ETV Bharat / bharat

ಯುವ ರೈತನಿಂದ ಬಹುಪದರ​ ಕೃಷಿ: ಎಕರೆ ಭೂಮಿಯಲ್ಲಿ 60 ಬಗೆಯ ಬೆಳೆಗಳು; ವಾರ್ಷಿಕ 8 ಲಕ್ಷ ಆದಾಯ! - Multi Layer Farming Model

ಪ್ರಸ್ತುತ ದಿನಗಳಲ್ಲಿ ರೈತರು ಎಕರೆಗಟ್ಟಲೆ ಜಮೀನು ಹೊಂದಿದ್ದರೂ ಸರಿಯಾದ ಆದಾಯವಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿರುತ್ತಾರೆ. ಆದರೆ, ಯುವ ರೈತರೊಬ್ಬರು ಬಹುಪದರ​ (ಮಲ್ಟಿ ಲೇಯರ್)​ ಕೃಷಿ ಮಾದರಿಯ ಮೂಲಕ ಬಹುಬೆಳೆ ಬೆಳೆದು ಲಕ್ಷಾಂತರ ರೂ. ಲಾಭ ಕಂಡಿದ್ದಾರೆ.

ALL 12 MONTHS INCOME FARMING MODEL  AKASH CHAURASIA FARMING MODEL  60 TYPES OF VEGETABLE FRUIT GROWING  MULTI LAYER FARMING TECHNIQUE
ಮಲ್ಟಿ ಲೇಯರ್​ ಕೃಷಿ ಪದ್ಧತಿ (ETV Bharat)
author img

By ETV Bharat Karnataka Team

Published : Aug 11, 2024, 11:02 AM IST

ಮಲ್ಟಿ ಲೇಯರ್​ ಕೃಷಿ ಪದ್ಧತಿ (ETV Bharat)

ಸಾಗರ್​ (ಮಧ್ಯಪ್ರದೇಶ): ಶತಮಾನಗಳಿಂದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರೂ ರೈತರಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ಆಧುನಿಕ ಕೃಷಿ ಹಾಗೂ ತಂತ್ರಜ್ಞಾನದ ಕೊರತೆಯಿಂದ ರೈತರು ಆದಾಯ ಹೆಚ್ಚಿಸಿಕೊಳ್ಳಲಾಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದೆಲ್ಲದರ ನಡುವೆ, ಮಧ್ಯಪ್ರದೇಶದ ಸಾಗರ ಜಿಲ್ಲೆಯ ಯುವ ರೈತರೊಬ್ಬರು ಕೇವಲ ಒಂದು ಎಕರೆ ಜಮೀನಿನಲ್ಲಿ 60 ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಬಹುಪದರ​ ಕೃಷಿ ತಂತ್ರ ಬಳಸಿ ಯಶಸ್ಸು ಸಾಧಿಸಿದ್ದಾರೆ.

ವರ್ಷವಿಡೀ ರೈತನಿಗೆ ಆದಾಯ!: ಸಾಗರ ಜಿಲ್ಲೆಯ ಯುವ ರೈತ ಆಕಾಶ್ ಚೌರಾಸಿಯಾ ಅವರಿಗೆ ಒಂದು ಎಕರೆ ಜಮೀನಿದೆ. 12 ತಿಂಗಳ ಕಾಲವೂ ಆದಾಯ ಗಳಿಸಬಹುದಾದ ಮಲ್ಟಿ ಲೆಯರ್​ ಕೃಷಿ ಮಾದರಿಯನ್ನು ಅಳವಡಿಸಿಕೊಂಡು ನಿರಂತರ ಲಾಭ ಗಳಿಸುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿ ಮಾಡಿದರೆ ವರ್ಷದಲ್ಲಿ ಕೇವಲ ಎರಡು ಬೆಳೆ ಮಾತ್ರ ಸಿಗುತ್ತದೆ. ಬಹುಪದರ ಕೃಷಿ​ ತಂತ್ರದೊಂದಿಗೆ ವರ್ಷವಿಡೀ ಕೃಷಿ ಮಾಡಬಹುದು. ಇದರಿಂದ ರೈತನಿಗೆ ಆದಾಯವೂ ಬರಲಿದೆ ಎನ್ನುತ್ತಾರೆ ಯುವ ರೈತ ಆಕಾಶ್.

ALL 12 MONTHS INCOME FARMING MODEL  AKASH CHAURASIA FARMING MODEL  60 TYPES OF VEGETABLE FRUIT GROWING  MULTI LAYER FARMING TECHNIQUE
ಮಲ್ಟಿ ಲೇಯರ್​ ಕೃಷಿ ಪದ್ಧತಿ (ETV Bharat)

ದೇಶದ ರೈತರು ವರ್ಷದ ಎರಡು ಋತುಗಳಲ್ಲಿ ಬೆಳೆಗಳನ್ನು ಹಾಕುತ್ತಾರೆ. ಅಂದರೆ ರೈತರಿಗೆ ವರ್ಷಕ್ಕೆ ಎರಡು ಬಾರಿ ಮಾತ್ರ ಆದಾಯ ಸಿಗುತ್ತದೆ. ಈ ಆದಾಯದಿಂದ ಈಗಿನ ಕಾಲದಲ್ಲಿ ಬದುಕುವುದು ತುಂಬಾ ಕಷ್ಟ. ಹೀಗಾಗಿ, ವರ್ಷವಿಡೀ ಆದಾಯ ನೀಡುವ ಕೃಷಿ ಮಾದರಿಯನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಯೋಚಿಸಿದೆ. ಒಂದು ಎಕರೆ ಜಮೀನಿನಲ್ಲಿ 60 ವಿವಿಧ ಬೆಳೆಗಳನ್ನು ಹಾಕಿದ್ದೇನೆ. ಅನೇಕ ರೈತರು ಬೇಸಿಗೆಯಲ್ಲಿ ಬೆಳೆಗಳನ್ನು ಬೆಳೆಯುವುದಿಲ್ಲ. ಏಕೆಂದರೆ ಕೃಷಿಗೆ ಬೇಕಾದಷ್ಟು ನೀರು ಸಿಗುವುದಿಲ್ಲ ಎನ್ನುತ್ತಾರೆ ಯುವ ರೈತ.

ಆದ್ದರಿಂದ ನಾನು ವಿನ್ಯಾಸಗೊಳಿಸಿದ ಬಹುಪದರ ಮಾದರಿಯು ಸಣ್ಣ ರೈತರಿಗೆ 12 ತಿಂಗಳವರೆಗೆ ಆದಾಯವನ್ನು ನೀಡುತ್ತದೆ. ಪ್ರಸ್ತುತ ನಾನು ವರ್ಷಕ್ಕೆ 7 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳವರೆಗೆ ಗಳಿಸುತ್ತಿದ್ದೇನೆ. ಮಲ್ಟಿ ಲೇಯರ್​ ಕೃಷಿಯು ಹಸಿರು ತರಕಾರಿ, ಬೇಳೆಕಾಳುಗಳು ಮತ್ತು ಹಣ್ಣುಗಳಿಂದ ಆದಾಯವನ್ನು ಗಳಿಸಬಹುದು. ಶುಂಠಿ ಮತ್ತು ಅರಿಶಿಣದಂತಹ ವಸ್ತುಗಳ ಮೂಲಕ ನೀವು ಋತುಮಾನವನ್ನು ಲೆಕ್ಕಿಸದೆ ವಾರ್ಷಿಕ ಆದಾಯವನ್ನು ಪಡೆಯಬಹುದು ಎನ್ನುತ್ತಾರೆ ಯುವ ರೈತ ಆಕಾಶ್ ಚೌರಾಸಿಯಾ.

ಬಹುಪದರ ಕೃಷಿ ಮಾದರಿಯ ಪ್ರಕಾರ ಒಂದು ಎಕರೆಯಲ್ಲಿ ಕೃಷಿ ಮಾಡಲು ಸುಮಾರು ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ವೆಚ್ಚವಾಗಲಿದೆ. ಅಂದರೆ ಬೀಜಗಳ ವೆಚ್ಚ, ಉಳುಮೆ, ಕೂಲಿ ಇತ್ಯಾದಿಗಳನ್ನು ಈ ವೆಚ್ಚದಲ್ಲಿ ಮಾಡಲಾಗುತ್ತದೆ. ನಿಮ್ಮ ಜಮೀನಿನಲ್ಲಿ ಈ​ ಕೃಷಿ ಮಾದರಿಯನ್ನು ಒಮ್ಮೆ ಅಳವಡಿಸಿದರೆ, ಸುಮಾರು 5-6 ಆರು ವರ್ಷಗಳವರೆಗೆ ಮುಂದುವರೆಸಬಹುದು. ಅಲ್ಲದೆ, ಉತ್ತಮ ಬೆಳೆ, ಉತ್ತಮ ಇಳುವರಿ ಪಡೆಯಬಹುದಾಗಿದೆ. ಎಲ್ಲಾ ಬೆಳೆಗಳು ಸೇರಿ 250-300 ಕ್ವಿಂಟಾಲ್ ಉತ್ಪಾದನೆಯಾಗುತ್ತದೆ. ಅವುಗಳ ಬೆಲೆಗಳ ಆಧಾರದ ಮೇಲೆ ನೀವು ವಾರ್ಷಿಕ 7 ಲಕ್ಷ ರೂ. ಆದಾಯ ಪಡೆಯಬಹುದಾಗಿದೆ ಎಂದರು.

ಈ ವರ್ಷದ ಫೆಬ್ರವರಿಯಲ್ಲಿ ನಾನು ಮಲ್ಟಿ ಲೇಯರ್​ ಕೃಷಿ ಮಾದರಿಯಲ್ಲಿ ಟೊಮೆಟೊ, ಬೆಂಡೆಕಾಯಿ, ಮೆಣಸಿನಕಾಯಿ, ಸೋರೆಕಾಯಿ, ಸೌತೆಕಾಯಿ, ಬೀಟ್​ರೂಟ್​ ಬೆಳೆಗಳು, ಹಸಿರು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸಿದೆ. ಹಣ್ಣಿನ ಗಿಡಗಳನ್ನೂ ನೆಟ್ಟಿದ್ದೇನೆ. ಇದರಿಂದ ಒಂದು ಎಕರೆ ಗದ್ದೆಯಲ್ಲಿ 60 ಬಗೆಯ ಬೆಳೆಗಳನ್ನು ಹಾಕಲಾಗಿದೆ. ನಾಟಿ ಮಾಡಿದ 22 ದಿನಗಳ ನಂತರ ನನಗೆ ಮೊದಲ ಆದಾಯ ಸಿಕ್ಕಿತು. ಈ ಮಾದರಿಯ ಬೇಸಾಯದಿಂದ ಜನವರಿಯನ್ನು ಹೊರತುಪಡಿಸಿ ವರ್ಷವಿಡೀ ಆದಾಯ ಗಳಿಸಬಹುದು ಎಂದು ಆಕಾಶ್ ಚೌರಾಸಿಯಾ ಅಭಿಪ್ರಾಯಪಟ್ಟಿದ್ದಾರೆ.

ಓದಿ: ವಿಶ್ವ ಆನೆ ದಿನವಾದ ಆ.12 ರಂದು ಅಂತಾರಾಷ್ಟ್ರೀಯ ಸಮ್ಮೇಳನ: ಸಂಶೋಧನಾ ಲೇಖನ ಆಹ್ವಾನ - International conference

ETV Bharat Logo

Copyright © 2024 Ushodaya Enterprises Pvt. Ltd., All Rights Reserved.