ETV Bharat / bharat

ಸಿಕ್ಕಿಂ ಸಿಎಂ ಆಗಿ ಸತತ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಪ್ರೇಮ್ ಸಿಂಗ್ ತಮಾಂಗ್ - Prem Singh Tamang - PREM SINGH TAMANG

ಸಿಕ್ಕಿಂನಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಅಧ್ಯಕ್ಷ ಪ್ರೇಮ್ ಸಿಂಗ್ ತಮಾಂಗ್ ಅವರು ಮುಖ್ಯಮಂತ್ರಿಯಾಗಿ ಸೋಮವಾರ ಪದಗ್ರಹಣ ಮಾಡಿದರು.

ಪ್ರೇಮ್ ಸಿಂಗ್ ತಮಾಂಗ್
ಪ್ರೇಮ್ ಸಿಂಗ್ ತಮಾಂಗ್ (ETV Bharat)
author img

By PTI

Published : Jun 10, 2024, 10:42 PM IST

ಗ್ಯಾಂಗ್ಟಕ್(ಸಿಕ್ಕಿಂ): ಈಶಾನ್ಯ ಭಾರತದ ಚಿಕ್ಕ ರಾಜ್ಯವಾದ ಸಿಕ್ಕಿಂನಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಸರ್ಕಾರ ರಚಿಸಿದೆ. ಎಸ್​ಕೆಎಂ ಪಕ್ಷದ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಸತತ 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಧಾನಿ ಗ್ಯಾಂಗ್ಟಕ್​ನ ಪಾಲ್ಜೋರ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಪ್ರೇಮ್ ಸಿಂಗ್ ತಮಾಂಗ್ ಮತ್ತು ಅವರ ಮಂತ್ರಿ ಮಂಡಲಕ್ಕೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.

ಲೋಕಸಭೆ ಚುನಾವಣೆಯ ಜೊತೆಗೆ ಏಪ್ರಿಲ್​ 19ರಂದು ನಡೆದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್​ಕೆಎಂ) ಪಕ್ಷವು 32 ಸ್ಥಾನಗಳ ಪೈಕಿ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಹಿಮಾಲಯ ತಪ್ಪಲಿನಲ್ಲಿರುವ ರಾಜ್ಯದಲ್ಲಿ ಸತತ ಅಧಿಕಾರಿಕ್ಕೇರಿದೆ. ಪ್ರತಿಪಕ್ಷವಾದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್​​ಡಿಎಫ್​) ಒಂದೇ ಸ್ಥಾನದಲ್ಲಿ ಮಾತ್ರ ಗೆಲುವು ಕಂಡಿದೆ.

56 ವರ್ಷದ ಪ್ರೇಮ್ ಸಿಂಗ್ ತಮಾಂಗ್ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಬಳಿಕ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಜನಪರ ಕಾರ್ಯಗಳನ್ನು ಮೆಚ್ಚಿ ಜನರು ಭರ್ಜರಿ ಬಹುಮತ ನೀಡಿದ್ದಾರೆ. ಅವರ ನಿರೀಕ್ಷೆಯಂತೆ ಅಧಿಕಾರ ನಡೆಸಲಾಗುವುದು ಎಂದರು. ಪ್ರತಿಪಕ್ಷವಾದ ಸಿಕ್ಕಿಂ ಡೆಮಾಕ್ರಟಿಕ್​ ಪಕ್ಷ 2019 ರವರೆಗೆ ಸತತ 25 ವರ್ಷಗಳ ಕಾಲ ರಾಜ್ಯದ ಅಧಿಕಾರ ನಡೆಸಿದೆ.

ಇದನ್ನೂ ಓದಿ: ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದು ಬೀಗಿದ ಆಡಳಿತಾರೂಢ ಸಿಕೆಎಂ - Sikkim Assembly Election Result

ETV Bharat Logo

Copyright © 2025 Ushodaya Enterprises Pvt. Ltd., All Rights Reserved.