ETV Bharat / bharat

ಹುಣ್ಣಿಮೆ: ಸ್ಟ್ರಾಬೇರಿ ಮೂನ್​ಗೆ​ ಪಾಶ್ಚಿಮಾತ್ಯ ದೇಶದಲ್ಲಿ ಮಾತ್ರವಲ್ಲ, ಭಾರತದಲ್ಲೂ ಇದೆ ವಿಶೇಷ ಸ್ಥಾನ! - Full moon day in June - FULL MOON DAY IN JUNE

ಜೂನ್​ನಲ್ಲಿ ಬರುವ ಹುಣ್ಣಿಮೆ ಅನೇಕ ಕೃಷಿ ಚಟುವಟಿಕೆಯೊಂದಿಗೆ ತಳಕು ಹಾಕಿಕೊಂಡಿದ್ದು, ವಿವಿಧ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ಏನಿದು ಜೂನ್​ ತಿಂಗಳ ಹುಣ್ಣಿಮೆ ವಿಶೇಷ ಅಂತೀರಾ. ಇದಲ್ಲವನ್ನು ತಿಳಿಯಲು ಈ ಸುದ್ದಿ ಓದಿ.

june-21-or-22-when-is-full-moon-day-whats-the-speciality-of-strawberry-moon
ಸ್ಟ್ರಾಬೇರಿ ಮೂನ್ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 21, 2024, 1:38 PM IST

ಹೈದರಾಬಾದ್​: ಈ ತಿಂಗಳ ಹುಣ್ಣಿಮೆ ಬಲು ವಿಶೇಷ. ಕಾರಣ ಇದು ಸ್ಟ್ರಾಬೇರಿ ಮೂನ್​. ಈ ಹಿನ್ನೆಲೆಯಲ್ಲಿ ಹುಣ್ಣಿಮೆ ಜೂನ್​​ 21 ಅಥವಾ 22 ಎಂಬ ಬಗ್ಗೆ ಹಲವರಿಗೆ ಅನುಮಾನ ಇದೆ. ಭೂಮಿ ಆಧಾರಿತ ರೇಖಾಂಶದಲ್ಲಿ ಹುಣ್ಣಿಮೆಯು ಜೂನ್​ 21ರ ರಾತ್ರಿ 9.08 ನಿಮಿಷದಿಂದ ಆರಂಭವಾದರೆ, ಗ್ರೀನ್‌ಲ್ಯಾಂಡ್​​, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಾದ್ಯಂತ ಮಧ್ಯ ಪೆಸಿಫಿಕ್‌ನಲ್ಲಿ ಇದು ಶನಿವಾರ ಆಚರಿಸಲಾಗುತ್ತಿದೆ. ಬಹುತೇಕ ವಾಣಿಜ್ಯ ಕ್ಯಾಲೆಂಡರ್​ ಪ್ರಕಾರ ಕೂಡ ಶನಿವಾರ ಅಂದರೆ, ಜೂನ್​ 22 ಹುಣ್ಣಿಮೆಯ ದಿನ ಎಂದು ಸೂಚಿಸಲಾಗಿದೆ. ಆದರೆ, ಈ ಹುಣ್ಣಿಮೆಯ ಚಂದ್ರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ಗುರುವಾರದಿಂದ ಭಾನುವಾರ ಬೆಳಗಿನವರೆಗೆ ಕಾಣಲಿದ್ದಾನೆ.

ದೀರ್ಘವಾಗಿರುವ ಹಗಲು: ನಮಗೆಲ್ಲ ತಿಳಿದಿರುವಂತೆ ಜೂನ್​ 21 ಹೆಚ್ಚು ಹಗಲಿರುವ ದಿನ. ಅದರಂತೆ, ಬೇಸಿಗೆ ಆರಂಭ (ಅಮೆರಿಕದಲ್ಲಿ) ವಾಗುತ್ತಿದ್ದಂತೆ ಸೂರ್ಯನ ಬೆಳಕಿನ ಅವಧಿಗಳು ನಿಧಾನವಾಗಿ ಕಡಿಮೆಯಾಗಲು ಶುರುವಾಗುತ್ತದೆ. ಆದರೆ, ಜೂನ್​ 21 ರಂದು ಬೇಸಿಗೆ ಆಯನ ಸಂಕ್ರಾಂತಿ ದಿನದಲ್ಲಿ ಬೆಳಕಿನ ಅವಧಿ ಹೆಚ್ಚಿರುತ್ತದೆ. ಇದೇ ಕಾರಣ ಶುಕ್ರವಾರ ಅಂದರೆ ಜೂನ್​ 21ರಂದು 4.30ಕ್ಕೆ ಬೆಳಕು ಹರಿದು, ಸೂರ್ಯ 5.43ಕ್ಕೆ ಉದಯಿಸಲಿದ್ದಾನೆ. ಸೂರ್ಯ ತನ್ನ ಗರಿಷ್ಠ ಎತ್ತರ ಅಂದರೆ 74.6 ಡಿಗ್ರಿಯನ್ನು ಮಧ್ಯಾಹ್ನ 1.10ಕ್ಕೆ ತಲುಪಲಿದ್ದಾನೆ. ಸೂರ್ಯಾಸ್ತ ರಾತ್ರಿ 8.37ಕ್ಕೆ ಆದರೆ, ಅದರ ಬೆಳಕು 9.49ರವರೆಗೆ ಇರಲಿದೆ. ಕಳೆದ ಬೇಸಿಗೆಯ ಬೇಸಿಗೆಯ ಆಯನ ಸಂಕ್ರಾಂತಿಗಿಂತ ಈ ವರ್ಷದ ಬೇಸಿಗೆಯ ಅಯನ ಸಂಕ್ರಾಂತಿಗಿಂತ ಹಗಲಿನ ಅವಧಿಯು 1.2 ಸೆಕೆಂಡುಗಳು ಕಡಿಮೆ ಇರಲಿದೆ.

ಸ್ಟ್ರಾಬೇರಿ ಮೂನ್​: ಜೂನ್​ನಲ್ಲಿ ಸಂಭವಿಸುವ ಹುಣ್ಣಿಮೆಯನ್ನು ಸ್ಟ್ರಾಬೇರಿ ಮೂನ್​ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಹುಣ್ಣಿಮೆ ಅತಿ ಹೆಚ್ಚಿನ ಶಕ್ತಿಯೊಂದಿಗೆ ಸಂಯೋಜಿತವಾಗಿದೆ. ಈ ದಿನದಂದು ಪೂರ್ಣ ಚಂದಿರ ಸೂರ್ಯನ ಕಿರಣದಿಂದ ಸಂಪೂರ್ಣವಾಗಿ ಹೊಳೆಯುವುದರಿಂದ ಹೆಚ್ಚು ಪ್ರಕಾಶಮಾನವಾಗಿರುತ್ತಾನೆ.

ಸ್ಟ್ರಾಬೇರಿ ಮೂನ್​ ಎಂದು ಕರೆಯಲು ಕಾರಣವೇನು?: 1930ರಲ್ಲಿ ಕೃಷಿಕರು ಜೂನ್​ನ ಹುಣ್ಣಿಮೆಗೆ ಈ ಹೆಸರನ್ನು ಇಟ್ಟರು. ಅಮೆರಿಕದ ಸ್ಥಳೀಯ ಜನರು ಈ ಸಂದರ್ಭದಲ್ಲಿ ಸ್ಟ್ರಾಬೇರಿಯ ಸಣ್ಣ ಕೃಷಿಯನ್ನು ಮಾಡುವ ಹಿನ್ನೆಲೆಯಲ್ಲಿ ಜೂನ್​ನ ಪೂರ್ಣ ಚಂದಿರನಿಗೆ ಸ್ಟ್ರಾಬೇರಿ ಎಂಬ ಹೆಸರು ಬಂದಿತು. ಇದಕ್ಕೆ ಪರ್ಯಾಯವಾಗಿ ಪ್ರಾಚೀನ ಯುರೋಪಿಯನ್ನರು ಜೂನ್​ನ ಹುಣ್ಣಿಮೆಗೆ ಹನಿ ಮೂನ್​ ಎಂದು ಕರೆಯುತ್ತಾರೆ. ಕಾರಣ ಈ ವೇಳೆ ಅಲ್ಲಿ ಜೇನಿನ ಕೃಷಿ ಸಾಗುತ್ತದೆ.

ಹನಿಮೂನ್​ ಅನ್ನು ಸಾಮಾನ್ಯವಾಗಿ ಮದುವೆಯ ಮೊದಲ ತಿಂಗಳ ರಾತ್ರಿಗಳನ್ನು ವರ್ಣಿಸಲು ಬಳಸುತ್ತಾರೆ. ಕಾರಣ ಜೂನ್​ನಲ್ಲಿ ಅತಿ ಹೆಚ್ಚು ಮದುವೆಗಳು ನಡೆಯುವುದರಿಂದ ಈ ಹುಣ್ಣಿಮೆಯನ್ನು ಹನಿಮೂನ್​ ಎಂದು ಕರೆಯಲಾಗಿದೆ ಎಂದು ನಾಸಾ ವಿವರಿಸಿದೆ. ಮತ್ತೊಂದು ವಾದದ ಪ್ರಕಾರ, ಹೊಸದಾಗಿ ಮದುವೆಯಾದಾಗ ಆ ತಿಂಗಳಲ್ಲಿ ಸಂಸ್ಕರಿಸಿದ ಜೇನ ಪಾನೀಯವನ್ನು ನೀಡುವುದರಿಂದ ಕೂಡ ಈ ಹೆಸರು ಹುಣ್ಣಿಮೆಯೊಂದಿಗೆ ತಳಕು ಹಾಕಿಕೊಂಡಿದೆ ಎನ್ನಲಾಗಿದೆ.

ಮತ್ತೆ ಕೆಲವು ಮಂದಿ ಇದನ್ನು ಬರ್ತ್​ ಮೂನ್​ (ಚಂದ್ರನ ಹುಟ್ಟು) ಎಂದು ಕರೆಯುತ್ತಾರೆ. ಹುಣ್ಣಿಮೆಯಲ್ಲಿ ಮೊಟ್ಟೆ ಇಡುವುದು. ಮರಿ ಹೊರಗೆ ಬರುವುದನ್ನು ಜೀವನದ ಹೊಸ ಆರಂಭ ಎಂಬುದಾಗಿ ಹೇಳಲಾಗಿದೆ ಎಂದು ಹಳೆ ಕೃಷಿಕ ಪಂಚಾಂಗ ತಿಳಿಸಿದೆ. ಕಳೆದ 20 ವರ್ಷಗಳಿಂದ ಬೇಸಿಗೆಯ ಆಯಾನ ಹುಣ್ಣಿಮೆಯನ್ನು ಸ್ಟ್ರಾಬೇರಿ ಮೂನ್​ ಎಂದು ಕರೆಯಲಾಗುತ್ತಿದ್ದು, 1930ರಿಂದ ಸಾಮಾನ್ಯವಾಗಿ ಈ ಹುಣ್ಣಿಮೆ ಜೂನ್​ 20, 21 ಅಥವಾ 22 ಬರತ್ತದೆ. ಭಾರತದಲ್ಲಿ ಇದನ್ನು ಪೂರ್ಣಿಮೆ ಎಂದು ಕರೆಯಲಾಗುವುದು.

ಹಿಂದೂಗಳು ಈ ಪೂರ್ಣಿಮೆಯನ್ನು ವತ್​​ ಪೂರ್ಣಿಮಾ ಎಂದು ಕರೆಯುತ್ತಾರೆ. ಮೂರು ದಿನ ಈ ಹುಣ್ಣಮೆ ಇರುತ್ತದೆ. ಸಾವಿತ್ರಿ ಮತ್ತು ಸತ್ಯವನ್​ ಕಥೆಯು ಈ ದಿನಕ್ಕೆ ತಳುಕು ಹಾಕಿದ್ದು, ಈ ಹಿನ್ನೆಲೆ ಮಹಿಳೆ ಪತಿಯ ಆಯಸ್ಸಿಗಾಗಿ ಅರಳಿಮರಕ್ಕೆ ದಾರವನ್ನು ಕಟ್ಟುವ ಪದ್ಧತಿ ಇದೆ. ಬೌದ್ಧ ಧರ್ಮದಲ್ಲಿ ಈ ಹುಣ್ಣಿಮೆಯನ್ನು ಪೊಸೊನ್​ ಪೊಯಾ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಹುಣ್ಣಿಮೆ ಬೆಳದಿಂಗಳ ರಾತ್ರಿಯಲ್ಲಿ ತಾಜ್​​ಮಹಲ್ ವೀಕ್ಷಣೆ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.