ETV Bharat / bharat

ಆಗ್ರಾ ತಲುಪಿದ 1,600 ಕೆಜಿ ತೂಕದ ಗದೆ, 1,100 ಕೆಜಿ ತೂಕದ ಬೃಹತ್ ರಾಮ ಧನುಸ್ಸು - Mace and Rama bow to Ayodhya - MACE AND RAMA BOW TO AYODHYA

ರಾಜಸ್ಥಾನದಿಂದ ಬಂದ 1,600 ಕೆ.ಜಿ ತೂಕದ ಗದೆ ಮತ್ತು 1,100 ಕೆಜಿ ತೂಕದ ಬೃಹತ್ ರಾಮ ಧನುಸ್ಸು ಶುಕ್ರವಾರ ಆಗ್ರಾ ತಲುಪಿದ್ದು, ಪೂಜೆ ಬಳಿಕ ಅಯೋಧ್ಯೆಗೆ ಯಾತ್ರೆ ಮುಂದುವರಿಸಿದೆ.

Mace weighing 1,600 kg, huge Rama bow weighing 1,100 kg reached Agra
ಆಗ್ರಾ ತಲುಪಿದ 1,600 ಕೆಜಿ ತೂಕದ ಗದೆ, 1,100 ಕೆಜಿ ತೂಕದ ಬೃಹತ್ ರಾಮ ಧನುಸ್ಸು (ETV Bharat)
author img

By ETV Bharat Karnataka Team

Published : Jun 15, 2024, 3:34 PM IST

ಆಗ್ರಾ (ಉತ್ತರ ಪ್ರದೇಶ): ರಾಜಸ್ಥಾನದಿಂದ ಅಯೋಧ್ಯೆಗೆ ತೆರಳುತ್ತಿದ್ದ 1,600 ಕೆಜಿ ತೂಕದ ಗದೆ ಮತ್ತು 1,100 ಕೆಜಿ ತೂಕದ ರಾಮ ಧನುಸ್ಸು ಶುಕ್ರವಾರ ಸಂಜೆ ಆಗ್ರಾ ತಲುಪಿದೆ. ದೆಹಲಿ ಹೆದ್ದಾರಿಯಲ್ಲಿರುವ ಡಿವಿವಿಎನ್​ಎಲ್​ ಕಚೇರಿ ಬಳಿ ಇರುವ ದಕ್ಷಿಣಮುಖಿ ಹನುಮಾನ್ ದೇವಸ್ಥಾನದಲ್ಲಿ ಗಧೆ ಹಾಗೂ ಧನುಸ್ಸನ್ನು ಸ್ವಾಗತಿಸಲಾಯಿತು. ಇದನ್ನು ನೋಡಲು ಜನಸಾಗರವೇ ಸೇರಿದ್ದು, ಗಧೆ ಹಾಗೂ ಧನುಸ್ಸಿಗೆ ಆರತಿ ಬೆಳಗಲಾಯಿತು.

ರಾಜಸ್ಥಾನದ ಸುಮೇರ್‌ಪುರದ ಶ್ರೀಜಿ ಸನಾತನ ಸೇವಾ ಸಂಸ್ಥಾನದಿಂದ ಯಾತ್ರೆಯ ಮೂಲಕ ರಾಮನಗರಿಗೆ ಕೊಂಡೊಯ್ಯಲಾಗುತ್ತಿದ್ದ ಗದೆ ಮತ್ತು ರಾಮ ಧನುಸ್ಸಿಗೆ ಶ್ರೀ ಮಂಕಮೇಶ್ವರ ಮಹಾದೇವ ದೇವಸ್ಥಾನದ ಮಹಂತ್ ಯೋಗೀಶ್ ಪುರಿ ಅವರು ವಿಧಿವಿಧಾನದಂತೆ ದೈತ್ಯ ಗದೆಗೆ ಪೂಜೆ ಸಲ್ಲಿಸಿದರು. ನಂತರ ಯಾತ್ರೆ ಮುಂದೆ ಹೊರಟಿದ್ದು, ಶನಿವಾರ ಲಕ್ನೋ ತಲುಪಲಿದೆ.

Pooja to Gadha and Bow
ಗದೆ ಹಾಗೂ ರಾಮ ಧನುಸ್ಸಿಗೆ ಪೂಜೆ (ETV Bharat)

"ಇಂತಹ ಕಾರ್ಯಕ್ರಮಗಳು ನಮ್ಮ ಪವಿತ್ರ ಸಂಸ್ಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತವೆ" ಎಂದು ಉದ್ಯಮಿ ಪುರನ್ ದಾವರ್ ಹೇಳಿದರು. ಅಯೋಧ್ಯೆ ಯಾತ್ರೆಯ ನೇತೃತ್ವ ವಹಿಸಿರುವ ಆಚಾರ್ಯ ಡಾ. ಸರಸ್ವತಿ ದೇವಕೃಷ್ಣ ಗೌರ್ ಅವರು ಪಂಚಧಾತುಗಳಿಂದ ತಯಾರಿಸಿದ 1,100 ಕೆಜಿ ತೂಕದ ರಾಮ ಧನುಸ್ಸು ಮತ್ತು 1,600 ಕೆಜಿ ಹನುಮಾನ್ ಗದೆಯನ್ನು ಶ್ರೀರಾಮ ರಥದಲ್ಲಿ ಕೂರಿಸುವ ಆಧ್ಯಾತ್ಮಿಕ ಮಹತ್ವವನ್ನು ತಿಳಿಸಿದರು.

ಜೂನ್​ 12ರಂದು ಯಾತ್ರೆ ರಾಜಸ್ಥಾನದಿಂದ ಹೊರಟಿದ್ದು, ರಾಮನವಮಿಯಿಂದಲೇ ಈ ಬೃಹತ್​ ಗದೆ ನಿರ್ಮಾಣ ಕೆಲಸ ಆರಂಭವಾಗಿತ್ತು. ಇದು 26 ಅಡಿ ಎತ್ತರ ಮತ್ತು 12 ಅಡಿ ಅಗಲವಿದೆ. ಇದನ್ನು ತಯಾರಿಸಲು ಪ್ರತಿದಿನ 24 ಕ್ಕೂ ಹೆಚ್ಚು ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ. ರಾಮ ಧನುಸ್ಸು ಕೂಡ ಸುಮಾರು 31 ಅಡಿ ಉದ್ದವಿದೆ. ಇವುಗಳನ್ನು 5 ಲೋಹಗಳಿಂದ ಮಾಡಲಾಗಿದೆ. ಇವೆರಡನ್ನೂ ಅಯೋಧ್ಯೆಯ ರಾಮಮಂದಿರ ಸಂಕೀರ್ಣದಲ್ಲಿ ಸ್ಥಾಪಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸಂಪುಟ ಸಚಿವೆ ಬೇಬಿ ರಾಣಿ ಮೌರ್ಯ, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಶ್ಫಾಕ್ ಸೈಫಿ, ಸ್ವಾಗತ ಸಮಿತಿ ಸ್ಕ್ವಾಡ್ರನ್ ಲೀಡರ್ ಎ.ಕೆ. ಸಿಂಗ್, ಎಪಿಎಸ್ಎ ಅಧ್ಯಕ್ಷ ಡಾ.ಸುಶೀಲ್ ಗುಪ್ತಾ, ಪಂಚಮುಖಿ ಶ್ರೀ ಹನುಮಾನ್ ಮಹಾರಾಜ್ ಜಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಹೇಂದ್ರ ಕುಮಾರ್ ಶರ್ಮಾ, ಪ್ರಕಾಶ್ ಗ್ರೂಪ್ ಎಂಡಿ ರಾಜೇಶ್ ಗಾರ್ಗ್, ಹೋಟೆಲ್ ಆಶಾ ದೀಪ್ ನಿರ್ದೇಶಕ ಶಕುನ್ ಬನ್ಸಾಲ್, ಇನ್‌ಕ್ರೆಡಿಬಲ್ ಇಂಡಿಯಾ ಫೌಂಡೇಶನ್ ಕಲ್ಚರ್ ಪ್ರಧಾನ ಕಾರ್ಯದರ್ಶಿ ಅಜಯ್ ಶರ್ಮಾ, ಸಂಚಾಲಕ ಬ್ರಜೇಶ್ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಅಯೋಧ್ಯೆ ಶ್ರೀರಾಮನಿಗೆ ಪ್ರಸಿದ್ಧ ದುಬ್ಬಾಕ ಕೈಮಗ್ಗ ವಸ್ತ್ರ ಅರ್ಪಣೆ - Dubbaka Handloom Saree

ETV Bharat Logo

Copyright © 2025 Ushodaya Enterprises Pvt. Ltd., All Rights Reserved.