ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ಆಪರೇಷನ್ ಅಸರ್ ವೇಳೆ ಭಾರತೀಯ ಸೇನೆಯ 48 ರಾಷ್ಟ್ರೀಯ ರೈಫಲ್ಸ್‌ನ ಕ್ಯಾ.ದೀಪಕ್ ಸಿಂಗ್ ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಎನ್ಕೌಂಟರ್ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.
Op ASSAR : Update
— White Knight Corps (@Whiteknight_IA) August 14, 2024
One #terrorist has been neutralised in the ongoing operation.
One AK 47 has been recovered in addition to the M4 rifle.
Intermittent exchange of firing continues as the operations are ongoing.@adgpi @NorthernComd_IA
ಅಸ್ಸಾರ್‌ನ ಶಿವಗಢ್ ಧಾರ್ ಪ್ರದೇಶದಲ್ಲಿ ಎನ್‌ಕೌಂಟರ್ ಸೈಟ್‌ನಿಂದ ಒಂದು M4 ಕಾರ್ಬೈನ್ ಮತ್ತು ಮೂರು ಬ್ಯಾಕ್‌ಪ್ಯಾಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ತಡರಾತ್ರಿ ಭದ್ರತಾ ಪಡೆಗಳ ಜಂಟಿ ತಂಡಕ್ಕೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮುಂದೆ ಸಾಗುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದರು. ನಂತರ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಮದ್ದುಗುಂಡು ಸೇರಿದಂತೆ ಆಕ್ಷೇಪಾರ್ಹ ವಸ್ತುಗಳಿದ್ದವು.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪಟ್ನಿಟಾಪ್ ಬಳಿಯ ಅಕರ್ ಅರಣ್ಯದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಆಪರೇಷನ್ ಅಸರ್ ಎಂದು ಹೆಸರಿಡಲಾಗಿದೆ. ಶನಿವಾರದಿಂದ ಅಡಗಿರುವ ಉಗ್ರರ ವಿರುದ್ಧ ಇದು ನಾಲ್ಕನೇ ಕಾರ್ಯಾಚರಣೆಯಾಗಿದೆ.
ಶನಿವಾರದಿಂದ ಅನಂತ್‌ನಾಗ್, ಕಿಶ್ತ್ವಾರ್ ಮತ್ತು ಉಧಮ್‌ಪುರ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಮೂರು ಗುಂಪುಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.
ಇದನ್ನೂ ಓದಿ: 10,000 ಅಡಿ ಎತ್ತರದ ಅರಣ್ಯದಲ್ಲಿ ಎನ್‌ಕೌಂಟರ್: ಇಬ್ಬರು ಯೋಧರು ಹುತಾತ್ಮ, ಓರ್ವ ನಾಗರಿಕ ಸಾವು - Anantnag Encounter