ETV Bharat / bharat

ಮಹಿಳೆಯರಿಗೆ ಪ್ರತಿ ತಿಂಗಳು ₹1,500: ಮಹಾರಾಷ್ಟ್ರ ಬಜೆಟ್‌ನಲ್ಲಿ ₹1 ಲಕ್ಷ ಕೋಟಿ ಮೊತ್ತದ ಉಚಿತಗಳ ಘೋಷಣೆ! - Maharashtra Budget - MAHARASHTRA BUDGET

ಇನ್ನು ಕೆಲವೇ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಂಡಿಸಿದ ಬಜೆಟ್‌ನಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಉಚಿತ ಕೊಡುಗೆಗಳನ್ನು ಘೋಷಿಸಲಾಗಿದೆ.

ಬಜೆಟ್​ ಪ್ರತಿಯೊಂದಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್
ಬಜೆಟ್​ ಪ್ರತಿಯೊಂದಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (IANS)
author img

By ETV Bharat Karnataka Team

Published : Jun 28, 2024, 6:00 PM IST

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ 2024-25ನೇ ಸಾಲಿನ ಪೂರ್ಣ ಬಜೆಟ್ ಮಂಡಿಸಿದ್ದು, ಸುಮಾರು 1 ಲಕ್ಷ ಕೋಟಿ ರೂಪಾಯಿ ಮೊತ್ತದ ಉಚಿತ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಸಮಯದಲ್ಲಿ ಹಣಕಾಸು ಮತ್ತು ಯೋಜನಾ ಖಾತೆಗಳನ್ನು ಕೂಡ ಹೊಂದಿರುವ ಪವಾರ್ ಜನಪ್ರಿಯ ಬಜೆಟ್​ ಮಂಡಿಸಿದ್ದಾರೆ.

ಮಹಿಳೆಯರಿಗೆ ಮಾಸಿಕ 1,500 ರೂ ಘೋಷಣೆ: 21ರಿಂದ 60 ವರ್ಷದೊಳಗಿನ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ಸಹಾಯಧನ ನೀಡುವ 'ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್ ಯೋಜನೆ'ಯನ್ನು ಪವಾರ್ ಘೋಷಿಸಿದರು. ಇದಕ್ಕಾಗಿ ವಾರ್ಷಿಕ 46 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

ಬೆಳೆ ಹಾನಿ ಮತ್ತು ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರನ್ನು ಸೆಳೆಯುವ ಪ್ರಯತ್ನದಲ್ಲಿ 7.5 ಅಶ್ವಶಕ್ತಿ ಸಾಮರ್ಥ್ಯದ ಕೃಷಿ ಪಂಪ್​ಗಳಿಗೆ ಉಚಿತ ವಿದ್ಯುತ್ ಒದಗಿಸುವ 'ಮುಖ್ಯಮಂತ್ರಿ ಬಳಿರಾಜಾ ವೀಜ್ ಸವಲತ್ ಯೋಜನೆ' ಯನ್ನು ಘೋಷಿಸಲಾಗಿದೆ. ಇದರಿಂದ 44.06 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಇದರ ಅಡಿಯಲ್ಲಿ ವಾರ್ಷಿಕ 14,761 ಕೋಟಿ ರೂ. ಸಬ್ಸಿಡಿ ಘೋಷಿಸಲಾಗಿದೆ.

ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಗಳ ಸಬ್ಸಿಡಿಯನ್ನು ಸರ್ಕಾರ ಪ್ರಸ್ತಾಪಿಸಿದೆ. ಇನ್ನು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು 'ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ' ಯನ್ನು ಪವಾರ್ ಘೋಷಿಸಿದರು. ಇದರಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ಮೂರು ಗ್ಯಾಸ್ ಸಿಲಿಂಡರ್​ಗಳನ್ನು ಉಚಿತವಾಗಿ ನೀಡಲಾಗುವುದು. ಈ ಯೋಜನೆಯಿಂದ 52,16,412 ಕುಟುಂಬಗಳಿಗೆ ಅನುಕೂಲವಾಗಲಿದೆ.

ಪಿಂಕ್ ಇ-ರಿಕ್ಷಾಗಳನ್ನು ಖರೀದಿಸಲು 17 ನಗರಗಳ 10,000 ಮಹಿಳೆಯರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಇದಕ್ಕಾಗಿ 80 ಕೋಟಿ ರೂ. ಮೀಸಲಿಡಲಾಗಿದೆ. 4,200 ಕೋಟಿ ರೂ.ಗಳ ವೆಚ್ಚದಲ್ಲಿ ಶುದ್ಧ ಮತ್ತು ಹಸಿರು ಇಂಧನದ ಗುರಿಯನ್ನು ಸಾಧಿಸಲು ನೀರಾವರಿಯ ಸೌರೀಕರಣದ ಯೋಜನೆಯನ್ನು ಸಹ ಘೋಷಿಸಲಾಯಿತು.

'ಶುಭಮಂಗಳ ಸಮುದಾಯ ನೊಂದಣಿಕೃತ್ ವಿವಾಹ್' (ಸಾಮೂಹಿಕ ವಿವಾಹ) ಯೋಜನೆ ಅಡಿಯಲ್ಲಿ, ಸರ್ಕಾರವು ಫಲಾನುಭವಿ ಯುವತಿಯರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 10,000 ರೂ.ಗಳಿಂದ 25,000 ರೂ.ಗೆ ಹೆಚ್ಚಿಸಿದೆ.

ಇದಲ್ಲದೆ, ಬಾಲಕಿಯರಿಗೆ ಉಚಿತ ಉನ್ನತ ಶಿಕ್ಷಣವನ್ನು ಸರ್ಕಾರ ಪ್ರಸ್ತಾಪಿಸಿದೆ. ಇದರ ಮೂಲಕ ವಾರ್ಷಿಕ 8 ಲಕ್ಷ ರೂ.ಗಳ ಕುಟುಂಬ ಆದಾಯ ಹೊಂದಿರುವ ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಪರೀಕ್ಷಾ ಶುಲ್ಕವನ್ನು ಶೇಕಡಾ 100 ರಷ್ಟು ಮರುಪಾವತಿ ಮಾಡಲಾಗುವುದು. ಇದರಿಂದ 2,05,499 ಬಾಲಕಿಯರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ವಾರ್ಷಿಕ 2,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

2024-25ರ ಅಂತ್ಯದ ವೇಳೆಗೆ 20,051 ಕೋಟಿ ರೂ.ಗಳ ಆದಾಯ ಕೊರತೆ ಮತ್ತು 1,10,355 ಕೋಟಿ ರೂ.ಗಳ ವಿತ್ತೀಯ ಕೊರತೆಯನ್ನು ಪವಾರ್ ಅಂದಾಜಿಸಿದ್ದಾರೆ. ಜೊತೆಗೆ ಆದಾಯ 4,99,463 ಕೋಟಿ ರೂ., ಆದಾಯ ವೆಚ್ಚ 5,19,514 ಕೋಟಿ ರೂ. ಗಳೊಂದಿಗೆ 6,12,293 ಕೋಟಿ ರೂ.ಗಳ ವಿನಿಯೋಗವನ್ನು ಅವರು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಟಾರಿಫ್ ಹೆಚ್ಚಳದಿಂದ ಟೆಲಿಕಾಂ ಉದ್ಯಮಕ್ಕೆ 20 ಸಾವಿರ ಕೋಟಿ ಹೆಚ್ಚುವರಿ ಲಾಭ ಸಾಧ್ಯತೆ - Mobile Tariff Hike

ETV Bharat Logo

Copyright © 2025 Ushodaya Enterprises Pvt. Ltd., All Rights Reserved.