ ಟಿಕೆಟ್​ಗೆ ಬಹುಮಾನ: ಪ.ಬಂಗಾಳದಲ್ಲಿ ಲಾಟರಿ ಹಗರಣ, ಇಡಿ ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.