ETV Bharat / bharat

ಸಿಐಡಿ ಜತೆ ಇನ್ಫೋಸಿಸ್ ಒಪ್ಪಂದ; 4 ವರ್ಷಗಳಿಗೆ ₹33 ಕೋಟಿ ಅನುದಾನ - Infosys Foundation Grants - INFOSYS FOUNDATION GRANTS

ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ರಾಜ್ಯದ ಪೊಲೀಸರಿಗೆ ಇನ್ಫೋಸಿಸ್‌ ಫೌಂಡೇಶನ್ 33 ಕೋಟಿ ರೂ. ಅನುದಾನ ನೀಡಿದೆ.

ಸಿಐಡಿ ಜತೆ ಇನ್ಫೋಸಿಸ್ ಒಪ್ಪಂದ; 4 ವರ್ಷಗಳಿಗೆ 33 ಕೋಟಿ ಅನುಧಾನ

author img

By PTI

Published : Apr 10, 2024, 11:04 PM IST

ನವದೆಹಲಿ/ಬೆಂಗಳೂರು: ಕರ್ನಾಟಕ ಪೊಲೀಸರ ಸೈಬರ್‌ ಕ್ರೈಂ ತನಿಖಾ ಸಾಮರ್ಥ್ಯವನ್ನು ಬಲಪಡಿಸಲು ಇನ್ಫೋಸಿಸ್‌ ಫೌಂಡೇಷನ್ 33 ಕೋಟಿ ರೂ.ಗಳ ಅನುದಾನ ನೀಡಿದೆ.

ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಸಹಯೋಗವನ್ನು ನವೀಕರಿಸಲು ಇನ್ಫೋಸಿಸ್ ಫೌಂಡೇಷನ್, ಅಪರಾಧ ತನಿಖಾ ಇಲಾಖೆ(ಸಿಐಡಿ) ಮತ್ತು ಡೇಟಾ ಭದ್ರತಾ ಮಂಡಳಿ (ಡಿಎಸ್‌ಸಿಐ) ಜತೆಗಿನ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಸಿಎಸ್‌ಆರ್ ಅಂಗವಾದ ಇನ್ಫೋಸಿಸ್ ಫೌಂಡೇಶನ್ ಬುಧವಾರ ಹೇಳಿದೆ.

ಇನ್ಫೋಸಿಸ್ ಫೌಂಡೇಶನ್ ಸಿಸಿಐಟಿಆರ್ ಜತೆಗಿನ ತನ್ನ ಒಡನಾಟವನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸುವ ಮೂಲಕ ಕರ್ನಾಟಕ ಪೊಲೀಸರ ಸೈಬರ್ ಕ್ರೈಮ್ ತನಿಖಾ ಸಾಮರ್ಥ್ಯಗಳನ್ನು ಬಲಪಡಿಸಲು 33 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನೀಡಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಐಟಿ ಇಲಾಖೆಯಿಂದ ₹ 6,329 ಕೋಟಿ ರಿಫಂಡ್​ ನಿರೀಕ್ಷೆಯಲ್ಲಿ ಇನ್ಫೋಸಿಸ್​ - Infosys

ETV Bharat Logo

Copyright © 2025 Ushodaya Enterprises Pvt. Ltd., All Rights Reserved.