ETV Bharat / bharat

ದೆಹಲಿ ದೀಪಾವಳಿ ಎಫೆಕ್ಟ್​: ಒಂದೇ ದಿನದ ಪಟಾಕಿಗೆ 'ಅತ್ಯಂತ ಕಳಪೆ' ಮಟ್ಟಕ್ಕೆ ತಲುಪಿದ ವಾಯು ಗುಣಮಟ್ಟ - DELHI AIR QUALITY

ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಸಚಿವರ ಮನವಿ ಬಳಿಕವೂ ಜನತೆ ದೀಪಾವಳಿಗೆ ಪಟಾಕಿ ಸಿಡಿಸಿದ್ದು, ಇಂದು ವಾಯು ಗುಣಮಟ್ಟ ಮತ್ತಷ್ಟು ಕಳಪೆ ಮಟ್ಟಕ್ಕೆ ತಲುಪಿದೆ. ಇಲ್ಲಿನ ನಾಗರೀಕರು ಈಗಾಗಗಲೇ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ದೆಹಲಿ ದೀಪಾವಳಿ ಎಫೆಕ್ಟ್​: ಒಂದೇ ದಿನದ ಪಟಾಕಿಗೆ 'ಅತ್ಯಂತ ಕಳಪೆ' ಮಟ್ಟಕ್ಕೆ ತಲುಪಿದ ವಾಯು ಗುಣಮಟ್ಟ ಸೂಚ್ಯಂಕ
ದೆಹಲಿ ದೀಪಾವಳಿ ಎಫೆಕ್ಟ್​: ಒಂದೇ ದಿನದ ಪಟಾಕಿಗೆ 'ಅತ್ಯಂತ ಕಳಪೆ' ಮಟ್ಟಕ್ಕೆ ತಲುಪಿದ ವಾಯು ಗುಣಮಟ್ಟ ಸೂಚ್ಯಂಕ (ANI)
author img

By ETV Bharat Karnataka Team

Published : Nov 1, 2024, 1:04 PM IST

ನವದೆಹಲಿ: ದೀಪಾವಳಿ ಹಬ್ಬದ ಆಚರಣೆಯ ಬಳಿಕ ಇಂದು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯ ಮತ್ತಷ್ಟು ಹದಗೆಟ್ಟಿದ್ದು, ಅತ್ಯಂತ ಕಳಪೆ ಮಟ್ಟಕ್ಕೆ ಕುಸಿತ ಕಂಡಿದೆ. ನಗರವಿಡೀ ವಿಷಕಾರಿ ಹೊಗೆಯ ಹೊದಿಕೆಯನ್ನು ಹೊದ್ದಂತಿದೆ. ಕೇಂದ್ರೀಯ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿಯ ಪ್ರಕಾರ ದೆಹಲಿಯಲ್ಲಿ ಇಂದು ಬೆಳಗ್ಗೆ 7:30ರವರೆಗೆ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 361 ರಷ್ಟಿದೆ.

ನಿಮಗೆ ತಿಳಿದರಿಲಿ AQI 100 ಮತ್ತು 100ಕ್ಕಿಂತ ಕಡಿಮೆ ಇದ್ದರೆ ಆರೋಗ್ಯಯುತ. ಅದಕ್ಕಿಂತ ಅಧಿಕವಿದ್ದರೆ ಅದು ಅಪಾಯಕಾರಿ. ದೆಹಲಿಯ AQI 300ಕ್ಕೂ ಅಧಿಕವಿದೆ. ದೆಹಲಿಯ ಹೆಚ್ಚಿನ ಪ್ರದೇಶಗಳು 350ಕ್ಕಿಂತ ಅಧಿಕ ವಾಯುಗುಣ ಮಟ್ಟ ಸೂಚ್ಯಂಕವನ್ನು ದಾಖಲಿಸಿದೆ.

ಪ್ರಮುಖ ಪ್ರದೇಶಗಳ AQI ಮಟ್ಟ ಹೀಗಿದೆ:

  • ಅಲಿಪುರದಲ್ಲಿ AQI 353
  • ಆನಂದ್ ವಿಹಾರ್‌ AQI 395
  • ಅಶೋಕ್ ವಿಹಾರ್‌ AQI 387
  • ಬವಾನಾ AQI 392
  • ಬುರಾರಿ ಕ್ರಾಸಿಂಗ್‌ AQI 395
  • ಚಾಂದಿನಿ ಚೌಕ್‌ AQI 395
  • ಮಥುರಾ ರಸ್ತೆ AQI 371
  • ಡಾ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ AQI 372
  • ಐಜಿಐ ಏರ್‌ಪೋರ್ಟ್‌ AQI 375
  • ಐಟಿಒ AQI 334
  • ಜಹಾಂಗೀರಪುರಿ AQI 390
  • ಜವಾಹರಲಾಲ್ ನೆಹರು ಕ್ರೀಡಾಂಗಣ AQI 343
  • ಲೋಧಿ ರಸ್ತೆ AQI 314
  • ಮುಂಡ್ಕಾ AQI 374
  • ನಜಫ್‌ಗಢ AQI 329
  • ನೆಹರು ನಗರ AQI 385
  • ಉತ್ತರ ಕ್ಯಾಂಪಸ್‌ AQI 390
  • ದ್ವಾರಕಾ AQI 352
  • ಓಖ್ಲಾ ಫೇಸ್​ 2​ AQI 369
  • ಪಂಜಾಬಿ ಭಾಗ್​ AQI 392
  • ಶಾದಿಪುರ AQI 388
  • ಸೋನಿಯಾ ವಿಹಾರ್‌ AQI 395
  • ಶ್ರೀ ಅರಬಿಂದೋ ಮಾರ್ಗ AQI 314
  • ವಜೀರ್‌ಪುರ AQI 389

ಕಣ್ಣು ತೆರೆಯುವುದು ಅಸಾಧ್ಯ: ಇಲ್ಲಿನ ಸೈಕ್ಲಿಸ್ಟ್ ಸ್ಟೀಫನ್ ದೆಹಲಿಯ ವಾಯುಗುಣದ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. "ದೀಪಾವಳಿ ಆಚರಣೆಯ ನಂತರ ದೆಹಲಿಯ ಇಂಡಿಯಾ ಗೇಟ್​​ ಮೂಲಕ ಹಾದುಹೋಗುವಾಗ ಗಮನಿಸಿದೆ ಇಡೀ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ. ಇಲ್ಲಿನ AQI 317ರಲ್ಲಿ ದಾಖಲಾಗಿದೆ. ಮಾಲಿನ್ಯದಿಂದಾಗಿ ಭಯಾನಕ ಘಟನೆಗಳು ನಡೆಯುತ್ತಿವೆ. ಈ ಬಾರಿ ಗಾಳಿಯಲ್ಲಿನ ಮಾಲಿನ್ಯವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಏನೂ ಇರಲಿಲ್ಲ".

"ಪರಿಣಾಮ ಈಗ ನನ್ನ ಸಹೋದರ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ನಾನು ನನ್ನ ಸಹೋದರನೊಂದಿಗೆ ನಿತ್ಯ ಸೈಕಲ್‌ನಲ್ಲಿ ಇಲ್ಲಿಗೆ ಬರುತ್ತಿದ್ದೆ. ಆದರೆ ಇತ್ತೀಚಿನ ಮಲಿನದಿಂದಾಗಿ ಆತನ ಆರೋಗ್ಯ ತೀವ್ರ ಹದಗೆಟ್ಟಿದೆ. ದೀಪಾವಳಿ ಹಿನ್ನೆಲೆ ನಿನ್ನೆ ಬಹಳಷ್ಟು ಪಟಾಕಿಗಳನ್ನು ಸಿಡಿಸಲಾಗಿದೆ. ಶಬ್ದಕ್ಕೆ ನನಗೆ ನಿದ್ರೆ ಕೂಡ ಸಾಧ್ಯವಾಗಲಿಲ್ಲ. ನಾವು ನಿಜವಾಗಿಯೂ ತೊಂದರೆಗೊಳಗಾಗಿದ್ದೇವೆ. ನನ್ನ ಸಹೋದರನಿಗೆ ಗಂಟಲು ನೋಯುತ್ತಿದ್ದು, ಉಸಿರಾಡಲು ಕಷ್ಟವಾಗುತ್ತಿದೆ. ಸೈಕ್ಲಿಂಗ್​ ಮಾಡುವಾಗ ನಮಗೆ ಕಣ್ಣುಗಳನ್ನು ತೆರೆಯಲು ಸಹ ಕಷ್ಟವಾಗುತ್ತಿದೆ" ಎಂದು ವಿವರಿಸಿದ್ದಾರೆ.

ಮಹಾನಗರಗಳಲ್ಲಿ ಕೆಟ್ಟಿದೆ ವಾಯುಗುಣಮಟ್ಟ: ಈ ವಾಯುಮಾಲಿನ್ಯ ಕೇವಲ ದೆಹಲಿಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ, ಚೆನ್ನೈ ಮತ್ತು ಮುಂಬೈನಂತಹ ಮಹಾನಗರಗಳು ಸೇರಿದಂತೆ ಭಾರತದಾದ್ಯಂತ ಹಲವಾರು ಇತರ ನಗರಗಳಲ್ಲಿ ಕಳಪೆ ವಾಯುಗುಣಮಟ್ಟದ ಬಗ್ಗೆ ವರದಿಯಾಗಿದೆ.

ಪರಿಸರ ಸಚಿವರ ನಿರ್ಧಾರವೇನು?: ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, ದೀಪಾವಳಿ ನಂತರ ದೆಹಲಿ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಸಿದ್ಧತೆಗಳ ಬಗ್ಗೆ ಮಾತನಾಡಿದ್ದಾರೆ. "ದೆಹಲಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು (AQI) 'ಅತ್ಯಂತ ಕಳಪೆ' ವಿಭಾಗದಲ್ಲಿ ಗುರುತಿಸಿಕೊಂಡಿದೆ. ಕೆಲವು ಪ್ರದೇಶಗಳು ಅತ್ಯಂತ ಹೆಚ್ಚಿನ ಕಳಪೆ ಮಟ್ಟದ ವಾಯು ಗುಣಮಟ್ಟವನ್ನು ತೋರಿಸುತ್ತಿವೆ. ರಾಜ್ಯಾದ್ಯಂತ ಮಾಲಿನ್ಯವನ್ನು ನಿಯಂತ್ರಿಸಲು ಪಟಾಕಿ ಸುಡುವುದನ್ನು ತಪ್ಪಿಸಬೇಕೆಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ನಾವು ದೀಪಗಳನ್ನು ಬೆಳಗಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸೋಣ. ಮನೆಯಲ್ಲಿ ಮಕ್ಕಳು ಮತ್ತು ವೃದ್ಧರ, ನಮ್ಮ ಉಳಿವಿನ ದೃಷ್ಟಿಯಿಂದಾದರೂ ನಾವು ಪಟಾಕಿಗಳನ್ನು ಸಿಡಿಸುವುದನ್ನು ತಡೆಯಬೇಕು" ಎಂದು ಅವರು ಮನವಿ ಮಾಡಿಕೊಂಡಿದ್ದರು.

ಸಚಿವರು ಪಟಾಕಿಗಳ ಮಾರಾಟದ ಬಗ್ಗೆ ಮಾತನಾಡಿದ್ದು, "ದೆಹಲಿ ಪೊಲೀಸರು ಪಟಾಕಿ ಮಾರಾಟವನ್ನು ನಿಯಂತ್ರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುರಕ್ಷತೆಗಾಗಿ ರಾತ್ರಿಯಲ್ಲಿ ಗಸ್ತು ಹೆಚ್ಚಿಸಲಾಗುವುದು. ಆದರೆ, ನಾನು ನಾಗರಿಕರಿಗೆ ಕೇಳುವ ಪ್ರಶ್ನೆ ಪಟಾಕಿಗಳನ್ನು ಸುಡುವ ಅಗತ್ಯವೇನು? ನಗರವನ್ನು ಮಾಲಿನ್ಯಗೊಳಿಸದಿರುವುದು ನಮ್ಮ ಕರ್ತವ್ಯ. ದೆಹಲಿ ಸರ್ಕಾರವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೆಹಲಿ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ನಿನ್ನೆ ವಿವರಿಸಿದ್ದರು.

ದೀಪಾವಳಿಯಿಂದ ದೆಹಲಿಯಲ್ಲಿ 300ಕ್ಕೂ ಹೆಚ್ಚು ಬೆಂಕಿ ಅವಘಡ: ದೆಹಲಿ ಅಗ್ನಿಶಾಮಕ ಸೇವೆ (DFS) ದೀಪಾವಳಿಯಂದು 300ಕ್ಕೂ ಹೆಚ್ಚು ಬೆಂಕಿಗೆ ಸಂಬಂಧಿಸಿದ ಅವಘಡದ ಕರೆಗಳನ್ನು ಸ್ವೀಕರಿಸಿದೆ. ಆದರೇ ಯಾವುದೇ ಪ್ರಾಣಾಪಾಯದ ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗಾರ್ಗ್ ಮಾತನಾಡಿ, "ನಿನ್ನೆ ಸಂಜೆ 5 ರಿಂದ ಮಧ್ಯರಾತ್ರಿಯವರೆಗೆ ಸುಮಾರು 192 ಕರೆಗಳು ಮತ್ತು ಮಧ್ಯರಾತ್ರಿಯ ನಡುವೆ, ಬೆಳಗ್ಗೆ 6 ಗಂಟೆಯವರೆಗೆ ಸುಮಾರು 158ಕ್ಕೂ ಹೆಚ್ಚು ಬೆಂಕಿಗೆ ಸಂಬಂಧಿಸಿದ ಘಟನೆಗಳು ವರದಿಯಾಗಿವೆ. ಕೇವಲ 12 ಗಂಟೆಗಳಲ್ಲಿ ಬೆಂಕಿ ಪ್ರಕರಣಗಳು 300ರ ಗಡಿ ದಾಟಿದೆ. ಈ ವರ್ಷ ದೀಪಾವಳಿ ಸಂದರ್ಭ ಅಗ್ನಿಶಾಮಕ ದಳದ ತಂಡವನ್ನು ಹೆಚ್ಚಿಸಿದ್ದರಿಂದ ಯಾವುದೇ ದೊಡ್ಡ ಘಟನೆ ಸಂಭವಿಸಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಟಾಕಿ ಸದ್ದಿನ ನಡುವೆ ಚಿಕ್ಕಪ್ಪ, ಸೋದರಳಿಯನ ಹತ್ಯೆ: ಪಾದಗಳನ್ನು ಸ್ಪರ್ಶಿಸಿ ನಂತರ 5 ಗುಂಡು ಹಾರಿಸಿದ ದುಷ್ಕರ್ಮಿ

ಇದನ್ನೂ ಓದಿ: 'ಅತಿ ಕಳಪೆ' ಮಟ್ಟಕ್ಕೆ ತಲುಪಿದ ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ: ಯಮುನಾ ನದಿಯಲ್ಲಿ ವಿಷಕಾರಿ ನೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.