ETV Bharat / bharat

ನಾಗ್ಪುರ: ಬಿಜೆಪಿ ನಾಯಕನ ಪುತ್ರನ ಕಾರು ಅಪಘಾತ; ಪೊಲೀಸರು ಹೇಳಿದ್ದೇನು? - Nagpur Car Accident

author img

By PTI

Published : Sep 10, 2024, 1:36 PM IST

ಸೋಮವಾರ ನಾಗ್ಪುರದ ರಾಮದಾಸ್ಪೇಟ್ ಪ್ರದೇಶದಲ್ಲಿ ಬಿಜೆಪಿ ಮುಖಂಡ ಬವಾಂಕುಲೆ ಅವರ ಪುತ್ರ ಸಂಕೇತ್ ಒಡೆತನದ ಔಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.

nagpur-bjp-leader-sons-audi-car-accident-case-police-arrest-driver
ಸಾಂದರ್ಭಿಕ ಚಿತ್ರ (ETV Bharat)

ನಾಗ್ಪುರ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್​ ಬವಾಂಕುಲೆ ಅವರ ಮಗನಿಗೆ ಸೇರಿದ್ದ ಐಷಾರಾಮಿ ಔಡಿ ಕಾರು ಅಪಘಾತ ಪ್ರಕರಣದಲ್ಲಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಸಂದರ್ಭದಲ್ಲಿ ಬಿಜೆಪಿ ಮುಖ್ಯಸ್ಥರ ಮಗ ಸಂಕೇತ್​ ಕಾರು ಚಲಾಯಿಸುತ್ತಿರಲಿಲ್ಲ. ಚಾಲಕ ಅರ್ಜುನ್​ ಹವಾರೆ ಚಾಲನೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ರಾಮದಾಸ್ಪೇಟ್ ಪ್ರದೇಶದಲ್ಲಿ ಬವಾಂಕುಲೆ ಅವರ ಪುತ್ರ ಸಂಕೇತ್ ಒಡೆತನದ ಔಡಿ ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಪೊಲೀಸರು ಹಾವರೆ ಮತ್ತು ರೋನಿತ್ ಚಿತ್ತಮ್ವಾರ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಆರಂಭದಲ್ಲಿ ಔಡಿ ಕಾರು​ ದೂರುದಾರ ಜೀತೆಂದ್ರ ಸೊಂಕಬ್ಳೆ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ದ್ವಿಚಕ್ರ ವಾಹನಕ್ಕೆ ಗುದ್ದಿ, ಇಬ್ಬರು ಗಾಯಗೊಂಡಿದ್ದರು. ಇದಾದ ನಂತರ ಮಂಕಪುರ್​ ಪ್ರದೇಶದಲ್ಲಿ ಮತ್ತೊಂದಿಷ್ಟು ಕಾರುಗಳಿಗೆ ಡಿಕ್ಕಿ ಹೊಡೆದಿತ್ತು. ಟೀ ಪಾಯಿಂಟ್​ನಲ್ಲಿ ಪೊಲೊ ಕಾರಿಗೂ ಡಿಕ್ಕಿಯಾಗಿತ್ತು. ಮಂಕಪುರ್​ ಸೇತುವೆಯ ಬಳಿ ಪೊಲೀಸರು ಕಾರು ಪತ್ತೆ ಹಚ್ಚಿದ್ದರು. ಈ ವೇಳೆ ಅರ್ಜುನ್​ ಹವಾರೆ, ರೋನಿತ್​ ಚಿತ್ತಮ್ವಾರ್​ ಇದ್ದರು. ಇಬ್ಬರನ್ನೂ ತೆಹ್ಸಿಲ್​ ಪೊಲೀಸ್​ ಠಾಣೆಗೆ ಕರೆತಂದು ಸಿತಬುಲ್ದಿ ಪೊಲೀಸ್​ ಠಾಣೆಗೆ ಒಪ್ಪಿಸಲಾಗಿತ್ತು.

ಔಡಿ ಕಾರಿನಲ್ಲಿದ್ದ ಇಬ್ಬರು ಘಟನೆ ನಡೆಯುವ ಮುನ್ನ ಧರಂಪೀತ್​ನ​ ಬಾರ್​ನಿಂದ ಬಂದಿದ್ದು, ಆಲ್ಕೋಹಾಲ್​​ ಪತ್ತೆ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಸೊಂಕಬ್ಳೆ ಅವರ ದೂರಿನ ಮೇರೆ ವೇಗದ ಚಾಲನೆ ಮತ್ತು ಇತರೆ ಅಪರಾಧಗಳ ಕುರಿತು ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೂ ಅಪಘಾತ ಸಂದರ್ಭದಲ್ಲಿ ಪರಾರಿಯಾದ ಸಂಕೇತ್​ ಬವಾಂಕುಲೆ ಮತ್ತು ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಲ್ಲ.

ಈ ಕುರಿತು ಹೇಳಿಕೆ ನೀಡಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಚಂದ್ರಶೇಖರ್​ ಬವಾಂಕುಲೆ, ಮಗ ಸಂಕೇತ್​ ಹೆಸರಿನಲ್ಲಿ ಕಾರ್​​ ನೋಂದಣಿಯಾಗಿದೆ. ಪ್ರಕರಣದಲ್ಲಿ ಯಾವುದೆ ಪಕ್ಷಪಾತವಿಲ್ಲದೇ ತನಿಖೆ ಮಾಡಬೇಕು. ತಪ್ಪಿತಸ್ಥರವ ವಿರುದ್ಧ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.

ಇದನ್ನೂ ಓದಿ: ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಶಂಕಿತ ಎಂಪಾಕ್ಸ್ ಲಕ್ಷಣ: ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.