ಶ್ರೀನಗರ (ಜಮ್ಮು- ಕಾಶ್ಮೀರ): I.N.D.I.A ಕೂಟದ ಮಿತ್ರ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಮೈತ್ರಿಗೆ ಯಾವುದೇ ಅಜೆಂಡಾ ಇಲ್ಲ. ಕೇವಲ ಸೀಟು ಹಂಚಿಕೆಗಾಗಿ ಅವುಗಳು ಒಂದಾಗಿವೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿರುವ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಚುನಾವಣೆ ಪೂರ್ವ ಮಾಡಿಕೊಂಡಿರುವ ಮೈತ್ರಿಗೆ ಯಾವುದೇ ದೊಡ್ಡ ಗುರಿ ಇಲ್ಲ. ತಮ್ಮ ಕಾರ್ಯಸೂಚಿಯನ್ನು ಒಪ್ಪಿಕೊಂಡಲ್ಲಿ, ತಾವು ಚುನಾವಣಾ ಕಣದಿಂದ ಬೇಕಾದರೆ ಹಿಂದೆ ಸರಿಯುವುದಾಗಿ ಹೇಳಿದರು.
VIDEO | Jammu and Kashmir Assembly Polls 2024: Former Jammu and Kashmir CM and PDP supremo Mehbooba Mufti (@MehboobaMufti), along with other PDP leaders, releases her party manifesto in Srinagar.
— Press Trust of India (@PTI_News) August 24, 2024
(Full video available on PTI Videos - https://t.co/dv5TRARJn4) pic.twitter.com/Wg8AqMcYKV
ಉಗ್ರವಾದ ನಿಲ್ಲಬೇಕು: ಜಮ್ಮು- ಕಾಶ್ಮೀರದಲ್ಲಿನ ಸಮಸ್ಯೆಗಳ ಪರಿಹಾರವೇ ತಮ್ಮ ಪಕ್ಷದ ಮುಖ್ಯ ಧ್ಯೇಯ. ಮೊದಲು ಉಗ್ರ ಚಟುವಟಿಕೆ ನಿಲ್ಲಬೇಕು. ಅದಕ್ಕೆ ಕಡಿವಾಣ ಹಾಕಿ, ಇಲ್ಲಿನ ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕು. ಕಾಶ್ಮೀರದ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ಹೊರತುಪಡಿಸಿ ಬೇರೇನೂ ಮುಖ್ಯವಲ್ಲ ಎಂದು ಮುಫ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮನ್ವಯತೆ, ವ್ಯಾಪಾರ- ವಹಿವಾಟು ಮರುಸ್ಥಾಪನೆ ಮತ್ತು ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಚುನಾವಣೆ ನಡೆಯಬೇಕಿದೆ. ಇವೆಲ್ಲವೂ ಪಿಡಿಪಿಯ ಕಾರ್ಯಸೂಚಿಗಳಾಗಿವೆ. ಕಾಂಗ್ರೆಸ್ ಮತ್ತು ಎನ್‌ಸಿ ಮೈತ್ರಿಕೂಟ ಇವುಗಳನ್ನು ಒಪ್ಪಬೇಕು. ಭದ್ರತಾ ಕಾಯ್ದೆ (UAPA), ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಯಂತಹ ಕಾನೂನುಗಳನ್ನು ರದ್ದಾಗಬೇಕು. ಬರೀ ಸೀಟು ಹಂಚಿಕೆಗಾಗಿ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮುಫ್ತಿ ಹೇಳಿದರು.
PDP Manifesto 2024 : YOUTH & EMPLOYMENT@jkpdp @mehboobaMufti #Election2024 #JammuKashmirElections #Manifesto pic.twitter.com/0cF8jpSLWN
— Gulistan News (@GulistanNewsTV) August 24, 2024
ಪಿಂಚಣಿ ಡಬಲ್- ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್: ಚುನಾವಣೆಗೂ ಮೊದಲು ಪಿಡಿಪಿ ಭರಪೂರ ಭರವಸೆಗಳನ್ನು ಘೋಷಿಸಿದೆ. 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ನೀರಿನ ತೆರಿಗೆ ರದ್ದು, ಬಡವರಿಗೆ ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತ, ವೃದ್ಧಾಪ್ಯ ಮತ್ತು ವಿಧವಾ ವೇತನ ದ್ವಿಗುಣ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ, ಮಹಿಳೆಯರಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ, ಸ್ಥಳೀಯ ರೈತರನ್ನು ಬೆಂಬಲಿಸಲು ಸೇಬುಗಳ ಮೇಲೆ 100 ಪ್ರತಿಶತ ಆಮದು ಸುಂಕವನ್ನು ಘೋಷಿಸಲಾಗಿದೆ.
10 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ 87 ಸ್ಥಾನಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ: ವಲಸಿಗ ಕಾಶ್ಮೀರಿಗಾಗಿ ಪ್ರತ್ಯೇಕ ಮತಗಟ್ಟೆ: ಈ ಮೂರು ಸ್ಥಾನಗಳಲ್ಲಿ ಮತ ಹಾಕಲು ಅವಕಾಶ - JK ASSEMBLY POLLS