ನವದೆಹಲಿ: ನವರಾತ್ರಿಯ ಕೊನೆಯ ಹಾಗೂ 9ನೇ ದಿನವಾದ ಇಂದು ದೇಶದಾದ್ಯಂತ ದೇವಾಲಯಗಳಲ್ಲಿ ಮುಂಜಾನೆ ಸಿದ್ಧಿದಾತ್ರಿ ತಾಯಿಗೆ ಆರತಿ ಸಲ್ಲಿಕೆಯಾಯಿತು. ಆರತಿ ಪೂಜೆಯಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಲ್ಲಿ ಜಮಾಯಿಸಿದ್ದರು. ವಿಶೇಷವಾಗಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು.
ಎಲ್ಲೆಲ್ಲಿ ಪೂಜೆ?: ರಾಷ್ಟ್ರ ರಾಜಧಾನಿ ನವದೆಹಲಿಯ ಝಂಡೆವಾಲಾ ದೇವಿ ಮಂದಿರದಲ್ಲಿ ಆರತಿಯನ್ನು ನೆರವೇರಿಸಲಾಯಿತು. ಹಾಗೇ ಮುಂಬೈನ ಮುಂಬಾ ದೇವಿ ದೇವಸ್ಥಾನದಲ್ಲಿ ನಡೆದ ಆರತಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಪುರೋಹಿತರು ಪ್ರಾರ್ಥನೆಯನ್ನು ಪಠಿಸುತ್ತಿದ್ದಂತೆ ಧನಾತ್ಮಕ ಶಕ್ತಿ ಮೂಡಿ ದೇವಾಲಯ ತುಂಬೆಲ್ಲಾ ಪವಿತ್ರ ಮಂತ್ರಗಳು ಪ್ರತಿಧ್ವನಿಸುತ್ತಿತ್ತು.
ಇನ್ನು ಪಶ್ಚಿಮ ಬಂಗಾಳದ ಸಿಲಿಗುರಿಯ ಭಾರತ್ ಸೇವಾಶ್ರಮ ಆಶ್ರಮದಲ್ಲಿಯೂ ಸಿದ್ಧಿದಾತ್ರಿ ದೇವಿಗೆ ಪೂಜೆಯನ್ನು ಮಾಡಲಾಗಿದೆ. ನವರಾತ್ರಿ ಉತ್ಸವದ ಒಂಬತ್ತನೇ ದಿನ ತಾಯಿ ದುರ್ಗೆಯ 9ನೇ ಅವತಾರ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿ ತಾಯಿ ಭಕ್ತರಿಗೆ ಜ್ಞಾನ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.
ಇನ್ನು ಗುಜರಾತ್‌ನಲ್ಲಿ ಜನರು ನವರಾತ್ರಿಯ ಸಂದರ್ಭದಲ್ಲಿ 'ಗರ್ಬಾ'ವನ್ನು ಆಚರಣೆ ಮಾಡುತ್ತಾರೆ. ಹಬ್ಬವನ್ನು ಇವರು ಉತ್ಸಾಹದಿಂದ ಆಚರಿಸುತ್ತಾರೆ. ಇನ್ನು ನಾಳೆ ನಾಳೆ ವಿಜಯದಶಮಿ. ಪ್ರಮುಖವಾಗಿ ರಾಕ್ಷಸ ಮಹಿಷಾಸುರನ ಸಂಹಾರ ನಡೆದ ದಿನವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಾಳೆ ರಾವಣನ ಪ್ರತಿಕೃತಿಗಳನ್ನು ಸುಡುವುದು ವಿಜಯದಶಮಿಯ ಮುಕ್ತಾಯವನ್ನು ಸೂಚಿಸುತ್ತದೆ.
ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ: ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೂ ಪೂಜೆ