ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 18 ತಿಂಗಳ ನಂತರ ಇಂದು ತಿಹಾರ್ ಜೈಲಿನಿಂದ ಹೊರಬಂದರು. ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
#WATCH | AAP leader Manish Sisodia says, " i have come out of jail due to your love, god's blessings & power of truth, and biggest of all, the dream of babasaheb that if any dictatorial government comes to power and puts opposition leaders behind bars by forming dictatorial laws,… pic.twitter.com/DCHDuVYGyE
— ANI (@ANI) August 9, 2024
"ನಾನು ಜೈಲಿನಲ್ಲಿದ್ದಾಗ ದೆಹಲಿಯ ಜನರು ಮತ್ತು ದೇಶದ ಜನರು ಭಾವನಾತ್ಮಕವಾಗಿ ನನ್ನೊಂದಿಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಸರ್ವಾಧಿಕಾರಕ್ಕೆ ಹೊಡೆತ. ಇದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಜನರ ಪ್ರೀತಿ, ದೇವರ ಆಶೀರ್ವಾದ, ಸತ್ಯದ ಶಕ್ತಿ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಂವಿಧಾನದ ಶಕ್ತಿಯಿಂದ ಹೊರಬಂದಿದ್ದೇನೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಬೆಂಬಲಿಗರನ್ನು ಉದ್ದೇಶಿಸಿ ಮನೀಶ್ ಸಿಸೋಡಿಯಾ ಭಾವನಾತ್ಮಕವಾಗಿ ಮಾತನಾಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶಕ್ತಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಗೂ ದಾರಿ ಮಾಡಿಕೊಡಲಿದೆ ಎಂದರು.
ಕಳೆದ ವರ್ಷದ ಫೆಬ್ರವರಿಯಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.
#WATCH | AAP leader and former Delhi Deputy CM Manish Sisodia meets the family of CM Arvind Kejriwal at their residence.
— ANI (@ANI) August 9, 2024
Manish Sisodia walked out of Tihar Jail this evening after being granted bail by Supreme Court in Delhi Excise Policy case.
(Video: AAP) pic.twitter.com/CbsKVcHKxn
ಸಿಸೋಡಿಯಾಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಉಲ್ಲೇಖಗಳನ್ನು ಮಾಡಿದೆ. ಯಾವುದೇ ಆರೋಪಿಯನ್ನು ಅನಿರ್ದಿಷ್ಟಾವಧಿ ಕಾಲ ಜೈಲಿನಲ್ಲಿ ಇಡುವಂತಿಲ್ಲ. ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದಿದ್ದರೂ ಮಿತಿ ದಾಟಿ ಜೈಲಿಗೆ ಹಾಕಿರುವುದು ಸರಿಯಲ್ಲ. ಅದು ಆ ವ್ಯಕ್ತಿಯ ಹಕ್ಕುಗಳ ಹರಣವಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯುವುದು ಅವರ ಹಕ್ಕು. ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು 'ಜಾಮೀನು ತತ್ವ ಒಂದು ನಿಯಮ ಮತ್ತು ಜೈಲು ಒಂದು ಅಪವಾದ' ಎಂಬುದನ್ನು ಅರಿತುಕೊಳ್ಳುವ ಸಮಯ ಬಂದಿದೆ ಎಂದು ಪೀಠ ತಿಳಿಸಿತು.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಮನೀಶ್ ಸಿಸೋಡಿಯಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ - Bail to Manish Sisodia