ETV Bharat / bharat

ಅಲಕನಂದಾ ನದಿಗೆ ಉರುಳಿ ಬಿದ್ದ ಟೆಂಪೋ ಟ್ರಾವೆಲರ್: 10ಕ್ಕೂ ಹೆಚ್ಚು ಜನರ ದಾರುಣ ಸಾವು - Road accident in Rudraprayag - ROAD ACCIDENT IN RUDRAPRAYAG

ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿಯಲ್ಲಿ ರಸ್ತೆ ಅಪಘಾತ ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ ವಾಹನ ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಬಿದ್ದಿದೆ. ಪರಿಣಾಮವಾಗಿ ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Rudraprayag  Road Accident On Badrinath Highway  Tempo Traveler overturned  Alaknanda river
ಲಕನಂದಾ ನದಿಗೆ ಉರುಳಿ ಬಿದ್ದ ಟೆಂಪೋ ಟ್ರಾವೆಲರ್: 10ಕ್ಕೂ ಹೆಚ್ಚು ಜನರ ದುರ್ಮರಣ (ETV Bharat)
author img

By ETV Bharat Karnataka Team

Published : Jun 15, 2024, 1:15 PM IST

Updated : Jun 15, 2024, 1:20 PM IST

ರುದ್ರಪ್ರಯಾಗ (ಉತ್ತರಾಖಂಡ): ಬದರಿನಾಥ್ ಹೆದ್ದಾರಿಯ ರೆಂಟೋಲಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲರ್ ವಾಹನವೊಂದು ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಬಿದ್ದಿದೆ. ಈ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 7 ಮಂದಿ ಗಾಯಗೊಂಡಿದ್ದಾರೆ.

ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ಆಡಳಿತ, ಜಿಲ್ಲಾ ವಿಪತ್ತು ನಿರ್ವಹಣೆ, ಡಿಡಿಆರ್‌ಎಫ್ ಮತ್ತು ಇತರ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು ಎಸ್ಪಿ ಡಾ. ವಿಶಾಖ್ ಅಶೋಕ್ ಭಾದನೆ ಪ್ರತಿಕ್ರಿಯಿಸಿ, ''ವಾಹನದಲ್ಲಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.

ಇತ್ತೀಚಿನ ಅಪಘಾತ ಪ್ರಕರಣಗಳು: ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಅಪಘಾತಗಳು ಪದೇ ಪದೇ ನಡೆಯುತ್ತಿವೆ. ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಚಾರ್‌ಧಾಮ್ ಯಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಚಾರ್‌ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇದರಿಂದ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯು ಅಧಿಕವಾಗಿದೆ. ಮತ್ತೊಂದೆಡೆ ಚಾರ್‌ಧಾಮ್ ಯಾತ್ರೆಗಾಗಿ ಪರ್ವತ ಮಾರ್ಗಗಳ ಮೂಲಕ ಹಾದು ಹೋಗಬಹುದು. ಆದ್ರೆ, ಅಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ಪ್ರಾಣ ಕಳೆದುಕೊಳ್ಳಬಹುದು.

ಈ ಹಿಂದೆ ಜೂನ್ 12 ರಂದು ಉತ್ತರಕಾಶಿಯ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಹಳ್ಳಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದರು. ಈ ಬಸ್ ಕಂದಕದಲ್ಲಿದ್ದ ಮರಕ್ಕೆ ಸಿಲುಕಿ ಇತರರ ಪ್ರಾಣ ಉಳಿದಿತ್ತು.

ಜೂನ್ 9 ರಂದು ನೈನಿತಾಲ್ ಜಿಲ್ಲೆಯ ಬೇಟಾಲ್ ಘಾಟ್​ನಲ್ಲಿ ರಾತ್ರಿ ಪಿಕಪ್ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. 13 ಮಂದಿ ಗಾಯಗೊಂಡಿದ್ದಾರೆ. ಸುಶೀಲಾ ತಿವಾರಿ ಆಸ್ಪತ್ರೆಯಲ್ಲಿ ಗಾಯಗಳಿಗೆ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ರೈಲು ಅಪಘಾತ: ಸಮಯ ಪ್ರಜ್ಞೆ ಮೆರೆದು ಹಲವು ಜನರ ಪ್ರಾಣ ಉಳಿಸಿದ ಚಹಾ ಮಾರುವ ವ್ಯಕ್ತಿ - Jharkhand Train Accident

Last Updated : Jun 15, 2024, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.