ETV Bharat / bharat

VVPAT​ನಲ್ಲಿ ಮತ ಸರಿಯಾಗಿ ಅಚ್ಚಾಗುತ್ತದೆಯೇ?: ಪರಿಶೀಲನಾ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್​ - vvpat - VVPAT

ವಿವಿಪ್ಯಾಟ್​ಗಳಲ್ಲಿ ಮತ ದೃಢೀಕರಣವನ್ನು ಪರಿಶೀಲನೆ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಒಪ್ಪಿಗೆ ಸೂಚಿಸಿದೆ.

ವಿವಿಪ್ಯಾಟ್​ನಲ್ಲಿ ಮತ ಸರಿಯಾಗಿ ಅಚ್ಚಾಗುತ್ತದೆಯೇ

author img

By ETV Bharat Karnataka Team

Published : Apr 3, 2024, 5:40 PM IST

ನವದೆಹಲಿ: ಚುನಾವಣಾ ಮತಯಂತ್ರಗಳ ಬಗ್ಗೆ ವಿಪಕ್ಷಗಳು ತಗಾದೆ ತೆಗೆಯುತ್ತಿರುವ ನಡುವೆ ಇವಿಎಂಗಳಲ್ಲಿ ಚಲಾವಣೆಯಾದ ಮತಗಳನ್ನು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್​) ಮೂಲಕ ಪುನರ್‌ಪರಿಶೀಲನೆ ಮಾಡುವಂತೆ ಕೋರಿ ಎನ್‌ಜಿಒವೊಂದು ಸಲ್ಲಿಸಿರುವ ಅರ್ಜಿಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಎನ್‌ಜಿಒ, ಇವಿಎಂನಲ್ಲಿ ಚಲಾಯಿಸಿದ ಮತ ನಿಖರವಾಗಿ ಸೂಚಿತ ಪಕ್ಷಕ್ಕೆ ಬಿದ್ದಿದೆಯೇ ಎಂಬುದನ್ನು ವಿವಿಪ್ಯಾಟ್​ನಲ್ಲಿ ಮುದ್ರಿತವಾಗುವ ಚೀಟಿಯಲ್ಲಿ ಕಾಣಬಹುದು. ಹೀಗಾಗಿ ವಿವಿಪ್ಯಾಟ್​ ಅನ್ನು ಪುನರ್‌ಪರಿಶೀಲನೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.

ಎನ್‌ಜಿಒ ಪರವಾಗಿ ವಕೀಲ ಪ್ರಶಾಂತ್ ಭೂಷಣ್, ನ್ಯಾಯಾಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿದರು. ಲೋಕಸಭೆ ಚುನಾವಣೆಗೆ ಏಪ್ರಿಲ್​ 19 ರಂದು ಮೊದಲ ಹಂತದ ಮತದಾನ ನಡೆಯುವುದರಿಂದ ಈ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸಬೇಕು. ಇಲ್ಲವಾದಲ್ಲಿ ಈ ಅರ್ಜಿ ನಿಷ್ಪ್ರಯೋಜಕವಾಗುತ್ತದೆ ಎಂದರು.

ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಅವರೊಂದಿಗೆ ವಿಶೇಷ ಪೀಠದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಖನ್ನಾ ಪ್ರತಿಕ್ರಿಯಿಸಿ, ಕೋರ್ಟ್​ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿದೆ. ಮುಂದಿನ ವಾರ ಈ ಅರ್ಜಿಯನ್ನು ಆಲಿಸಲಿದೆ. ಮುಂದಿನ ಮಂಗಳವಾರ ಅಥವಾ ಬುಧವಾರ ಈ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ಸೇರಿದ ಮತವನ್ನೇ ನಿಖರವಾಗಿ ಎಣಿಕೆ ಮಾಡಲಾಗಿದೆ ಎಂದು ವಿವಿಪ್ಯಾಟ್​ಗಳ ಮೂಲಕ ದೃಢೀಕರಿಸಿಲು ಸಾಧ್ಯವೇ ಎಂಬುದನ್ನು ಖಚಿತಪಡಿಸಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಎನ್‌ಜಿಒ ಅರ್ಜಿಯಲ್ಲಿ ಕೋರಿತ್ತು. ವಿವಿಪ್ಯಾಟ್​ ವಿಚಾರವಾಗಿ ಈ ಹಿಂದೆಯೂ ಎನ್‌ಜಿಒ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ 2023 ರ ಜುಲೈನಲ್ಲಿ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿತ್ತು.

ಆಯೋಗದ ಸ್ಪಷ್ಟನೆಯೇನು?: ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದ ಚುನಾವಣಾ ಆಯೋಗ, ಎಲೆಕ್ಟ್ರಾನಿಕ್​ ಮಷಿನ್​ನಲ್ಲಿ ಒತ್ತಿದ ಬಟನ್​ನ ನಿರ್ದೇಶನದ ಮೇರೆಗೆ ವಿವಿಪ್ಯಾಟ್​ನ ಸ್ಲಿಪ್​ನಲ್ಲಿ ಮತ ಅಚ್ಚಾಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ಸ್ಲಿಪ್​ಗಳನ್ನು ಶೇಕಡಾ 100 ರಷ್ಟು ಎಣಿಕೆಗೆ ಪಡೆದಲ್ಲಿ ಈ ಹಿಂದಿನ ಬ್ಯಾಲೆಟ್​ ಪೇಪರ್​ ಎಣಿಕೆ ಪದ್ಧತಿಗೆ ಮರಳಿದಂತಾಗುತ್ತದೆ ಎಂದು ಸ್ಪಷ್ಟನೆ ನೀಡಿತ್ತು.

ಇವಿಎಂಗಳ ಕಾರ್ಯವೈಖರಿ ಬಗ್ಗೆ ವಿವರಿಸಿದ್ದ ಆಯೋಗ, ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​ ವ್ಯವಸ್ಥೆ ನಿಖರವಾಗಿದೆ. ಅದು ಮತದಾರ ಹಾಕಿದ ಮತವನ್ನು ನಿಚ್ಚಳವಾಗಿ ದಾಖಲಿಸುತ್ತದೆ. ಅದರಲ್ಲಿನ ಯೂನಿಟ್​ ಕಂಟ್ರೋಲ್​ ಮತದಾರನ ಮತವನ್ನು ದಿನಾಂಕ, ಸಮಯವನ್ನು ಮುದ್ರಿಸಿ ದಾಖಲಿಸುತ್ತದೆ. ಇದನ್ನು ಡಿಕೋಡರ್​ ಅಥವಾ ಪ್ರಿಂಟರ್​ ಬಳಸಿ ಪಡೆಯಬಹುದು ಎಂದು ತಿಳಿಸಿತ್ತು.

ಲೋಕಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಂದು ಮತದಾನ ಆರಂಭ. ಜೂನ್​ 4 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಇವಿಎಂ ಯಂತ್ರದ ಮಾಹಿತಿ ನಿಖರ, ವಿವಿಪ್ಯಾಟ್​ ಸ್ಲಿಪ್​ ಹಿಂದಿನ ಬ್ಯಾಲೆಟ್​ ಪೇಪರ್​ ಎಣಿಕೆಗೆ ಸಮ; ಸುಪ್ರೀಂಗೆ ಚುನಾವಣಾ ಆಯೋಗದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.