ETV Bharat / bharat

ಕಾಶ್ಮೀರ ಮೂರನೇ ಹಂತದ ಚುನಾವಣೆ: ಮಂಗಳವಾರ 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ - Jammu and Kashmir assembly election - JAMMU AND KASHMIR ASSEMBLY ELECTION

ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳಾದ್ಯಂತ ಮೂರನೇ ಹಂತದ ಚುನಾವಣೆ ಅಕ್ಟೋಬರ್​ 01 ರಂದು ನಡೆಯಲಿದೆ. 39.18 ಲಕ್ಷ ಮತದಾರರು 415 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

election
ವಿಧಾನಸಭಾ ಚುನಾವಣೆ (ETV Bharat)
author img

By ETV Bharat Karnataka Team

Published : Sep 30, 2024, 9:53 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಅಕ್ಟೋಬರ್ 01 ರಂದು ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ 3ನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಕಾಶ್ಮೀರ ವಿಭಾಗದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ, ಜಮ್ಮು ವಿಭಾಗದಲ್ಲಿ ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ದೇಶದ ಗಮನ ಸೆಳೆದಿದೆ. ಇನ್ನು ಜಮ್ಮು ಜಿಲ್ಲೆಯ ಅಖ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡದಲ್ಲಿರುವುದು ಕೇವಲ ಮೂವರು ಅಭ್ಯರ್ಥಿಗಳು.

ಕಾಶ್ಮೀರ ವಿಭಾಗದಲ್ಲಿ, ಕರ್ನಾಹ್, ಟ್ರೆಹ್ಗಾಮ್, ಕುಪ್ವಾರಾ, ಲೋಲಾಬ್, ಹಂದ್ವಾರಾ, ಲಂಗೇಟ್, ಸೋಪೋರ್, ರಫಿಯಾಬಾದ್, ಉರಿ, ಬಾರಾಮುಲ್ಲಾ, ಗುಲ್ಮಾರ್ಗ್, ವಾಗೂರಾ-ಕ್ರೀರಿ, ಪಟ್ಟಾನ್, ಸೋನಾವರಿ, ಬಂಡಿಪೋರಾ ಮತ್ತು ಗುರೇಜ್ (ಎಸ್‌ಟಿ) ಒಳಗೊಂಡ 16 ವಿಧಾನಸಭಾ ಕ್ಷೇತ್ರಗಳಿವೆ.

ಜಮ್ಮು ವಿಭಾಗದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಉಧಮ್‌ಪುರ ಪಶ್ಚಿಮ, ಉಧಮ್‌ಪುರ ಪೂರ್ವ, ಚೆನಾನಿ, ರಾಮನಗರ (SC), ಬನಿ, ಬಿಲ್ಲವರ್, ಬಸೋಹ್ಲಿ, ಜಸ್ರೋಟಾ, ಕಥುವಾ (SC), ಹೀರಾನಗರ, ರಾಮಗಢ (SC), ಸಾಂಬಾ, ವಿಜಯಪುರ, ಬಿಷ್ನಾಹ್ (SC), ಸುಚೇತ್‌ಗಢ (SC) ಒಳಗೊಂಡಿದೆ. ಜಮ್ಮು ದಕ್ಷಿಣದಲ್ಲಿ ಜಮ್ಮು ಪೂರ್ವ, ನಗ್ರೋಟಾ, ಜಮ್ಮು ಪಶ್ಚಿಮ, ಜಮ್ಮು ಉತ್ತರ, ಮರ್ಹ್ (ಎಸ್‌ಸಿ), ಅಖ್ನೂರ್ (ಎಸ್‌ಸಿ) ಮತ್ತು ಛಾಂಬ್ ಈ ಹಂತದಲ್ಲಿ ಮತದಾನ ನಡೆಯಲಿದೆ.

ಮೂರನೇ ಹಂತದಲ್ಲಿ 39,18,220 ಮತದಾರರು ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದು, ಮಂಗಳವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 20,09,033 ಪುರುಷ ಮತದಾರರು, 19,09,130 ​​ಮಹಿಳಾ ಮತದಾರರು ಮತ್ತು 57 ತೃತೀಯಲಿಂಗಿ ಮತದಾರಿದ್ದಾರೆ. 18 ರಿಂದ 19 ವರ್ಷ ವಯಸ್ಸಿನ 1.94 ಲಕ್ಷ ಯುವ ಮತದಾರರು 3 ನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಹಂತದಲ್ಲಿ 35,860 ವಿಕಲಚೇತನರು (PwDs) ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 32,953 ಮತದಾರರು ಭಾಗವಹಿಸಲಿದ್ದಾರೆ.

ದೆಹಲಿಯಲ್ಲಿ 4 ಮತ್ತು ಉಧಮ್‌ಪುರ ಜಿಲ್ಲೆಯಲ್ಲಿ 1 ಕೇಂದ್ರ: ಕಾಶ್ಮೀರ ವಿಭಾಗದ ವಲಸೆ ಮತದಾರರಿಗಾಗಿ ಒಟ್ಟು 24 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಜಮ್ಮುವಿನಲ್ಲಿ 19 ವಿಶೇಷ ಮತಗಟ್ಟೆಗಳು, ದೆಹಲಿಯಲ್ಲಿ 4 ಮತ್ತು ಉಧಮ್‌ಪುರ ಜಿಲ್ಲೆಯಲ್ಲಿ 1 ಕೇಂದ್ರಗಳಿವೆ.

ಪ್ರತಿ ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಆಫೀಸರ್ ಸೇರಿದಂತೆ ನಾಲ್ವರು ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಒಟ್ಟು 3ನೇ ಹಂತದ ವಿಧಾನಸಭಾ ಚುನಾವಣೆಗೆ 20,000ಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇದನ್ನೂ ಓದಿ : 'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning

ETV Bharat Logo

Copyright © 2024 Ushodaya Enterprises Pvt. Ltd., All Rights Reserved.