ETV Bharat / bharat

ಮಹಾ ಕುಂಭಮೇಳಕ್ಕೆ ಏಳು ಸುತ್ತಿನ ಭದ್ರತೆ; ಉತ್ತರ ಪ್ರದೇಶ ಸರ್ಕಾರ - UP MAHA KUMBH

ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ರೈಲು ನಿಲ್ದಾಣ, ಬಸ್​ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಇತರ ಪ್ರಮುಖ ಮಾರ್ಗಗಳಲ್ಲಿ ಸ್ಥಳೀಯ ಅಧಿಕಾರಿಗಳು, ತಾತ್ಕಾಲಿಕ ಪೊಲೀಸ್​ ಠಾಣೆ ಮತ್ತು ಚೆಕ್​ಪೋಸ್ಟ್​ಗಳನ್ನು ತೆರೆಯಲಿದ್ದಾರೆ.

robust-7-tier-security-ensured-for-maha-kumbh-up-govt
ಮಹಾ ಕುಂಭ (ಐಎಎನ್​ಎಸ್​)
author img

By PTI

Published : Dec 30, 2024, 11:12 AM IST

ಪ್ರಯಾಗ್​ ರಾಜ್​: ಉತ್ತರ ಪ್ರದೇಶದಲ್ಲಿ 12 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭ ಮೇಳಕ್ಕೆ ಭರದಿಂದ ಸಿದ್ಧತೆ ಸಾಗಿದ್ದು, ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾ ಕುಂಭಮೇಳಕ್ಕಾಗಿ ಪ್ರಯಾಗ್​ರಾಜ್​ಗೆ ಭೇಟಿ ನೀಡುವ 40 ಕೋಟಿಗೂ ಹೆಚ್ಚು ಜನರಿಗೆ 7 ಸುತ್ತಿನ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ರೈಲು ನಿಲ್ದಾಣ, ಬಸ್​ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಇತರ ಪ್ರಮುಖ ಮಾರ್ಗದಲ್ಲಿ ತಾತ್ಕಾಲಿಕ ಪೊಲೀಸ್​ ಠಾಣೆ ಮತ್ತು ಚೆಕ್​ಪೋಸ್ಟ್ ಗಳನ್ನು ಸ್ಥಾಪಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಬಿಡಿಡಿ ಮತ್ತು ಎಎಸ್ ಚೆಕ್ ತಂಡಗಳನ್ನು ನಿಯೋಜಿಸುವ ಮೂಲಕ ಭದ್ರತೆಯನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಘಟಕಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇರಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಭದ್ರತೆ ಹಾಗೂ ಸಿದ್ಧತೆಗಳ ಬಗ್ಗೆ ಪೊಲೀಸ್​​ ಆಯುಕ್ತರಿಂದ ಮಾಹಿತಿ: ಈ ಕುರಿತು ಮಾಹಿತಿ ನೀಡಿರುವ ಪ್ರಯಾಗ್​​ರಾಜ್​ ಪೊಲೀಸ್​ ಆಯುಕ್ತರಾದ ತರುಣ್​ ಗಬಾ, 13 ತಾತ್ಕಾಲಿಕ ಪೊಲೀಸ್​ ಠಾಣೆ ಮತ್ತು 23 ಚೆಕ್​ಪೋಸ್ಟ್​ಗಳ ಭದ್ರತಾ ಖಾತ್ರಿಯನ್ನು ಒದಗಿಸಲಾಗುವುದು. ಈ ಮೂಲಕ ಒಟ್ಟಾರೆ 44 ರಿಂದ 57 ಸ್ಟೇಷನ್​ಗಳನ್ನು ಸ್ಥಾಪಿಸಲಾಗುವುದು. ಪ್ರಯಾಗ್​ರಾಜ್​ನ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ 10,000 ಪೊಲೀಸ್​ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ಪ್ರಯಾಗರಾಜ್ ಪೊಲೀಸ್ ಕಮಿಷನರೇಟ್‌ನ ಶಾಶ್ವತ ಮತ್ತು ತಾತ್ಕಾಲಿಕ ಮೂಲಸೌಕರ್ಯವನ್ನು ಎಂಟು ಪ್ರಮುಖ ವಲಯಗಳನ್ನಾಗಿ ವಿಭಾಗಿಸಲಾಗಿದೆ. 21 ಕಂಪನಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಎರಡು ಮೀಸಲು ಪಡೆ, ಪಿಎಸಿಯ ಐದು ಪಡೆ, ಎನ್​ಡಿಆರ್​ಎಫ್​ನ ನಾಲ್ಕು ತಂಡಗಳು,12 ಎಎಸ್​ ತಂಡ ಮತ್ತು 4 ಬಿಡಿಡಿ ತಂಡಗಳಾಗಿ ವಿಂಗಡಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಜನವರಿ 13ರಂದು ಪುಷ್​​ ಪೂರ್ಣಿಮಾದಿಂದ ಆರಂಭವಾಗಲಿರುವ ಮಹಾ ಕುಂಭ ಮೇಳ 45 ದಿನಗಳ ಕಾಲ ಸಾಗಲಿದ್ದು, ಮಹಾಶಿವರಾತ್ರಿಯಂದು ಅಂದರೆ ಫೆಬ್ರವರಿ 26ರಂದು ಮುಕ್ತಾಯವಾಗಲಿದೆ. ಆರು ವಾರಗಳ ಕಾಲ ನಡೆಯುವ ಕುಂಭಮೇಳದಲ್ಲಿ ಅಮೆರಿಕ ಮತ್ತು ಕೆನಡಾ ಸೇರಿದಂತೆ ದೇಶ- ವಿದೇಶದಿಂದ ಅಪಾರ ಪ್ರಮಾಣದ ಭಕ್ತರು ಇಲ್ಲಿ ಸೇರಲಿದ್ದಾರೆ. ಗಂಗಾ, ಯಮುನಾ ಮತ್ತು ಗುಪ್ತವಾಗಿ ಹರಿಯುವ ಪುರಾಣ ಪ್ರಸಿದ್ಧ ಸರಸ್ವತಿ ನದಿ ಸೇರುವ ಸಂಗಮನದಲ್ಲಿ ಪವಿತ್ರ ಸ್ನಾನವನ್ನು ಯಾತ್ರಾರ್ಥಿಗಳು ಮಾಡಲಿದ್ದಾರೆ.

ಇದನ್ನೂ ಓದಿ: ಹೇಗೆ ಸಾಗಿದೆ ಮಹಾ ಕುಂಭ ಮೇಳದ ಸಿದ್ಧತೆ?: 8 ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.