ಹೈದರಾಬಾದ್: ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ಕೇಂದ್ರವಾಗಿ ಗುರುತಿಸಿಕೊಂಡಿರುವ ಹೈದರಾಬಾದ್ ಇನ್ನು ತೆಲಂಗಾಣದ ಪೂರ್ಣ ರಾಜಧಾನಿಯಾಗಲಿದೆ. ಆಂಧ್ರಪ್ರದೇಶಕ್ಕೂ ರಾಜಧಾನಿಯಾಗಿದ್ದ ನಗರವು ಭಾನುವಾರದಿಂದ (ಜೂನ್ 2) ಎಲ್ಲ ನಂಟು ಕಡಿದುಕೊಳ್ಳಲಿದೆ. ಇದರಿಂದ ಆಂಧ್ರವು ಹೊಸ ರಾಜಧಾನಿಯನ್ನು ಗುರುತಿಸಿಕೊಳ್ಳುವ ಬಗ್ಗೆ ಚಿಂತಿಸಬೇಕಿದೆ.
ಅವಿಭಜಿತ ಆಂಧ್ರಪ್ರದೇಶ ಇಬ್ಭಾಗವಾಗಿ ಇಂದಿಗೆ 10 ವರ್ಷ ಕಳೆಯಿತು. 2014ರ ಜೂನ್ 2ರಂದು ತೆಲಂಗಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿತ್ತು. ಆ ವೇಳೆ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಮುಂದಿನ 10 ವರ್ಷ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗಿ ಹೈದರಾಬಾದ್ ಮುಂದುವರಿಯಲಿದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಆ ಅವಧಿ ಮುಗಿದಿದೆ.
10 ವರ್ಷ ಸಾಮಾನ್ಯ ರಾಜಧಾನಿ ಒಪ್ಪಂದ: ಕಾಯ್ದೆಯ ನಿಯಮಾವಳಿ ಪ್ರಕಾರ, ಹೈದರಾಬಾದ್ ನಗರವು 10 ವರ್ಷಗಳ ಕಾಲ ಎರಡೂ ತೆಲುಗು ರಾಷ್ಟ್ರಗಳಿಗೆ ಸಾಮಾನ್ಯ ರಾಜಧಾನಿಯಾಗಿರಲಿದೆ. ಈ ಅವಧಿ ಮುಗಿದ ಬಳಿಕ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿಯಲಿದೆ. ಆಂಧ್ರಪ್ರದೇಶ ಹೊಸ ಕ್ಯಾಪಿಟಲ್ ಅನ್ನು ಗುರುತಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ತೆಲಂಗಾಣ ರಾಜ್ಯ ಉದಯವಾದ ಬಳಿಕ ಹೈದರಾಬಾದ್ನಿಂದ ಆಂಧ್ರಪ್ರದೇಶವು ಅಧಿಕಾರ ನಡೆಸಲು ಲೇಕ್ ವ್ಯೂ ಸರ್ಕಾರಿ ಅತಿಥಿ ಗೃಹ, ಕಾರ್ಯಾಲಯ ಸಂಕೀರ್ಣ ಸೇರಿದಂತೆ ಕೆಲವು ಕಟ್ಟಡಗಳನ್ನು ಹಂಚಿಕೆ ಮಾಡಲಾಗಿತ್ತು. ಅಲ್ಲಿಂದ ಆಂಧ್ರ ಸರ್ಕಾರ ಅಧಿಕಾರ ನಡೆಸಬಹುದಾಗಿತ್ತು.
ಬಗೆಹರಿಯದ ರಾಜಧಾನಿ ಗೊಂದಲ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಸರ್ಕಾರ ಹೈದರಾಬಾದ್ ಬದಲಿಗೆ ಅಮರಾವತಿಯನ್ನು ರಾಜಧಾನಿಯನ್ನಾಗಿ ರೂಪಿಸಲು ಕ್ರಮ ಕೈಗೊಂಡಿತ್ತು. ಇಲ್ಲಿನ ಸರ್ಕಾರಿ ಕಚೇರಿಗಳನ್ನು ಅಮರಾವತಿಗೆ ವರ್ಗ ಮಾಡಿತ್ತು. ಆದರೆ, ಬಳಿಕ ಬಂದ ವೈಎಎಸ್ಆರ್ಸಿಪಿ ಸರ್ಕಾರ ರಾಜಧಾನಿ ವಿಚಾರದಲ್ಲಿ ಗೊಂದಲದಲ್ಲಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಮೂರು ರಾಜಧಾನಿಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು.
ಆದರೆ, ಈವರೆಗೂ ಅಧಿಕೃತವಾಗಿ ಆಂಧ್ರಪ್ರದೇಶಕ್ಕೆ ರಾಜಧಾನಿ ಇಲ್ಲವಾದ್ದರಿಂದ ಹೈದರಾಬಾದ್ನಲ್ಲಿ ಸರ್ಕಾರಿ ಕಟ್ಟಡಗಳನ್ನೂ ಅಲ್ಲಿನ ಸರ್ಕಾರ ಬಳಸಿಕೊಳ್ಳುತ್ತಿತ್ತು. ಇದೀಗ ಅದರ ಅವಧಿಯು ಸಂಪೂರ್ಣ ಮುಗಿದ ಕಾರಣ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರು ಸರ್ಕಾರಿ ಕಟ್ಟಡಗಳನ್ನು ಸುಪರ್ದಿಗೆ ಪಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ, ಈ ಬಗ್ಗೆ ಆಂಧ್ರ ಸರ್ಕಾರ ತೆಲಂಗಾಣಕ್ಕೆ ಪತ್ರ ಬರೆದು, ಅವಧಿಯನ್ನು ವಿಸ್ತರಿಸಲು ಕೋರಿತ್ತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಗ್ಗೆ ಸಿಎಂ ರೇವಂತ್ ರೆಡ್ಡಿ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಎರಡೂ ರಾಷ್ಟ್ರಗಳು ಇಬ್ಭಾಗವಾಗಿ ಹತ್ತು ವರ್ಷಗಳ ನಂತರವೂ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಆಸ್ತಿಗಳ ವಿಭಜನೆಯಂತಹ ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಮತ ಎಣಿಕೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬೆಳಗ್ಗೆ 8ಕ್ಕೆ ಕೌಂಟಿಂಗ್ ಶುರು - Lok Sabha Election