ETV Bharat / bharat

ದೆಹಲಿ ವಿಧಾನಸಭೆ ಅಧಿವೇಶನ: ನಂ.​1 ಸೀಟಿನಿಂದ 41ನೇ ಸೀಟಿಗೆ ಅರವಿಂದ್​ ಕೇಜ್ರಿವಾಲ್​ ವರ್ಗ - Kejriwal changed Assembly seat - KEJRIWAL CHANGED ASSEMBLY SEAT

ದೆಹಲಿ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ 41 ನೇ ಸೀಟು ನೀಡಲಾಗಿದೆ. ಅತಿಶಿ ಅವರಿಗೆ ನಂಬರ್​ 1 ಸೀಟು ನಿಗದಿ ಮಾಡಲಾಗಿದೆ.

ಅರವಿಂದ್​ ಕೇಜ್ರಿವಾಲ್​
ಅರವಿಂದ್​ ಕೇಜ್ರಿವಾಲ್​ (ETV Bharat)
author img

By PTI

Published : Sep 26, 2024, 5:15 PM IST

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಸಿಲುಕಿಕೊಂಡಿರುವ ಅರವಿಂದ್​ ಕೇಜ್ರಿವಾಲ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸೆಪ್ಟೆಂಬರ್​ 26 ರಿಂದ ಆರಂಭವಾಗಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ವಿಧಾನಸಭೆ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, 41 ನೇ ಸೀಟನ್ನು ಕೇಜ್ರಿವಾಲ್​​ ಅವರಿಗೆ ನೀಡಲಾಗಿತ್ತು. ಅವರ ಪಕ್ಕದಲ್ಲಿ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾ ಇದ್ದರು.

ಸಿಎಂ ಆಗಿದ್ದಾಗ ಕೇಜ್ರಿವಾಲ್​ ಅವರು ವಿಧಾನಸಭೆಯಲ್ಲಿ ಮೊದಲ ಸಾಲಿನ ಮೊದಲ ಸೀಟಿನಲ್ಲಿ ಕೂರುತ್ತಿದ್ದರು. ರಾಜೀನಾಮೆ ನೀಡಿದ್ದು, ಸಾಮಾನ್ಯ ಶಾಸಕರಾಗಿ ಅಧಿವೇಶನಕ್ಕೆ ಆಗಮಿಸಿದ್ದರು. ನೂತನ ಸಿಎಂ ಅತಿಶಿ ಅವರು, ಮೊದಲ ಸೀಟಿನಲ್ಲಿ ಕುಳಿತಿದ್ದರು. ವಿಧಾನಸಭೆ ನಿಯಮಾವಳಿಯ ಪ್ರಕಾರ, ಅಧಿಕಾರಿಗಳು ಅರವಿಂದ್​ ಕೇಜ್ರಿವಾಲ್ ಮತ್ತು ಮನೀಶ್​ ಸಿಸೋಡಿಯಾ ಅವರಿಗೆ ಕೊನೆಯ ಸಾಲಿನ 40, 41 ನೇ ಸೀಟನ್ನು ನೀಡಿದ್ದರು.

ಗುರುವಾರ ಅಂದರೆ ಸೆಪ್ಟೆಂಬರ್ 26 ರಿಂದ ಆರಂಭವಾಗಿರುವ ದೆಹಲಿ ವಿಧಾನಸಭೆಯ ಅಧಿವೇಶನದಲ್ಲಿ ಸೀಟುಗಳ ಹಂಚಿಕೆಯಲ್ಲೂ ಬದಲಾವಣೆಯಾಗಿದೆ. ಅತಿಶಿ ಅವರು ಈ ಹಿಂದೆ 18 ನೇ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾಗಿದ್ದರಿಂದ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.

ದೆಹಲಿಯ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ಸುದೀರ್ಘ ಕಾಲ ಜೈಲಿನಲ್ಲಿದ್ದರು. ಹೀಗಾಗಿ ಅವರಿಗೆ ಯಾವುದೇ ಸೀಟು ಸೀಟು ಮೀಸಲಿಟ್ಟಿರಲಿಲ್ಲ. ಇದೀಗ ಜಾಮೀನಿನ ಹೊರಬಂದಿರುವ ಅವರಿಗೂ 40 ಸೀಟನ್ನು ನೀಡಲಾಗಿದೆ.

ಇತರ ಸದಸ್ಯರ ಆಸನದಲ್ಲಿ ಬದಲಾವಣೆ: ಸಚಿವ ಕೈಲಾಶ್ ಗೆಹ್ಲೋಟ್ 2ನೇ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ, ಈಗ ಅವರಿಗೆ ಆಸನ ಸಂಖ್ಯೆ 8 ನೀಡಲಾಗಿದೆ. ಸಚಿವ ಸೌರಭ್ ಭಾರದ್ವಾಜ್ ಅವರಿಗೆ ಸೀಟ್ ನಂಬರ್ ಎಂಟರಿಂದ ಎರಡನೇ ಸೀಟು ನೀಡಲಾಗಿದೆ. ಈ ಹಿಂದೆ ಸಚಿವ ಇಮ್ರಾನ್ ಹುಸೇನ್ ಅವರಿಗೆ ಸೀಟ್ ಸಂಖ್ಯೆ 14 ನೀಡಲಾಗಿತ್ತು. ಈಗ ಅವರಿಗೆ ಆಸನ ಸಂಖ್ಯೆ 13 ನೀಡಲಾಗಿದೆ. ಸಚಿವ ಮುಖೇಶ್ ಅಹ್ಲಾವತ್ ಅವರಿಗೆ ಆಸನ ಸಂಖ್ಯೆ 18 ರಿಂದ 14 ಗುರುತಿಸಲಾಗಿದೆ. ಶಾಸಕ ವಿನಯ್ ಮಿಶ್ರಾ ಅವರಿಗೆ 36ನೇ ಸೀಟಿನಿಂದ 19 ನೇ ಸೀಟಿಗೆ ಬದಲಿಸಲಾಗಿದೆ.

ಸಿಎಂ ಅತಿಶಿಗೆ ವಿಶ್ವಾಸಮತ ಪರೀಕ್ಷೆ: ದೆಹಲಿಯ ನೂತನ ಸಿಎಂ ಆಗಿರುವ ಅತಿಶಿ ಅವರಿಗೆ ವಿಶ್ವಾಸಮತ ಸಾಬೀತು ಮಾಡಬೇಕಿದೆ. ಅರವಿಂದ್​ ಕೇಜ್ರಿವಾಲ್​ ಅವರ ಸ್ಥಾನಕ್ಕೆ ಬಂದಿರುವ ಅತಿಶಿ ಅವರಿಗೆ ಪಕ್ಷ ಬೆಂಬಲ ನೀಡಿದ್ದರಿಂದ, ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಅವರು ಸಲೀಸಾಗಿ ಮತಯಾಚನೆ ಮುಗಿಸಲಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: 'ಸಂವಿಧಾನ, ಸಿಎಂ ಸ್ಥಾನಕ್ಕೆ ಅತಿಶಿ ಅಪಮಾನ': ಖಾಲಿ ಕುರ್ಚಿ ಇಟ್ಟುಕೊಂಡಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ಕಿಡಿ - BJP Congress attack on Atishi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.