ETV Bharat / bharat

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಜಲೀಲ್ ಪಠಾಣ್​ ಬಳಿ ಇದೆ ದುಬಾರಿ ಬಂಗಲೆ; ನಕಲಿ ಅಂಗವಿಕಲ ಪತ್ರವೂ ಬಯಲು!! - NEET Paper Leak Case - NEET PAPER LEAK CASE

ನೀಟ್​ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಸರ್ಕಾರಿ ಶಾಲಾ ಶಿಕ್ಷಕ ಜಲೀಲ್ ಪಠಾಣ್ ಮಹಾರಾಷ್ಟ್ರದ ಲಾತೂರ್​ನಲ್ಲಿ 1 ಕೋಟಿಗೂ ಅಧಿಕ ಬೆಲೆ ಬಾಳುವ ಬಂಗಲೆ ಜತೆಗೆ ಜಮೀನನ್ನು ಹೊಂದಿರುವುದಾಗಿ ಅಧಿಕಾರಿಗಳು ವಿಚಾರಣೆ ವೇಳೆ ಪತ್ತೆ ಹಚ್ಚಿದ್ದಾರೆ.

ಆರೋಪಿ ಜಲೀಲ್ ಪಠಾಣ್  ಮನೆ
ಆರೋಪಿ ಜಲೀಲ್ ಪಠಾಣ್ ಮನೆ (ETV Bharat)
author img

By ETV Bharat Karnataka Team

Published : Jun 29, 2024, 9:04 AM IST

ಲಾತೂರ್​ (ಮಹಾರಾಷ್ಟ್ರ): ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಜಲೀಲ್ ಪಠಾಣ್ ಎಂಬಾತ ಒಂದು ಕೋಟಿಗೂ ಅಧಿಕ ಬೆಲೆಬಾಳುವ ಬಂಗಲೆ ಹೊಂದಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನಾಗಿರುವ ಜಲೀಲ್​ನನ್ನು ನೀಟ್​ ಹಗರಣ ಪ್ರಕರಣದಲ್ಲಿ ಲಾತೂರ್​ನಲ್ಲಿ ಬಂಧಿಸಲಾಗಿದೆ. ಪೊಲೀಸ್​ ವಿಚಾರಣೆ ವೇಳೆ ಲಾತೂರಿನ ಉದ್ಗೀರ್ ಪಟ್ಟಣದ ಜಲ್ಕೋಟ್ ಎಂಬ ಪ್ರದೇಶದಲ್ಲಿ ಬರೋಬ್ಬರಿ 1 ಕೋಟಿಗೂ ಅಧಿಕ ಬೆಲೆಬಾಳುವ ಬಂಗಲೆ ನಿರ್ಮಿಸಿರುವುದಾಗಿ ಬೆಳಕಿಗೆ ಬಂದಿದೆ. ಜಲೀಲ್ ಪಠಾಣ್ ಹೌಸ್ ಎಂಬ ಮೂರು ಅಂತಸ್ತಿನ ಕಟ್ಟಡವನ್ನು ಹೊಂದಿದ್ದಾನೆ. ಜತೆಗೆ ಸರ್ಕಾರಿ ಹುದ್ದೆಗಾಗಿ ನಕಲಿ ಅಂಗವಿಕಲತೆ ಪ್ರಮಾಣ ಪತ್ರ ತಯಾರಿಸಿರುವುದನ್ನೂ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಲಾತೂರ್‌ನ ಕಾಟ್‌ಪುರ ಜಿಲ್ಲಾ ಪರಿಷತ್‌ ಶಾಲೆಯ ಮುಖ್ಯ ಶಿಕ್ಷಕನಾಗಿರುವ ಜಲೀಲ್‌ ಪಠಾಣ್​ 2009ರಲ್ಲಿ ಸರ್ಕಾರಿ ಶಿಕ್ಷಕರಾಗಿ ನೇಮಕಗೊಂಡಿದ್ದ. ನಂತರ ಲಾತೂರ್ ಜಿಲ್ಲೆಗೆ ವರ್ಗಾವಣೆಗೊಂಡು ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದಿದ್ದ. ಇದೀಗ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಜಲೀಲ್​ನನ್ನು ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.

ನಕಲಿ ಅಂಗವಿಕಲ ಪ್ರಮಾಣಪತ್ರ: ಆರೋಪಿ ಜಲೀಲ್​ ಸರ್ಕಾರಿ ಉದ್ಯೋಗ ನೇಮಕಾತಿಗಾಗಿ ಪುಣೆ ಜಿಲ್ಲಾ ಸರ್ಜನ್ ಸಹಿ ಮಾಡಿದ ಪ್ರಮಾಣಪತ್ರವನ್ನು ಲಗತ್ತಿಸಿದ್ದಾನೆ. ಈ ಪ್ರಮಾಣಪತ್ರವು ಬೋಗಸ್ ಎಂದು ಪತ್ತೆ ಹಚ್ಚಿರುವ ಅಧಿಕಾರಿಗಳು ಇದನ್ನು ಪರಿಶೀಲಿಸಲು ಪುಣೆಯ ವಿಭಾಗೀಯ ಆಯುಕ್ತರಿಗೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅದರ ವರದಿ ಬರಲಿದೆ ಎಂದು ಮೂಲಗಳು ತಿಳಿಸಿವೆ.

ತಲೆಮರೆಸಿಕೊಂಡಿದ್ದ ಆರೋಪಿ: ಆರೋಪಿ ಜಲೀಲ್ ಪಠಾಣ್ ನೀಟ್​ ಹಗರಣ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ. ತೀವ್ರ ಹುಡುಕಾಟ ನಡೆಸಿದ ಪೊಲೀಸರು ಅಂತಿಮವಾಗಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ನೀಟ್​​​ ಯುಜಿ ಪೇಪರ್​​ ಸೋರಿಕೆ ಪ್ರಕರಣದಲ್ಲಿ ರಾಜಸ್ಥಾನದ ವೈದ್ಯಕೀಯ ಕಾಲೇಜಿಗೂ ನಂಟು: 10 ವೈದ್ಯಕೀಯ ವಿದ್ಯಾರ್ಥಿಗಳ ವಿಚಾರಣೆ - NEET UG scam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.