ETV Bharat / bharat

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ರಕ್ತದ ಮಾದರಿ ತಿರುಚಿದ್ದ ಆರೋಪದಡಿ ವೈದ್ಯರಿಬ್ಬರು ಅರೆಸ್ಟ್​ - Pune Porsche car crash case - PUNE PORSCHE CAR CRASH CASE

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ರಕ್ತದ ಮಾದರಿಗಳನ್ನು ತಿರುಚಿದ್ದ ಆರೋಪದ ಹಿನ್ನೆಲೆ ವೈದ್ಯರಿಬ್ಬರನ್ನು ಬಂಧಿಸಲಾಗಿದೆ.

PUNE CRIME BRANCH  TWO DOCTORS ARRESTED PUNE PORSCHE CAR CRASH CASE
ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ (ANI)
author img

By ANI

Published : May 27, 2024, 1:41 PM IST

ಪುಣೆ (ಮಹಾರಾಷ್ಟ್ರ): ಪುಣೆ ನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಕ್ರೈಂ ಬ್ರಾಂಚ್ ಪೊಲೀಸರು ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ರಕ್ತದ ಮಾದರಿಗಳನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ವೈದ್ಯರನ್ನು ಬಂಧಿಸಲಾಗಿದೆ. ಮೇ 19 ರಂದು ಅಪಘಾತ ನಡೆದಿದ್ದು, ಅಂದು ಅಪ್ರಾಪ್ತ ಆರೋಪಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮದ್ಯ ಸೇವಿಸಿದ್ದ ಅಪ್ರಾಪ್ತ ವಯಸ್ಕನ ರಕ್ತದ ಮಾದರಿಯನ್ನು ಬಿಟ್ಟು, ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ಬದಲಾವಣೆ ಮಾಡಿರುವ ಆರೋಪದಡಿ ವೈದ್ಯರನ್ನು ಬಂಧಿಸಲಾಗಿದೆ.

ರಕ್ತದ ಮಾದರಿ ಬದಲಾವಣೆ ಆರೋಪ: ಮೇ 19 ರಂದು ಬೆಳಗ್ಗೆ ಆರೋಪಿಗಳು ಕುಡಿದ ಮತ್ತಿನಲ್ಲಿ ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದರು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಆರಂಭದಲ್ಲಿ ಆತ ಮದ್ಯ ಸೇವಿಸಿಲ್ಲ ಎಂಬ ವರದಿ ಬಂದಿದ್ದು, ಆ ರಾತ್ರಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಪುಣೆಯ ಸಸೂನ್ ಆಸ್ಪತ್ರೆಯ ವೈದ್ಯರು ಅಪ್ರಾಪ್ತರ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಪಘಾತಕ್ಕೆ ಕಾರಣನಾದ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆರೋಪಿಯ ಮನೆಯವರು ವೈದ್ಯರಿಗೆ ಹಣದ ಆಮಿಷ ಒಡ್ಡಿದ್ದರು. ಡಾ.ಅಜಯ್ ತಾವರೆ ಅವರು ಸಸೂನ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥರಾಗಿದ್ದಾರೆ ಮತ್ತು ಡಾ. ಶ್ರೀಹರಿ ಹರ್ಲೋಲ್ ಅವರು ತುರ್ತು ಚಿಕಿತ್ಸಾ ವಿಭಾಗದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿದ್ದಾರೆ.

ಇದಾದ ಬಳಿಕ ಅಪ್ರಾಪ್ತನ ರಕ್ತದ ಮಾದರಿಯನ್ನು ಶ್ರೀಹರಿ ಹರ್ಲೋಲ್ ಇಲಾಖೆ ತೆಗೆದುಕೊಂಡಿದ್ದರು. ಅದರಲ್ಲಿ ಆಲ್ಕೋಹಾಲ್ ಇರಬಹುದೆಂದು ತಿಳಿದು ಅದನ್ನು ಬದಲಾಯಿಸಿದ್ದಾರೆ. ಇಷ್ಟೇ ಅಲ್ಲ, ರಜೆಯಲ್ಲಿದ್ದ ಡಾ. ಅಜಯ್ ತಾವ್ರೆ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಇದರ ನಂತರ, ಡಿಎನ್‌ಎ ಪರೀಕ್ಷೆಗಾಗಿ ಅಪ್ರಾಪ್ತನ ರಕ್ತದ ಮಾದರಿಯನ್ನು ಮತ್ತೊಂದು ಲ್ಯಾಬ್​ಗೆ ಕಳುಹಿಸಿದ್ದರಿಂದ ಪುಣೆ ಪೊಲೀಸರು ರಕ್ತದ ಮಾದರಿ ಬದಲಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರು ವೈದ್ಯರ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತದ ದಿನ ಡಾ.ಅಜಯ್ ತಾವ್ರೆ ಮತ್ತು ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನಡುವೆ ದೂರವಾಣಿ ಸಂಭಾಷಣೆ ನಡೆದಿರುವುದು ಕೂಡ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

''ಈ ಹಿಂದೆ ಮೇ 25ರಂದು ಬೆಳಗ್ಗೆ ಅಪರಾಧ ವಿಭಾಗದ ಪೊಲೀಸರು, ಪ್ರಕರಣದ ಅಪ್ರಾಪ್ತ ಆರೋಪಿಯ ಅಜ್ಜನನ್ನು ಬಂಧಿಸಿದ್ದರು. ಆತನ ವಿರುದ್ಧ ಐಪಿಸಿ ಸೆಕ್ಷನ್ 365 ಮತ್ತು 368 ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಟೀ ಕುಡಿಯುತ್ತಿದ್ದ ಮಾಜಿ ಮೇಯರ್​ ಮೇಲೆ ಗುಂಡಿನ ದಾಳಿ - Former Malegaon Mayor Attacked

ETV Bharat Logo

Copyright © 2024 Ushodaya Enterprises Pvt. Ltd., All Rights Reserved.