ಮುಂಬೈ: ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಲ್ಲಿ ಇಂದು ನಸುಕಿನ ಜಾವ ಭಾರಿ ಕಾಲ್ತುಳಿತ ಸಂಭವಿಸಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಬಾಂದ್ರಾ-ಗೋರಖ್‌ಪುರ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 22921 ಅನ್ನು ಹತ್ತುವ ಆತುರದಲ್ಲಿ ಹಲವರು ಗಾಯಗೊಂಡರು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೀಪಾವಳಿ, ಛತ್ ಹಬ್ಬದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಧಾನಿ ಮುಂಬೈಯಿಂದ ಭಾರತೀಯ ರೈಲ್ವೇ ಹಲವು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಈ ಪೈಕಿ ಬೆಳಗ್ಗಿನ ಜಾವ 5.10ಕ್ಕೆ ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಿಂದ ಬಾಂದ್ರಾ-ಗೋರಖ್‌ಪುರ್ ಎಕ್ಸ್‌ಪ್ರೆಸ್ ರೈಲು ಹೊರಡಬೇಕಿತ್ತು. ಆದರೆ ರೈಲು 2.55ಕ್ಕೆ ಪ್ಲಾಟ್‌ಫಾರ್ಮ್‌ಗೆ ಆಗಮಿಸಿದೆ. ರೈಲು ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದಂತೆ ಪ್ರಯಾಣಿಕರು ತಮ್ಮ ಸೀಟು ಹಿಡಿಯಲು ದಿಢೀರ್ ಮುಗಿಬಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿ ಒಂಬತ್ತು ಮಂದಿ ಗಾಯಗೊಂಡರು. ಈ ಪೈಕಿ ಇಬ್ಬರು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಎಲ್ಲರನ್ನೂ ನಗರದ ಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
STORY | 9 persons injured in stampede at Mumbai's Bandra railway station
— Press Trust of India (@PTI_News) October 27, 2024
READ: https://t.co/sdZpmGELdk
VIDEO:
(Source: Third Party) pic.twitter.com/LIBuwJkniS
ಶಬಿರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದಾರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ (29), ಸಂಜಯ್ (27, ದಿವ್ಯಾಂಶು (18) ಮೊಹಮ್ಮದ್ ಶರೀಫ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಬಸ್ನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ: ಪ್ರಯಾಣಿಕ ಸಜೀವ ದಹನ!