ETV Bharat / bharat

ಸಲ್ಮಾನ್​ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡಿ; ಪೊಲೀಸರಿಗೆ ಬಂತು ಬೆದರಿಕೆ ಸಂದೇಶ - SALMAN KHAN THREAT NEWS

ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಈಗಾಗಲೇ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಹೊತ್ತಿದೆ. ಈ ನಡುವೆ ಅದೇ ತಂಡದಿಂದ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದೆ.

mh-update-salman-khan-threat-news-mumbai-traffic-police-receive-whatsapp-demanding-rs-5-crore
ಬಾಬಾ ಸಿದ್ದಿಕಿ ಮನೆಯಿಂದ ಹೊರ ಬರುತ್ತಿರುವ ನಟ ಸಲ್ಮಾನ್​ ಖಾನ್​ (ಎಎನ್​ಐ)
author img

By ETV Bharat Karnataka Team

Published : Oct 18, 2024, 10:27 AM IST

ಮುಂಬೈ: ಬಾಲಿವುಡ್​ ಸೇರಿದಂತೆ ಮಹಾರಾಷ್ಟ್ರದ ಜನರನ್ನು ಬೆಚ್ಚಿಬೀಳಿಸಿದ ಎನ್​ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಕ್ರೈಂ ಬ್ರಾಂಚ್​ ತನಿಖೆ ನಡೆಸುತ್ತಿದ್ದು, ಈ ವೇಳೆ, ಪೊಲೀಸರ ವಾಟ್ಸ್​ಆ್ಯಪ್​​ಗೆ ಬೆದರಿಕೆ ಸಂದೇಶವೊಂದು ಬಂದಿರುವುದು ಎಲ್ಲರನ್ನೂ ಆಘಾತಗೊಳಿಸಿದೆ.

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ವ್ಯವಹಾರದ ನಂಟು ಇದೆಯಾ ಎಂಬ ಕುರಿತು ಸ್ಲಂ ಪುನರಾಭಿವೃದ್ಧಿ ಪ್ರಾಧಿಕಾರ ಮತ್ತು ನಟ ಸಲ್ಮಾನ್ ಖಾನ್ ಜೊತೆಗಿನ ಆತ್ಮೀಯತೆ ಕುರಿತಂತೆ ಎಲ್ಲ ಆಯಾಮಗಳಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂದೇಶದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್​​ ನಡುವಿನ ವಿವಾದವನ್ನು ಕೊನೆಗೊಳಿಸಬೇಕಾದರೆ, ಸಲ್ಮಾನ್ ಖಾನ್ ಐದು ಕೋಟಿ ಮೊತ್ತವನ್ನು ನೀಡುವಂತೆ ಬೇಡಿಕೆ ಇಡಲಾಗಿದೆ.

ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಈಗಾಗಲೇ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಹೊತ್ತಿದೆ. ಈ ನಡುವೆ ಮತ್ತೆ ಅದೇ ತಂಡ ಮತ್ತೊಂದು ಜೀವ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ. ಆದರೆ, ಈ ಸಂದೇಶವೂ ಪೊಲೀಸರ ವಾಟ್ಸ್​ಆ್ಯಪ್​ ನಂಬರ್​​ಗೆ ಬಂದಿರುವುದು ಅಚ್ಚರಿ ಮೂಡಿಸಿದೆ. ಮುಂಬೈ ಪೊಲೀಸ್​ ಟ್ರಾಫಿಕ್​ ಕಂಟ್ರೋಲ್​ ಘಟಕಕ್ಕೆ ಈ ಸಂದೇಶ ರವಾನೆಯಾಗಿದೆ. ಸಂದೇಶ ರವಾನಿಸಿದ ಅಪರಿಚಿತರು ತಾವು ಲಾರೆನ್ಸ್​ ಬಿಷ್ಣೋಯಿ ಆಪ್ತರು ಎಂದು ಹೇಳಿಕೊಂಡಿದ್ದಾರೆ

ವಾಟ್ಸ್​​ಆ್ಯಪ್​ ಸಂದೇಶದ ಮಾಹಿತಿ ನೀಡಿದ ಮುಂಬೈ ಪೊಲೀಸ್​: ಈ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್​ ಟ್ರಾಫಿಕ್​ ಕಂಟ್ರೋಲ್​ ಇಸ್ಮಾ, ’’ಈ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಬದುಕಬೇಕು, ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವೈಷಮ್ಯವನ್ನು ಕೊನೆಗಾಣಿಸಬೇಕು ಎಂದರೆ 5 ಕೋಟಿ ರೂ ನೀಡಬೇಕು. ಹಣ ಪಾವತಿ ಮಾಡದಿದ್ದರೆ, ಸಲ್ಮಾನ್​ ಕಾನ್​ ಪರಿಸ್ಥಿತಿ ಬಾಬಾ ರೀತಿ ಆಗುತ್ತದೆ. ಅದಕ್ಕಿಂತಲೂ ಕೆಟ್ಟದಾಗಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ‘‘ ಎಂದಿದ್ದಾರೆ. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಈ ಪ್ರಕರಣದ ತ್ವರಿತ ತನಿಖೆಗೆ ಮುಂದಾಗಿದ್ದಾರೆ

ನಟ ಸಲ್ಮಾನ್​​ಗೆ ಹೆಚ್ಚಿನ ಭದ್ರತೆ: ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಮತ್ತು ನಟ ಸಲ್ಮಾನ್​ ಖಾನ್​ ನಡುವೆ ಆತ್ಮೀಯ ಸಂಬಂಧವಿತ್ತು. ಸಿದ್ದಿಕಿ ಹತ್ಯೆ ಬೆನ್ನಲ್ಲೇ ಇದೀಗ ನಟ ಸಲ್ಮಾನ್​ ಖಾನ್​ಗೆ ಭದ್ರತೆ ಹೆಚ್ಚಿಸಲಾಗಿದೆ. ನಟ ಸಲ್ಮಾನ್​ ಖಾನ್​ಗೆ ಪದೇ ಪದೇ ಬೆದರಿಕೆ ಸಂದೇಶ ನೀಡುತ್ತಿರುವ ಹಿನ್ನಲೆ ವೈ ಪ್ಲಸ್​ ಭದ್ರತೆಯನ್ನು ನೀಡಲಾಗಿದೆ. ಅವರ ಮನೆ ಮುಂದೆ 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ 2ರಿಂದ 4 ಎನ್​ಎಸ್​ಜಿ ಕಮಾಂಡೋ ಮತ್ತು ಪೊಲೀಸ್​ ಪಡೆ ಇರಲಿದೆ. ಇದರ ಹೊರತಾಗಿ ಸಲ್ಮಾನ್​ ಖಾನ್​ ಬೆಂಗಾವಲಾಗಿ ಎರಡರಿಂದ ಮೂರು ವಾಹನ ಅವರು ಹೋದಲೆಲ್ಲಾ ಕೊತೆಯಾಗಲಿದೆ. ಸಲ್ಮಾನ್​ ಖಾನ್​ ಬುಲೆಟ್​ಪ್ರೂಫ್​ ವಾಹನದಲ್ಲಿ ಸಂಚಾರ ನಡೆಸಲಿದ್ದಾರೆ.

ಇದನ್ನೂ ಓದಿ: ಗುವಾಹಟಿಯಲ್ಲಿ ED ವಿಚಾರಣೆಗೆ ಹಾಜರಾದ ನಟಿ ತಮನ್ನಾ ಭಾಟಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.