ETV Bharat / bharat

300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಬಿಜೆಪಿ; ಪೂರ್ವ, ದಕ್ಷಿಣ ಭಾರತದಲ್ಲಿ ಅರಳಲಿದೆ 'ಕಮಲ': ಪ್ರಶಾಂತ್ ಕಿಶೋರ್‌ ಭವಿಷ್ಯ - Prashant Kishor - PRASHANT KISHOR

ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸಾಧನೆ ಮತ್ತು ಬಲಾಬಲದ ಬಗ್ಗೆ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್ ಮಾತನಾಡಿದ್ದಾರೆ.

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
author img

By PTI

Published : Apr 7, 2024, 6:01 PM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಬಹುಮತ ಪಡೆಯಲಿದೆ. ಪಕ್ಷದ ಹಿಡಿತವಿಲ್ಲದ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ತನ್ನ ಸ್ಥಾನ ಮತ್ತು ಮತಗಳ ಪಾಲನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕಸಮರದ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ಇದ್ದ ಅವಕಾಶಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಹೀಗಾಗಿ ಅದು ಚುನಾವಣೆಯಲ್ಲಿ ಸಮರ್ಥ ಎದುರಾಳಿಯಾಗಿ ಉಳಿದಿಲ್ಲ. ತಪ್ಪಾದ ತಂತ್ರಗಳೇ ಅದಕ್ಕೆ ತಿರುಗುಬಾಣವಾಗಿವೆ ಎಂದು ಹೇಳಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಬಿಜೆಪಿ ಮೊದಲ ಅಥವಾ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಶ್ಚಿಮಬಂಗಾಳ, ಒಡಿಶಾದಲ್ಲಿ ನಂಬರ್​ 1 ಪಕ್ಷವಾಗಿ ಸಾಧನೆ ಮಾಡಲಿದೆ. ತಮಿಳುನಾಡಿನಲ್ಲಿ ಅದರ ಮತ ಗಳಿಕೆಯನ್ನು ಎರಡಂಕಿಗೆ ಹೆಚ್ಚಿಸಿಕೊಳ್ಳಲಿದೆ. ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳದಲ್ಲಿ 204 ಸ್ಥಾನಗಳನ್ನು ಅದು ಗಳಿಸಲಿದೆ. 2014 ಹಾಗೂ 2019ರಲ್ಲಿ ಈ ಎಲ್ಲ ರಾಜ್ಯಗಳಲ್ಲಿ 50 ಸ್ಥಾನಗಳನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಗುರಿಯಾದ 370 ಸ್ಥಾನ ಗೆಲ್ಲಲ್ಲ: ಬಿಜೆಪಿ ಈ ಬಾರಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಇದು ಸಾಧ್ಯವಾಗಲ್ಲ ಎಂಬುದು ಚುನಾವಣಾ ಚಾಣಕ್ಯನ ಹೇಳಿಕೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತನ್ನ ಗುರಿಯನ್ನು ತಲುಪಲು ಸಾಧ್ಯತೆ ಕಮ್ಮಿ. ಕಾಂಗ್ರೆಸ್​, ತನ್ನ ಪ್ರಾಬಲ್ಯವಿರುವ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಕನಿಷ್ಠ 100 ಸ್ಥಾನಗಳನ್ನು ಖೋತಾ ಮಾಡಬೇಕು. ಆಗ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ. ಆದರೆ, ಕಾಂಗ್ರೆಸ್​ನ ಪ್ರಸ್ತುತ ತಂತ್ರಗಳು ಬಿಜೆಪಿ ವಿರುದ್ಧವಾಗಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರು ಈ ರಾಜ್ಯಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿರುವುದು ಸೀಟಿನ ಲೆಕ್ಕಾಚಾರದಲ್ಲಿ ಏರಿಕೆ ತರುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಇದು ಕಂಡುಬರುತ್ತಿದೆ. ಪ್ರತಿಪಕ್ಷಗಳು ಈ ರಾಜ್ಯಗಳಲ್ಲಿ ತಮ್ಮ ನಿಜವಾದ ಪ್ರಯತ್ನವನ್ನೇ ಮಾಡಿಲ್ಲ ಎಂದು ಕಿಶೋರ್​ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡು, ಕೇರಳಕ್ಕೆ ನೀಡಿದ ಭೇಟಿಗಳೆಷ್ಟು ಎಂಬುದನ್ನು ಗಮನಿಸಿ. ಅದೇ ರೀತಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಯಾವುದೇ ವಿರೋಧ ಪಕ್ಷಗಳ ನಾಯಕರ ಪ್ರವಾಸವನ್ನು ಲೆಕ್ಕ ಹಾಕಿ ನೋಡಿ. ಮೋದಿ-ಶಾ ಜೋಡಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಠಿಕಾಣಿ ಹೂಡುತ್ತಿದ್ದರೆ, ಕಾಂಗ್ರೆಸ್ಸಿಗರು ಮಣಿಪುರ ಮತ್ತು ಮೇಘಾಲಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದು ಹೇಗೆ ನಿಮಗೆ ಯಶಸ್ಸು ತಂದುಕೊಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಅಮೇಠಿ ಬಿಟ್ಟರೆ ತಪ್ಪು ಸಂದೇಶ ರವಾನೆ: 2019 ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತ ನಂತರ ಗಾಂಧಿ ಕುಟುಂಬದ ಅಲ್ಲಿ ಸ್ಪರ್ಧೆ ಮಾಡಲು ಹಿಂಜರಿದರೆ, ಇದು ತಪ್ಪು ಸಂದೇಶಕ್ಕೆ ದಾರಿ ಮಾಡಿಕೊಡುತ್ತದೆ. ಆ ಪಕ್ಷ ಉತ್ತರಪ್ರದೇಶ, ಮಧ್ಯಪ್ರದೇಶ ಜಯಿಸದೇ, ಕೇರಳದಲ್ಲಿ ಮಾತ್ರ ಗೆದ್ದರೆ ಲಾಭವಿಲ್ಲ. 2014 ರಲ್ಲಿ ಮೋದಿ ಅವರು ಗುಜರಾತ್​ ಜೊತೆಗೆ ಉತ್ತರಪ್ರದೇಶವನ್ನೂ ಆಯ್ಕೆ ಮಾಡಿಕೊಂಡರು. ಇದಕ್ಕೆ ಕಾಣ ಹಿಂದಿ ರಾಜ್ಯಗಳಲ್ಲಿ ಪ್ರಭುತ್ವ ಸಾಧಿಸದ ಹೊರತು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ರಾಜಕೀಯ ಕಾಗುಣಿತದ ಬಗ್ಗೆ ಬಿಚ್ಚಿಟ್ಟರು.

ಇದನ್ನೂ ಓದಿ: ಚುನಾವಣಾ ಬಾಂಡ್‌ ಅಕ್ರಮದ ರೂವಾರಿ ಮೋದಿಯನ್ನು ಬಂಧಿಸಿ: ಮುಖ್ಯಮಂತ್ರಿ ಚಂದ್ರು - AAP Hunger Strike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.