ETV Bharat / bharat

ಮಹಿಳೆಯರ ಮುಟ್ಟಿನ ರಜೆ ಕುರಿತು ನೀತಿ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ - menstrual leave for women - MENSTRUAL LEAVE FOR WOMEN

ಮಹಿಳೆಯರ ಋತು ಚಕ್ರದ ರಜೆ ಕುರಿತು ನಿರ್ದೇಶನ ನೀಡಬೇಕು ಎಂಬ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ

sc-asks-centre-to-frame-model-policy-on-menstrual-leave-for-women
ಸುಪ್ರೀಂ ಕೋರ್ಟ್​​ (ಸಂಗ್ರಹ ಚಿತ್ರ)
author img

By PTI

Published : Jul 8, 2024, 4:45 PM IST

ನವದೆಹಲಿ: ರಾಜ್ಯ ಮತ್ತು ಇತರ ಮಧ್ಯಸ್ಥಗಾರರ ಸಮಾಲೋಚನೆ ಪಡೆದು ಮಹಿಳಾ ಋತುಚಕ್ರ ರಜೆ ಕುರಿತ ಮಾದರಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಾಮೂರ್ತಿ ಡಿವೈ ಚಂದ್ರಚೂಡ್​ ಮತ್ತು ನ್ಯಾಯಾಮೂರ್ತಿ ಜೆಬಿ ಪರ್ಡಿವಾಲ ಹಾಗೂ ಮನೋಜ್​ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಕುರಿತು ಸೂಚಿಸಿದೆ. ಈ ವಿಷಯ ಸಂಬಂಧಿಸಿದಂತೆ ನ್ಯಾಯಾಲಯ ವ್ಯವಹರಿಸಲಾಗದು ಎಂದು ಇದೇ ವೇಳೆ ತಿಳಿಸಿದೆ.

ಮಹಿಳೆಯರ ಋತು ಚಕ್ರದ ರಜೆ ಕುರಿತು ನಿರ್ದೇಶನ ನೀಡಬೇಕು ಎಂಬ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವೃತ್ತಿಯಲ್ಲಿರುವ ಮಹಿಳೆಯರಿಗೆ ಈ ರಜೆ ಹೇಗೆ ಪ್ರೋತ್ಸಾಹ ನೀಡುತ್ತದೆ. ಅಲ್ಲದೇ, ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ ಮಾಡುವುದರಿಂದ ಇದು ಅವರ ಉದ್ಯೋಗ ನೇಮಕಾತಿ ಮೇಲೆ ಪರಿಣಾಮ ಬೀರಬಹುದು. ಈ ಕುರಿತು ಸರ್ಕಾರ ನೀತಿ ರೂಪಿಸಬೇಕಿದೆ. ನ್ಯಾಯಾಲಯ ಈ ವಿಷಯದಲ್ಲಿ ನಿರ್ಧಾರ ನಡೆಸಲಾಗದು. ಕೇಂದ್ರ ಸರ್ಕಾರ ಈ ಕುರಿತು ತೆಗೆದುಕೊಳ್ಳುವ ನಿರ್ಧಾರವನ್ನು ಸುಪ್ರೀಂ ತಡೆಯುವುದಿಲ್ಲ ಎಂದಿದೆ.

2023 ಮೇ ಅಲ್ಲಿಯೇ ಈ ಕುರಿತು ಕೇಂದ್ರಕ್ಕೆ ಪ್ರಾತಿನಿಧ್ಯ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಸಮಸ್ಯೆಗಳು ರಾಜ್ಯ ನೀತಿಯ ಉದ್ದೇಶಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದರಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದ್ದಾರೆ.

ಆದಾಗ್ಯೂ ಪೀಠ ಈ ಸಂಬಂಧ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್​ ಜನರಲ್​ ಐಶ್ವರ್ಯಾ ಭಾಟಿ ಅವರ ಬಳಿಗೆ ಹೋಗಬಬಹುದು ಎಂದು ವಕೀಲ ರಾಕೇಶ್​ ಖನ್ನಾ ಅವರಿಗೆ ಅವಕಾಶ ನೀಡಿದೆ. ಈ ಕುರಿತು ನೀತಿ ರೂಪಿಸುವ ವಿಚಾರದಲ್ಲಿ ಕಾರ್ಯದರ್ಶಿಗಳು ರಾಜ್ಯಗಳು ಮತ್ತು ಮಧ್ಯಸ್ಥಗಾರರ ಜತೆ ಸಮಾಲೋಚಿಸಿ ನೀತಿ ರೂಪಿಸಬಹುದಾಗಿದೆ ಎಂದಿದೆ.

ಈ ಮೊದಲ ಸುಪ್ರೀಂ ಕೋರ್ಟ್​​​ ವೃತ್ತಿನಿರತ ಮಹಿಳೆ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಋತುಚಕ್ರದ ರಜೆ ನೀಡುವ ಅರ್ಜಿಯನ್ನು ವಿಲೇವಾರಿ ಮಾಡಿತು.

ಇದನ್ನೂ ಓದಿ: ಉದ್ಯೋಗಸ್ಥ ಮಹಿಳೆಗೆ ಋತುಚಕ್ರ ರಜೆ: ವಿಶ್ವಾಸ ಮೂಡಿಸಿದ ಸಿಎಂ ಸಿದ್ದರಾಮಯ್ಯ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.