ETV Bharat / bharat

ಎಐ ಅಭಿವೃದ್ಧಿ ಅವಿಷ್ಕಾರದ ಹಬ್​ ಆಗಿ ಹೈದರಾಬಾದ್​ ನಿರ್ಮಾಣದ ಒಡಂಬಡಿಕೆಗೆ ಸಹಿ

3ಎಐ ಕಂಪನಿ ಜೊತೆಗೆ ತೆಲಂಗಾಣ ಸರ್ಕಾರದ ಈ ಒಡಂಬಡಿಕೆ ನಡೆಸುವ ಮೂಲಕ ಎಐನ ಹೊಸ ಅಭಿವೃದ್ಧಿ ಪಥಕ್ಕೆ ಮುಂದಾಗಿದೆ.

author img

By ETV Bharat Karnataka Team

Published : Feb 3, 2024, 4:56 PM IST

MoU signed to make Hyderabad hub of AI development innovation

ಹೈದರಾಬಾದ್​: ತೆಲಂಗಾಣ ಮತ್ತು ಹೈದರಾಬಾದ್​ ಅನ್ನು ಕೃತಕ ಬುದ್ಧಿಮತ್ತೆಯ (ಎಐ) ಅಭಿವೃದ್ಧಿ ಮತ್ತು ಅವಿಷ್ಕಾರದ ಜಾಗತಿಕ ಹಬ್​ ಮಾಡುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ 3ಎಐ ಒಡಂಬಡಿಕೆಗೆ ತೆಲಂಗಾಣ ಸರ್ಕಾರ ಸಹಿ ಹಾಕಿದೆ.

ಐಟಿಇಅಂಡ್​ಸಿ (ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ) ಇಲಾಖೆ ಮತ್ತು 3ಎಐ ಒಟ್ಟಾಗಿ ಎಐ ಸಮುದಾಯ ಮತ್ತು ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಬರುತ್ತಿದೆ. ಈ ಒಡಂಬಡಿಕೆಯಲ್ಲಿ ಎಐ ಸಮುದಾಯ ನಿರ್ಮಾಣ ಮತ್ತು ವಿವಿಧ ಉದ್ಯಮಗಳ ಮತ್ತು ಟೆಕ್​ ಸೇವಾ ಸಂಸ್ಥೆಗಳ ಅನಾಲಿಟಿಕ್ಸ್​ ನಾಯಕರ ಸಮುದಾಯವನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ.

ಇದು ಕೇವಲ ಎಐ ಹೊಸತನ ಮತ್ತು ಅದರ ಸುತ್ತಲಿನ ಕಾರ್ಯಕ್ರಮ ಮತ್ತು ನಾಯಕತ್ವವನ್ನು ಅಭಿವೃದ್ಧಿ ಮಾಡುವುದಿಲ್ಲ. ಬದಲಾಗಿ 3 ಎಐ ವೇದಿಕೆಯು ನಾಯಕತ್ವ ಮತ್ತು ಚಿಂತನೆ ಹಂಚಿಕೆಯ ನಿರ್ಮಾಣ ಮಾಡಲಿದೆ.

ದೇಶದಲ್ಲಿಯೇ ಮೊದಲು ತೆಲಂಗಾಣದ ಆಡಳಿತದಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ನಾವು ಹೊಸ ನಾಯಕರ ಸಮುದಾಯದ ಮತ್ತು ರಾಜ್ಯದಲ್ಲಿ ಎಐ ತಂತ್ರಜ್ಞಾನವನ್ನು ಸಕ್ರಿಯಗೊಳಿಸುತ್ತಿದ್ದೇವೆ ಎಂದು ಐಟಿ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಪ್ರಧಾನ ಕಾರ್ಯದರ್ಶಿ ಜಯೇಶ್​ ರಂಜನ್​ ತಿಳಿಸಿದ್ದಾರೆ.

ಎಐ ಉದ್ಯಮದಲ್ಲಿ ದಕ್ಷತೆ, ಉತ್ಪಾದಕತೆ ಮತ್ತು ನಾವೀನ್ಯತೆ ತರುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ 3ಎಐ ವಿಶಾಲ ವೇದಿಕೆ ಒದಗಿಸುತ್ತಿದ್ದು, ಇದು ಹೊಸ ತಂತ್ರಜ್ಞಾನ ಹೊರಮ್ಮುವಿಕೆ ಘಟಕದೊಂದಿಗೆ ಸಂಪರ್ಕದಲ್ಲಿರಲಿದೆ. ಕೈಗಾರಿಕೆಗಳು ಮತ್ತು ಇ ಆಡಳಿತದಲ್ಲಿ ಎಐ ಅಳವಡಿಕೆಯ ಕುರಿತು ನಿರ್ಣಾಯಕ ಚರ್ಚೆಗಳು, ಕೇಂದ್ರೀಕೃತ ಪರಿಸರ ವ್ಯವಸ್ಥೆಯನ್ನು ರಚಿಸಲು ಚರ್ಚಿಸಲಾಗುವುದು.

ಅಳವಡಿಕೆಗಾಗಿ ಅನುಕೂಲಕರ ಪರಿಸರ ವ್ಯವಸ್ಥೆ ಮತ್ತು ಚೌಕಟ್ಟನ್ನು ರಚಿಸುವುದು ಮತ್ತು ಸಕ್ರಿಯಗೊಳಿಸುವುದು: ಕಾರ್ಯತಂತ್ರದ ದೃಷ್ಟಿಕೋನಗಳು ಎಂಬ ರೌಂಡ್​ಟೇಬಲ್​ ನಾಯಕತ್ವವನ್ನು ಈ ಒಡಂಬಡಿಕೆ ಒಳಗೊಂಡಿದೆ. ಈ ದುಂಡು ಮೇಜಿನಲ್ಲಿ ಎಐ ಸಂಬಂಧಿಸಿದ ಆವಿಷ್ಕಾರಗಳ ಅಗತ್ಯತೆಗಳು ಮತ್ತು ಅಳವಡಿಕೆಗಳನ್ನು ಪರಿಹರಿಸಲು ತೆಲಂಗಾಣ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ತಿಳಿಸಲಾಗಿದೆ.

3ಎಐ ಅದರ 950 ಕ್ಕೂ ಹೆಚ್ಚು ಎಐ ಮತ್ತು ಅನಾಲಿಟಿಕ್ಸ್ ನಾಯಕರೊಂದಿಗೆ, ನಿರ್ಣಾಯಕ ಚರ್ಚೆಗಳ ಮೂಲಕ ಎಐ ನಾಯಕರ ಕೇಂದ್ರೀಕೃತ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ ಎಂದು 3ಎಐ ಸಿಇಒ ಸಮೂರ್​ ಧನ್​ರಜನಿ ತಿಳಿಸಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ಎಐ ಉತ್ಪಾದಕತೆ ವೃದ್ಧಿಸುವ ಬಗ್ಗೆ ಬಹುತೇಕ ಭಾರತೀಯರಲ್ಲಿದೆ ಆಶಾವಾದ; ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.