ETV Bharat / bharat

ಹಲ್ದಿ ಸಮಾರಂಭದಲ್ಲಿ ವಿದ್ಯುತ್ ಸ್ಪರ್ಶಿಸಿ ವರ ಸಾವು; ಸಂಭ್ರಮದ ಮದುವೆಯಲ್ಲಿ ಸೂತಕ - Groom Electrocuted - GROOM ELECTROCUTED

ಮದುವೆ ನಿಮಿತ್ತ ಹಲ್ದಿ ಸಮಾರಂಭ ನಡೆಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವರ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Rajasthan: Groom Dies After Being Electrocuted During Haldi Ceremony In Kota
ಹಳದಿ ಸಮಾರಂಭದಲ್ಲಿ ವಿದ್ಯುತ್ ಸ್ಪರ್ಶದಿಂದ ವರ ಸಾವು
author img

By ETV Bharat Karnataka Team

Published : Apr 23, 2024, 6:56 PM IST

ಕೋಟಾ(ರಾಜಸ್ಥಾನ): ರಾಜಸ್ಥಾನದ ಮದುವೆ ಮನೆಯೊಂದರಲ್ಲಿ ಘೋರ ದುರಂತ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ವರ ಮೃತಪಟ್ಟಿದ್ದಾರೆ. ಇದರಿಂದಾಗಿ ವಧು, ವರನ ಮನೆಯಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ.

''ಕೋಟಾ ಜಿಲ್ಲೆಯ ವರನ ಮನೆಯಲ್ಲಿ ಏಪ್ರಿಲ್ 22ರಂದು ಘಟನೆ ನಡೆಯಿತು. ಮೃತನನ್ನು ಕೇಶ್ವಾಪುರ ಪ್ರದೇಶದ ನಿವಾಸಿ ಸೂರಜ್ ಸಕ್ಸೇನಾ (30) ಎಂದು ಗುರುತಿಸಲಾಗಿದೆ. ಇಲ್ಲಿನ ಮೆನಾಲ್ ರೆಸಿಡೆನ್ಸಿ ರೆಸಾರ್ಟ್‌ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದ ವೇಳೆ ವಿದ್ಯುತ್ ಸ್ಪರ್ಶಿಸಿ ವರ ಪ್ರಾಣ ಕಳೆದುಕೊಂಡಿದ್ದಾರೆ'' ಎಂದು ಪೊಲೀಸ್​ ಅಧಿಕಾರಿ ನವಲ್​ ಕಿಶೋರ್ ಶರ್ಮಾ ತಿಳಿಸಿದ್ದಾರೆ.

''ವಿದ್ಯುತ್ ತಗುಲಿದ ತಕ್ಷಣವೇ ಸೂರಜ್ ಸಕ್ಸೇನಾ ಅವರನ್ನು ಅತಿಥಿಗಳು ಮತ್ತು ಸಂಬಂಧಿಕರು ರಕ್ಷಿಸಲು ಪ್ರಯತ್ನಿಸಿದರು. ಅದು ಸಾಧ್ಯವಾಗದೇ ಅವರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮದುವೆ ಕಾರ್ಯಕ್ರಮದ ಸ್ಥಳದ ಬಳಿ ಏರ್ ಕೂಲರ್‌ಗಳಿಗೆ ಅಳವಡಿಸಲಾಗಿದ್ದ ತಂತಿಗಳು ವಿದ್ಯುತ್ ದುರಂತಕ್ಕೆ ಕಾರಣವಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಯಾಪುರದ ಎಂಬಿಎಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ'' ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.