ETV Bharat / bharat

ತಮ್ಮ ಎನಿಮೇಟೆಡ್ ಡ್ಯಾನ್ಸ್‌ ವಿಡಿಯೋ ನೋಡಿ ಖುಷಿಪಟ್ಟ ಪ್ರಧಾನಿ ಮೋದಿ - Modi Dance Video

author img

By PTI

Published : May 7, 2024, 8:43 AM IST

ಪ್ರಧಾನಿ ನರೇಂದ್ರ ಮೋದಿ ಅವರ ಎನಿಮೇಟೆಡ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (Etv Bharat)

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇದೀಗ ದೇಶದಲ್ಲಿ ಲೋಕಸಭೆ ಚುನಾವಣೆಯ ಅಬ್ಬರ ಇರುವುದರಿಂದ ರಾಜಕಾರಣಿಗಳನ್ನೂ ಟ್ರೋಲ್​ ಮಾಡಲಾಗುತ್ತಿದೆ. ಅಂಥ ಒಂದು ವಿಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

​ಪ್ರಧಾನಿ ನರೇಂದ್ರ ಮೋದಿ ಅವರ ಎನಿಮೇಟೆಡ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಪ್​ ಸ್ಟಾರ್​ ಒಬ್ಬರು ವೇದಿಕೆ ಮೇಲೆ ನೃತ್ಯ ಮಾಡಿರುವ ವಿಡಿಯೋಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಸಹಾಯದಿಂದ ಅದಕ್ಕೆ ಮೋದಿ ಅವರ ಚಹರೆ ಬಳಸಿ ವ್ಯಕ್ತಿಯೊಬ್ಬರು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ವಿಡಿಯೋ ಗಮನಿಸಿರುವ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಎಕ್ಸ್‌ ಖಾತೆಯಲ್ಲಿ ರಿ ಪೋಸ್ಟ್ ಮಾಡಿದ್ದಾರೆ. "ನಿಮ್ಮ ಹಾಗೇ ನಾನೂ ಕೂಡ ನನ್ನ ಎನಿಮೇಟೆಡ್​ ಡ್ಯಾನ್ಸ್​ ನೋಡಿ ಆನಂದಿಸಿದ್ದೇನೆ. ಚುನಾವಣೆಯ ಬಿಡುವಿನಲ್ಲಿ ಇಂತಹ ವಿಡಿಯೋ ನಿಜಕ್ಕೂ ಖುಷಿ ನೀಡಿತು" ಎಂದು ಬರೆದಿದ್ದಾರೆ.

ಇದನ್ನೂ ಓದಿ: ರಾಜಕೀಯ ಪಕ್ಷ ಬೆಂಬಲಿಸುವ ನಕಲಿ ವಿಡಿಯೋ ವೈರಲ್: ಎಫ್‌ಐಆರ್ ದಾಖಲಿಸಿದ ಅಮೀರ್ ಖಾನ್ - Aamir Khan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.