ETV Bharat / bharat

4 ದಶಕಗಳ ನಂತರ ಚುನಾವಣಾ ಅಖಾಡಕ್ಕೆ ಮರಳಿದ ಜಮಾತೆ ಇಸ್ಲಾಮಿ: ಕುಲ್ಗಾಮ್​ನಲ್ಲಿ ಬೃಹತ್ ರ್‍ಯಾಲಿ - Jammu And Kashmir Election - JAMMU AND KASHMIR ELECTION

40 ವರ್ಷಗಳ ನಂತರ ಚುನಾವಣೆಗೆ ಸ್ಪರ್ಧಿಸುತ್ತಿರುವ ಜಮಾತೆ ಇಸ್ಲಾಮಿ ಅಭ್ಯರ್ಥಿಯ ಪರವಾಗಿ ಕುಲ್ಗಾಮ್​ನಲ್ಲಿ ಬೃಹತ್ ಚುನಾವಣಾ ರ್‍ಯಾಲಿ ನಡೆಸಲಾಯಿತು.

ಕುಲ್ಗಾಮ್​ನಲ್ಲಿ ನಡೆದ ಬೃಹತ್ ರ್‍ಯಾಲಿ
ಕುಲ್ಗಾಮ್​ನಲ್ಲಿ ಜಮಾತೆ ಇಸ್ಲಾಮಿ ಬೃಹತ್ ರ್‍ಯಾಲಿ (IANS)
author img

By ETV Bharat Karnataka Team

Published : Sep 8, 2024, 5:55 PM IST

ಶ್ರೀನಗರ: 40 ವರ್ಷಗಳ ಚುನಾವಣಾ ಬಹಿಷ್ಕಾರವನ್ನು ಕೊನೆಗೊಳಿಸಿ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಆಖಾಡಕ್ಕೆ ಇಳಿದಿರುವ ಜಮಾತೆ ಇಸ್ಲಾಮಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಭಾನುವಾರ ಕುಲ್ಗಾಮ್ ಜಿಲ್ಲೆಯಲ್ಲಿ ಬೃಹತ್ ರ್‍ಯಾಲಿ ನಡೆಸಲಾಯಿತು. ಸಯಾರ್ ಅಹ್ಮದ್ ರೇಶಿ ಅವರು ಕುಲ್ಗಾಮ್ ವಿಧಾನ ಸಭಾ ಕ್ಷೇತ್ರದಲ್ಲಿ ಜಮಾತೆ ಇಸ್ಲಾಮಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿದ್ದು, ಸಿಪಿಐ(ಎಂ)ನ ಎಂ.ವೈ.ತಾರಿಗಾಮಿ ಇವರ ಎದುರಾಳಿಯಾಗಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ (ಎನ್​ಸಿ) ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿಕೂಟವು ಕುಲ್ಗಾಮ್ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

1987ರ ನಂತರ ಇದೇ ಮೊದಲ ಬಾರಿಗೆ ಜಮಾತ್ ಕಾರ್ಯಕರ್ತರು ಜಮಾತ್​ನ ಮಾಜಿ ಸದಸ್ಯ ಹಾಗೂ ಸ್ವತಂತ್ರ ಅಭ್ಯರ್ಥಿ ಸಯಾರ್ ಅಹ್ಮದ್ ರೇಶಿ ಪರವಾಗಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಬುಗಾಮ್ ಪ್ರದೇಶದಲ್ಲಿ ನಡೆದ ರ್‍ಯಾಲಿಯಲ್ಲಿ ಜಮಾತ್ ಪ್ರಾಯೋಜಿತ ಅಭ್ಯರ್ಥಿ ರೇಶಿ ಮಾತನಾಡಿದರು.

ಕಳೆದ ನಾಲ್ಕು ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆದಾಗಲೆಲ್ಲಾ ಮತದಾನದಿಂದ ದೂರ ಉಳಿದಿದ್ದ ಸಾಮಾಜಿಕ-ಧಾರ್ಮಿಕ ಸಂಘಟನೆಯಾಗಿರುವ ಜಮಾತೆ ಇಸ್ಲಾಮಿಯು 40 ವರ್ಷಗಳ ನಂತರ ಆಯೋಜಿಸಿದ್ದ ಮೊದಲ ರ್‍ಯಾಲಿಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕಾಶ್ಮೀರಿಗಳು ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ನಂಬಿಕೆ ಇಟ್ಟಿರುವುದನ್ನು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮಿ ಮತ್ತೆ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ 2019 ರಲ್ಲಿ ಕೇಂದ್ರ ಗೃಹ ಸಚಿವಾಲಯವು ಜಮಾತೆ ಇಸ್ಲಾಮಿಯನ್ನು ನಿಷೇಧಿಸಿದೆ. ಹೀಗಾಗಿ ಸಂಘಟನೆಯ ಮಾಜಿ ಸದಸ್ಯರನ್ನು ಬೆಂಬಲಿಸುವ ಮೂಲಕ ಜಮಾತ್ ರಾಜಕೀಯ ವ್ಯವಸ್ಥೆಗೆ ಮರುಪ್ರವೇಶಿಸಲು ಉದ್ದೇಶಿಸಿದೆ.

ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಯಾರ್ ಅಹ್ಮದ್ ರೇಶಿ, "ಬೃಹತ್ ಜನಶಕ್ತಿಯೇ ನಮ್ಮ ಶಕ್ತಿ. ನಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗುತ್ತದೆ ಮತ್ತು ನಮ್ಮನ್ನು ಟೀಕಿಸಲಾಗುತ್ತದೆ. ಆದರೆ ಪ್ರಾದೇಶಿಕ ರಾಜಕೀಯ ಪಕ್ಷಗಳು ಸೃಷ್ಟಿಸಿದ ನಿರ್ವಾತವನ್ನು ನಾವು ತುಂಬಬೇಕಾಗಿದೆ. ಇದು ವಾಸ್ತವ" ಎಂದು ಅವರು ಹೇಳಿದರು.

ಜಮಾತೆ ಇಸ್ಲಾಮಿ ಸದ್ಯ ದಕ್ಷಿಣ ಕಾಶ್ಮೀರ ಜಿಲ್ಲೆಗಳಲ್ಲಿ ತನ್ನ ಮಾಜಿ ಸದಸ್ಯರನ್ನು ಕಣಕ್ಕಿಳಿಸಿದೆ. ಮಧ್ಯ ಮತ್ತು ಉತ್ತರ ಕಾಶ್ಮೀರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂಘಟನೆಯು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ.

ಕಳೆದ ನಾಲ್ಕು ದಶಕಗಳಿಂದ ಜಮಾತೆ ಇಸ್ಲಾಮಿ ರಾಜಕೀಯದಿಂದ ದೂರ ಉಳಿದಿದ್ದರಿಂದ ಕಣಿವೆಯಲ್ಲಿನ ಚುನಾವಣೆಗಳು ಎರಡು ಪ್ರಾದೇಶಿಕ ಪಕ್ಷಗಳಾದ ಎನ್​ಸಿ ಮತ್ತು ಪಿಡಿಪಿ ನಡುವಿನ ಸ್ಪರ್ಧೆ ಮಾತ್ರವಾಗಿತ್ತು. ಆದರೆ ಚುನಾವಣಾ ರಾಜಕೀಯದಲ್ಲಿ ಜಮಾತ್​ನ ಮರುಪ್ರವೇಶವು ಪ್ರಾದೇಶಿಕ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳನ್ನು ಬದಲಾಯಿಸುವುದು ಖಚಿತ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 28, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ತಲಪತಿ ವಿಜಯ್​ ಪಕ್ಷ 'ಟಿವಿಕೆ'ಗೆ ಮಾನ್ಯತೆ: 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ - TVK Gets EC Recognition

ETV Bharat Logo

Copyright © 2025 Ushodaya Enterprises Pvt. Ltd., All Rights Reserved.