ETV Bharat / bharat

ಮುಂಬೈ: ನಟಿ ರವೀನಾ ಟಂಡನ್, ಕಾರು​ ಚಾಲಕನ ಮೇಲೆ ಜನರಿಂದ ಹಲ್ಲೆ - Raveena Tandon - RAVEENA TANDON

ಅಜಾಗರೂಕ ಚಾಲನೆ ಆರೋಪ ಹೊರಿಸಿ ನಟಿ ರವೀನಾ ಟಂಡನ್ ಹಾಗು ಅವರ ಕಾರು​ ಚಾಲಕನ ಮೇಲೆ ಜನರು ಹಲ್ಲೆಗೈದ ಘಟನೆ ಮುಂಬೈನಲ್ಲಿ ಇಂದು ನಡೆದಿದೆ.

Actress Raveena Tandon  Khar police Raveena Tandon car driver
ನಟಿ ರವೀನಾ ಟಂಡನ್ (ANI)
author img

By PTI

Published : Jun 2, 2024, 4:10 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಅವರ ಕಾರು ಚಾಲಕನ ಮೇಲೆ ಜನರು ಗುಂಪು ಹಲ್ಲೆ ನಡೆಸಿದ ಘಟನೆ ಮುಂಬೈನ ಬಾಂದ್ರಾದಲ್ಲಿ ಕಳೆದ ರಾತ್ರಿ ನಡೆದಿದೆ. ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಅಜಾಗರೂಕತೆಯ ಚಾಲನೆ ಜನರ ಆಕ್ರೋಶಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ಕುರಿತು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಖಾರ್ ಪೊಲೀಸ್ ಠಾಣೆಯ ಡೈರಿಯಲ್ಲಿ ಘಟನೆಯನ್ನು ನಮೂದಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಟಿ ರವೀನಾ ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಟಿಯ ಕಾರು​ ಚಾಲಕ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಲಾಗಿದೆ. ಇದರಿಂದ ಕೋಪಗೊಂಡ ಜನರು ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ಕಾರಿನಿಂದ​ ಕೆಳಗಿಳಿದು ಬಂದ ತಕ್ಷಣವೇ ಜನರು ರವೀನಾರನ್ನು ತಳ್ಳಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ''ದಯವಿಟ್ಟು ನನ್ನ ಮೇಲೆ ಹಲ್ಲೆ ನಡೆಸಬೇಡಿ'' ಎಂದು ರವೀನಾ ಹೇಳುತ್ತಿರುವುದು ದಾಖಲಾಗಿದೆ.

ಇದನ್ನೂ ಓದಿ: ಗ್ಯಾಂಗ್​ಸ್ಟರ್​ ಗವಳಿ ಬಿಡುಗಡೆಗೆ ಹೈಕೋರ್ಟ್ ಆದೇಶ: ಸುಪ್ರೀಂ ಮೊರೆ ಹೋದ ಮಹಾರಾಷ್ಟ್ರ ಸರ್ಕಾರ - Gangster Arun Gawli

ETV Bharat Logo

Copyright © 2025 Ushodaya Enterprises Pvt. Ltd., All Rights Reserved.