ETV Bharat / sports

20 ಕೋಟಿ ರೂಪಾಯಿ ಅವ್ಯವಹಾರ ಆರೋಪ: ಟೀಂ ಇಂಡಿಯಾ ಮಾಜಿ ನಾಯಕನಿಗೆ ಇಡಿ ಸಮನ್ಸ್​ ಜಾರಿ! - ED summons to Azharuddin - ED SUMMONS TO AZHARUDDIN

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕನಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿ ಮಾಡಿದೆ.

ಮೊಹ್ಮದ್​ ಅಜರುದ್ದೀನ್​
ಮೊಹ್ಮದ್​ ಅಜರುದ್ದೀನ್​ (IANS Photos)
author img

By ETV Bharat Sports Team

Published : Oct 3, 2024, 1:04 PM IST

Updated : Oct 3, 2024, 1:10 PM IST

ಹೈದರಾಬಾದ್​ (ತೆಲಂಗಾಣ): ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ಗೆ (ಎಚ್​ಸಿಎ) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್‌ಗೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಸಮನ್ಸ್ ಜಾರಿ ಮಾಡಿದೆ.

ಈ ಹಿಂದೆ ಎಚ್​ಸಿಎ ಅಧ್ಯಕ್ಷರಾಗಿದ್ದ ಅಜರುದ್ದೀನ್ ಅವರ ಅಧಿಕಾರಾವಧಿಯಲ್ಲಿ ಹಣ ದುರುಪಯೋಗ ಆಗಿರುವ ಆರೋಪ ಕೇಳಿ ಬಂದಿದೆ. ಹೈದರಾಬಾದ್‌ನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನಕ್ಕೆ ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಇತರ ಉಪಕರಣಗಳ ಖರೀದಿಗಾಗಿ ಮಂಜೂರು ಮಾಡಲಾದ 20 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂರಿಡು ಆರೋಪಕ್ಕೆ ಕೇಳಿ ಬಂದಿದ್ದು ಈ ಹಿನ್ನೆಲೆ ಇಡಿ ಮೊದಲ ಬಾರಿಗೆ ಸಮನ್ಸ್​ ಜಾರಿ ಮಾಡಿದ್ದು ಇಂದು ಇಡಿ ಮುಂದೆ ಹಾಜರಾಗಬೇಕಿದೆ.

ಕಳೆದ ವರ್ಷ ಇಡಿ ತೆಲಂಗಾಣದ ಒಂಬತ್ತು ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ದಾಳಿ ನಡೆಸಲಾಗಿತ್ತು. ಇದರಲ್ಲಿ ಎಚ್‌ಸಿಎ ಮಾಜಿ ಅಧಿಕಾರಿಗಳ ನಿವಾಸಗಳೂ ಸೇರಿದ್ದವು. ದಾಳಿ ವೇಳೆ ಇಡಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಅಜರುದ್ದೀನ್ 1984 ರಿಂದ 2000 ರವರೆಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. 1989 ರಿಂದ 1999 ರವರೆಗೆ ನಾಯಕರಾಗಿಯೂ ತಂಡವನ್ನು ಮುನ್ನಡೆಸಿದ್ದರು. ಅಜರುದ್ದೀನ್​ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ 47 ಟೆಸ್ಟ್, 174 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯದಲ್ಲಿ ನಾಯಕನಾಗಿ 90 ಪಂದ್ಯಗಳನ್ನು ಗೆದ್ದಿದ್ದಾರೆ.

ಸದ್ಯ ಅಜರುದ್ದೀನ್ ಕ್ರಿಕೆಟಿಗನಿಂದ ರಾಜಕೀಯಕ್ಕೆ ಎಂಟ್ರಕೊಟ್ಟಿದ್ದಾರೆ. ಪ್ರಸ್ತುತ ಅವರು ಕಾಂಗ್ರೆಸ್ ಮುಖಂಡನಾಗಿದ್ದುಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ಇದನ್ನೂ ಓದಿ: ಐಸಿಸಿ ಟೆಸ್ಟ್ ಶ್ರೇಯಾಂಕ: ಬೌಲಿಂಗ್​​ನಲ್ಲಿ ಬುಮ್ರಾ ಅಗ್ರಸ್ಥಾನಕ್ಕೆ ಲಗ್ಗೆ, ಬ್ಯಾಟಿಂಗ್​ನಲ್ಲಿ ಜೈಸ್ವಾಲ್ ನಂ.3 - ICC Test rankings

Last Updated : Oct 3, 2024, 1:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.