ETV Bharat / bharat

ಗುಜರಾತ್​ನಲ್ಲಿ ಪ್ರಧಾನಿ ಮೋದಿ: ಸೂರ್ಯಘರ್​ ಯೋಜನೆಯ ಫಲಾನುಭವಿಗಳೊಂದಿಗೆ ಮಾತುಕತೆ - PM Modi In Gujarat

author img

By PTI

Published : Sep 16, 2024, 12:36 PM IST

ಪ್ರಧಾನಿ ಮೋದಿ ಇಂದು 4ನೇ ಜಾಗತಿಕ ನವೀಕರಿಸಬಹುದಾದ ಶಕ್ತಿ ಹೂಡಿಕೆದಾರರ ಸಭೆ ಮತ್ತು ಎಕ್ಸ್​ಪೋದಲ್ಲಿ ಭಾಗಿಯಾಗಲಿದ್ದಾರೆ.

pm-interacts-with-rooftop-solar-unit-scheme-beneficiaries-in-gujarat
ಪ್ರಧಾನಿ ಮೋದಿ (ETV Bharat)

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ತವರು ರಾಜ್ಯ ಗುಜರಾತ್​ಗೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜಧಾನಿ ಗಾಂಧಿನಗರದಲ್ಲಿ ಬೆಳಗ್ಗೆ, ಸೂರ್ಯ ಘರ್​ ಮುಫ್ತ್​​ ಬಿಜ್ಲಿ ಯೋಜನೆಯ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.

ಬೆಳಗ್ಗೆ 10ಕ್ಕೆ ಶಾಲಿನಿ-2 ಸೊಸೈಟಿಗೆ ಆಗಮಿಸಿದ ಅವರು, ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮನೆ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿರುವ ಅಂದರೆ ಸೂರ್ಯ ಘರ್ ಯೋಜನೆಯ ಅನೇಕ ಫಲಾನುಭವಿಗಳೊಂದಿಗೆ ಮಾತನಾಡಿದರು. ಸುಮಾರು 20 ನಿಮಿಷ ಈ ಮಾತುಕತೆ ನಡೆಯಿತು.

75,021 ಕೋಟಿ ರೂ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಫೆ.29ರಂದು ಚಾಲನೆ ನೀಡಿತ್ತು. ಜನರು ತಮ್ಮ ಮನೆಯ ಮೇಲ್ಛಾವಣಿ ಮೇಲೆ ಸೋಲಾರ್​ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಗತ್ಯ ವಿದ್ಯುತ್​ ಉತ್ಪಾದಿಸುವ ಯೋಜನೆ ಇದಾಗಿದೆ.

4ನೇ ಜಾಗತಿಕ ನವೀಕರಿಸಬಹುದಾದ ಶಕ್ತಿ ಹೂಡಿಕೆದಾರರ ಸಭೆ ಮತ್ತು ಎಕ್ಸ್​ಪೋದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಹೊಸ ಮತ್ತು ನವೀಕರಣ ಶಕ್ತಿ ಸಚಿವಾಲಯ ಆಯೋಜಿಸಿರುವ ಮೂರು ದಿನಗಳ ಸಮಾವೇಶದಲ್ಲಿ ಹಣಕಾಸು, ಉದ್ಯಮ, ಸರ್ಕಾರದಿಂದ 10 ಸಾವಿರ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕೇಂದ್ರ ಹೊಸ ಮತ್ತು ನವೀಕರಣ ಶಕ್ತಿ ಸಚಿವರಾದ ಪ್ರಲ್ಹಾದ್​ ಜೋಶಿ, ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​, ಆಂಧ್ರ ಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು, ರಾಜಸ್ಥಾನ ಸಿಎಂ ಭಜನ್​ಲಾಲ್​ ಶರ್ಮಾ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋದಲ್ಲಿ ಮುಖ್ಯಮಂತ್ರಿಗಳ ಸಭೆ, ಸಿಇಒ ರೌಂಡ್‌ಟೇಬಲ್ ಸೇರಿದಂತೆ ಹಲವು ಸಭೆಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ನವೀಕರಣ ಶಕ್ತಿಯ ಜಾಗತಿಕ ನಾಯಕನಾಗಲಿದೆ ಎಂದರು.

ಶ್ರೀ ಸೋಮನಾಥ ದೇಗುಲ ಟ್ರಸ್ಟ್​ ಪದಾಧಿಕಾರಿಗಳೊಂದಿಗೆ ಸಭೆ: ಇದೇ ವೇಳೆ ಪ್ರಧಾನಿ ವಿಶ್ವವಿಖ್ಯಾತ ಸೋಮನಾಥ​ ದೇಗುಲದ ಟ್ರಸ್ಟ್​ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಯಾತ್ರಾರ್ಥಿಗಳ ಅನುಭವ ಹೆಚ್ಚಿಸುವ ಮತ್ತು ಅನೇಕ ಸೌಲಭ್ಯಗಳಲ್ಲಿ ಸುಧಾರಣೆ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. (ಪಿಟಿಐ/ಎಎನ್​ಐ)

ಇದನ್ನೂ ಓದಿ: ಜಾರ್ಖಂಡ್​: 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.