ETV Bharat / bharat

ಶಕ್ತಿದೇವತೆ ದುರ್ಗೆಯ ಕುರಿತು ವಿಶೇಷ ಹಾಡು ಬರೆದ ಪ್ರಧಾನಿ ಮೋದಿ

ದೇಶದಲ್ಲಿ ನವರಾತ್ರಿಯನ್ನು ವೈಭವದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಕ್ತಿದೇವತೆ ದುರ್ಗೆಯ ಮೇಲೆ ವಿಶೇಷ ಹಾಡು ರಚಿಸಿದ್ದಾರೆ.

author img

By ETV Bharat Karnataka Team

Published : 2 hours ago

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV Bharat)

ನವದೆಹಲಿ: ನವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರು ಶಕ್ತಿದೇವತೆಯ ಆರಾಧನೆ ಮಾಡುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದೇವಿಯ ಕುರಿತು ವಿಶಿಷ್ಟ ಹಾಡು ರಚಿಸಿದ್ದಾರೆ. ಗುಜರಾತಿನ ಸಾಂಪ್ರದಾಯಿಕ ನೃತ್ಯವಾದ 'ಗರ್ಬಾ' ಶೈಲಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಇದನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಮಂಗಳಕರ ನವರಾತ್ರಿಯ ಸಮಯದಲ್ಲಿ ಜನರು ದುರ್ಗಾ ದೇವಿಯನ್ನು ಒಗ್ಗಟ್ಟಿನಿಂದ ಮತ್ತು ವಿಭಿನ್ನ ರೀತಿಯಲ್ಲಿ ಪೂಜಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ನಾನು ದೇವಿಯ ಶಕ್ತಿ ಮತ್ತು ಅನುಗ್ರಹವನ್ನು ವೈಭವೀಕರಿಸುವ 'ಆವತಿ ಕಲೈ' ಗರ್ಬಾ ಹಾಡನ್ನು ಬರೆದಿದ್ದೇನೆ. ದುರ್ಗಾ ಮಾತೆಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ' ಎಂದು ಅವರು ಒಕ್ಕಣೆ ನೀಡಿದ್ದಾರೆ.

ತಾವು ಬರೆದ 'ಆವತಿ ಕಲೈ' ಗರ್ಬಾ ಹಾಡನ್ನು ಗಾಯಕಿ ಪೂರ್ವ ಮಂತ್ರಿ ಅವರು ಸೊಗಸಾಗಿ ಹಾಡಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡಿರುವ ಇನ್ನೊಂದು ಪೋಸ್ಟ್‌ನಲ್ಲಿ "ಗಾಯಕಿ ಪೂರ್ವ ಮಂತ್ರಿ ಅತ್ಯುತ್ತಮ ಗಾಯಕಿ. ಹಾಡನ್ನು ಅದ್ಭುತವಾಗಿ ಹಾಡಿದ್ದಕ್ಕೆ ಧನ್ಯವಾದ" ಎಂದಿದ್ದಾರೆ.

ಮೋದಿ ರಾಜಕೀಯ ಪಯಣ ಶ್ಲಾಘಿಷಿಸಿ ಶಾ: ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿ 23 ವರ್ಷ ಪೂರೈಸಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ಶ್ಲಾಘಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಒಬ್ಬ ವ್ಯಕ್ತಿ ತನ್ನ ಜೀವನದ ಕೊನೆಯವರೆಗೂ ದೇಶಕ್ಕೆ ಹೇಗೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಪ್ರಯಾಣವೇ ಸಾಕ್ಷಿ" ಎಂದು ಎಂದಿದ್ದಾರೆ.

"ಮೋದಿ ಅವರು 2001 ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಮಾರು 13 ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿದರು. 2014 ರಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪಿಎಂ ಆಗಿ 2 ಅವಧಿ ಪೂರೈಸಿದ್ದಾರೆ. ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ಅಕ್ಟೋಬರ್​​ 7ಕ್ಕೆ 23 ವರ್ಷ ಪೂರೈಸಿವೆ. ಗೃಹ ಸಚಿವರಾಗಿ ಅವರ ರಾಜಕೀಯ ಪಯಣದ ನಿರಂತರ ಒಡನಾಡಿಯಾಗಿರುವುದು ನನ್ನ ಅದೃಷ್ಟ" ಎಂದು ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮನ್ನಣೆ ಪಡೆಯಲು ಬಡವರ ಕಲ್ಯಾಣ, ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 23 ವರ್ಷಗಳಿಂದ ದಣಿವರಿಯದೆ, ತಮ್ಮ ಮೇಲಿನ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ರಾಷ್ಟ್ರ ಮತ್ತು ಜನತೆಗಾಗಿ ತಮ್ಮನ್ನು ಅರ್ಪಿಸಿಕೊಂಡಿರುವುದು ಶ್ಲಾಘನೀಯ" ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ರುಪೇ, ವಿಮಾನ ನಿಲ್ದಾಣದ ರನ್​ವೇಗೆ ಜಂಟಿ ಚಾಲನೆ ನೀಡಿದ ಮೋದಿ- ಮುಯಿಝು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.