ETV Bharat / bharat

2050ರ ವೇಳೆಗೆ ಭಾರತದಲ್ಲಿ ವೃದ್ಧರ ಜನಸಂಖ್ಯೆ ದುಪ್ಟಟ್ಟು: ಯುಎನ್ಎಫ್​​ಪಿಎ ಮುಖ್ಯಸ್ಥೆ - Elderly Population In India - ELDERLY POPULATION IN INDIA

ಭಾರತದ ವೃದ್ಧರ ಜನಸಂಖ್ಯೆ 2050ರ ವೇಳೆಗೆ ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ ಎಂದು ಯುಎನ್ಎಫ್​​ಪಿಎ ಇಂಡಿಯಾದ ಮುಖ್ಯಸ್ಥೆ ಆಂಡ್ರಿಯಾ ವೊಜ್ನಾರ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By PTI

Published : Jul 21, 2024, 1:27 PM IST

ನವದೆಹಲಿ: 2050ರ ವೇಳೆಗೆ ಭಾರತದಲ್ಲಿನ ವೃದ್ಧರ ಜನಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚಾಗಲಿರುವ ವೃದ್ಧರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಆರೋಗ್ಯ, ವಸತಿ ಮತ್ತು ಪಿಂಚಣಿ ವ್ಯವಸ್ಥೆಗಳನ್ನು ನೀಡುವುದು ಅಗತ್ಯವಾಗಲಿದೆ ಎಂದು ಯುಎನ್ಎಫ್​​ಪಿಎ ಇಂಡಿಯಾದ ಮುಖ್ಯಸ್ಥ ಆಂಡ್ರಿಯಾ ವೊಜ್ನಾರ್ ಹೇಳಿದ್ದಾರೆ. ಅದರಲ್ಲೂ ವೃದ್ಧ ಮಹಿಳೆಯರು ಅತ್ಯಧಿಕ ಬಡತನದ ಹಾಗೂ ಒಂಟಿ ಜೀವನ ಬದುಕುವ ಪರಿಸ್ಥಿತಿಗಳು ಎದುರಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯ ಕೆಲವು ದಿನಗಳ ನಂತರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೋಜ್ನಾರ್, ಸುಸ್ಥಿರ ಅಭಿವೃದ್ಧಿಯನ್ನು ವೇಗಗೊಳಿಸಲು ಭಾರತವು ಆದ್ಯತೆ ನೀಡುತ್ತಿರುವ ಪ್ರಮುಖ ಜನಸಂಖ್ಯಾ ಪ್ರವೃತ್ತಿಗಳನ್ನು ವಿವರಿಸಿದರು. ಈ ಪ್ರವೃತ್ತಿಗಳಲ್ಲಿ ಯುವ ಜನಸಂಖ್ಯೆ, ವಯಸ್ಸಾದ ಜನಸಂಖ್ಯೆ, ನಗರೀಕರಣ, ವಲಸೆ ಮತ್ತು ಹವಾಮಾನ ಬದಲಾವಣೆಗಳು ಸೇರಿವೆ. ಇವುಗಳಲ್ಲಿ ಪ್ರತಿಯೊಂದು ಪ್ರವೃತ್ತಿಯೂ ರಾಷ್ಟ್ರಕ್ಕೆ ವಿಶಿಷ್ಟ ಸವಾಲುಗಳು ಮತ್ತು ಅವಕಾಶಗಳನ್ನು ಪ್ರಸ್ತುತಪಡಿಸುತ್ತದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಸಂಖ್ಯೆ 2050 ರ ವೇಳೆಗೆ 346 ಮಿಲಿಯನ್​​ಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿರುವುದರಿಂದ, ಆರೋಗ್ಯ, ವಸತಿ ಮತ್ತು ಪಿಂಚಣಿ ಯೋಜನೆಗಳಲ್ಲಿ ಹೆಚ್ಚಿನ ಹಣಕಾಸು ಹೂಡಿಕೆಯ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಪ್ರಸ್ತುತ ಭಾರತವು 10 ರಿಂದ 19 ವರ್ಷದೊಳಗಿನ 252 ಮಿಲಿಯನ್​ನಷ್ಟು ಗಣನೀಯ ಪ್ರಮಾಣದ ಯುವ ಜನಸಂಖ್ಯೆಯನ್ನು ಹೊಂದಿದೆ ಎಂದು ಅವರು ನುಡಿದರು.

ಲಿಂಗ ಸಮಾನತೆಯನ್ನು ಉತ್ತೇಜಿಸುವುದರ ಜೊತೆಗೆ ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಿನ ಹಣಕಾಸು ಹೂಡಿಕೆ ಮಾಡುವುದರಿಂದ ಈ ಜನಸಂಖ್ಯೆಯ ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು ಮತ್ತು ರಾಷ್ಟ್ರವನ್ನು ಸುಸ್ಥಿರ ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಅವರು ಒತ್ತಿ ಹೇಳಿದರು.

2050 ರ ವೇಳೆಗೆ ಭಾರತವು ಶೇಕಡಾ 50ರಷ್ಟು ನಗರಗಳ ರಾಷ್ಟ್ರವಾಗಲಿದೆ ಎಂದು ಅಂದಾಜಿಸಲಾಗಿದ್ದು, ಕೊಳೆಗೇರಿ ಬೆಳವಣಿಗೆ, ವಾಯುಮಾಲಿನ್ಯ ಮತ್ತು ಪರಿಸರ ಸಮಸ್ಯೆಗಳನ್ನು ನಿರ್ವಹಿಸಲು ಸ್ಮಾರ್ಟ್ ಸಿಟಿಗಳು, ಬಲವಾದ ಮೂಲಸೌಕರ್ಯ ಮತ್ತು ಕೈಗೆಟುಕುವ ಬೆಲೆಯ ವಸತಿಗಳನ್ನು ನಿರ್ಮಿಸುವುದು ನಿರ್ಣಾಯಕವಾಗಿದೆ ಎಂದು ವೊಜ್ನಾರ್ ತಿಳಿಸಿದರು.

ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ನಗರ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಆದ್ಯತೆ ನೀಡಬೇಕು, ಆರೋಗ್ಯ ರಕ್ಷಣೆ, ಶಿಕ್ಷಣದ ಸೌಲಭ್ಯಗಳನ್ನು ವಿಸ್ತರಿಸಬೇಕು ಮತ್ತು ಅವರಿಗಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಸಮತೋಲಿತ ಬೆಳವಣಿಗೆಗೆ ವಲಸಿಗರು ಅಥವಾ ಸಂಗಾತಿಗಳಾಗಿ ಮಹಿಳೆಯರು ಎದುರಿಸುತ್ತಿರುವ ನಿರ್ದಿಷ್ಟ ಸವಾಲುಗಳನ್ನು ಪರಿಹರಿಸುವುದು ಅತ್ಯಗತ್ಯ. ಅಭಿವೃದ್ಧಿ ಯೋಜನೆಗಳಲ್ಲಿ ಹವಾಮಾನ ಬದಲಾವಣೆಯನ್ನು ಸಂಯೋಜಿಸುವುದು ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದು ಕೂಡ ಅಗತ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಮರನಾಥ ಯಾತ್ರೆ: 22 ದಿನಗಳಲ್ಲಿ 3.86 ಲಕ್ಷ ಭಕ್ತರಿಂದ ಹಿಮಲಿಂಗದ ದರ್ಶನ - Amarnath Yatra

ETV Bharat Logo

Copyright © 2025 Ushodaya Enterprises Pvt. Ltd., All Rights Reserved.