ETV Bharat / bharat

ಹಿರಿಯ ಉದ್ಯಮಿ ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲಿ ಚಿಕಿತ್ಸೆ

ಹಿರಿಯ ಉದ್ಯಮಿ ರತನ್​ ಟಾಟಾ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯ ಉದ್ಯಮಿ ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು
ಹಿರಿಯ ಉದ್ಯಮಿ ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು (ETV Bharat)
author img

By ETV Bharat Karnataka Team

Published : Oct 9, 2024, 10:38 PM IST

ಮುಂಬೈ: ದೇಶದ ಖ್ಯಾತ ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್ ಟಾಟಾ (86) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲವೊಂದು ಬುಧವಾರ ತಿಳಿಸಿದೆ.

ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ರತನ್ ಟಾಟಾ ಅವರನ್ನು ಸ್ಥಳಾಂತರಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಿರಿಯ ಉದ್ಯಮಿಯ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ರಕ್ತದೊತ್ತಡ ಗಣನೀಯ ಕುಸಿತ ಕಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಇದು ಕೇವಲ ವದಂತಿ ಎಂದು ರತನ್​ ಟಾಟಾ ಅವರೇ ಸ್ಪಷ್ಟನೆ ನೀಡಿದ್ದರು.

ಸಾಮಾಜಿಕ ಜಾಲತಾಣ ಖಾತೆಗಳಾದ ಎಕ್ಸ್​ ಮತ್ತು ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿರುವ ಅವರು, "ಮುಂಬೈ ಆಸ್ಪತ್ರೆಯಲ್ಲಿ ನನ್ನನ್ನು ದಾಖಲಿಸಿದ್ದಾರೆ ಎಂಬುದು ಕೇವಲ ವದಂತಿ. ಇದೆಲ್ಲವೂ ನಿರಾಧಾರ. ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಯಾವುದೇ ಆತಂಕ ಬೇಡ. ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ" ಎಂದು ಸಾಮಾಜಿಕ ಮಾಧ್ಯಮದ ನೆಟ್ಟಿಗರು ಮತ್ತು ಮಾಧ್ಯಮಗಳಲ್ಲಿ ರತನ್ ಟಾಟಾ ವಿನಂತಿಸಿಕೊಂಡಿದ್ದರು.

ದೇಶದ ಯಶಸ್ವಿ ಉದ್ಯಮಿ: ರತನ್​ ಟಾಟಾ ಅವರು ಮಾರ್ಚ್ 1991ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2012ರಂದು ಕೆಲಸದಿಂದ ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯವು ಬಹುಪಟ್ಟು ಬೆಳೆಯಿತು. ಅಧಿಕಾರ ವಹಿಸಿಕೊಂಡ ವೇಳೆ ಕಂಪನಿಯ ಒಟ್ಟು ಮೌಲ್ಯ 10 ಸಾವಿರ ಕೋಟಿ ರೂ.ಯಷ್ಟಿತ್ತು. 10 ವರ್ಷಗಳ ಅವಧಿಯಲ್ಲಿ ಕಂಪನಿಯ ನಿವ್ವಳ ಮೌಲ್ಯ 100 ಬಿಲಿಯನ್ ಡಾಲರ್​ ದಾಟಿತ್ತು. ಇದು ಟಾಟಾರ ಉದ್ಯಮ ಹಿಡಿತಕ್ಕೆ ಸಾಕ್ಷಿಯಾಗಿತ್ತು.

ರತನ್​ ಟಾಟಾ ಅವರ ನಿವೃತ್ತಿಯ ನಂತರ, ಉತ್ತರಾಧಿಕಾರಿಯಾಗಿ ಬಂದ ಸೈರಸ್ ಮಿಸ್ತ್ರಿ ಅವರಿಂದ ಸಂಸ್ಥೆಯಲ್ಲಿ ಬಿರುಕುಂಟಾಯಿತು. ಮಿಸ್ತ್ರಿ ಅವರನ್ನು 2016ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ವಜಾಗೊಳಿಸಲಾಯಿತು. ಬಳಿಕ ರತನ್​ ಟಾಟಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕಾಯಿತು. ಬಳಿಕ 2017ರಲ್ಲಿ ಎನ್.ಚಂದ್ರಶೇಖರನ್ ಅವರಿಗೆ ಸಂಸ್ಥೆಯ ಅಧಿಕಾರ ನೀಡಿ, ಟಾಟಾ ಸನ್ಸ್‌ನ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು ವದಂತಿ: ಹಿರಿಯ ಉದ್ಯಮಿ ಸ್ಪಷ್ಟನೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.