ETV Bharat / bharat

ಡಿಸೆಂಬರ್​ 21ಕ್ಕೆ ಜಿಎಸ್​ಟಿ ಮಂಡಳಿ ಸಭೆ: ಜೀವ ವಿಮೆ ಮೇಲಿನ ಜಿಎಸ್​ಟಿ ಕುರಿತು ಚರ್ಚೆ ಸಾಧ್ಯತೆ - GST COUNCIL MEET IN DECEMBER

ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್​ ಇಳಿಕೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

gst-council-to-meet-in-jaisalmer-on-dec-21-may-decide-on-insurance-levy-rate-rationalisation
ನಿರ್ಮಲಾ ಸೀತಾರಾಮನ್​ (ಸಂಗ್ರಹ ಚಿತ್ರ)
author img

By PTI

Published : Nov 19, 2024, 11:47 AM IST

ನವದೆಹಲಿ: ಜಿಎಸ್​ಟಿ ಮಂಡಳಿಯು ಇದೇ ಡಿಸೆಂಬರ್​ 21ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಸಭೆ ಸೇರಲಿದ್ದು, ಇಲ್ಲಿ ಬಹು ನಿರೀಕ್ಷಿತ ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್​ಟಿ ವಿನಾಯಿತಿ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಧ್ಯಕ್ಷತೆಯಲ್ಲಿ ರಾಜ್ಯದ ಇತರೆ ಅಧಿಕಾರಿಗಳು ಮಂಡಳಿಯಲ್ಲಿರಲಿದ್ದಾರೆ. ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್​ ಇಳಿಕೆ ಕುರಿತು ನಿರ್ಧಾರ ನಡೆಸುವ ಸಾಧ್ಯತೆ ಇದೆ.

ಈ ಸಂಬಂಧ ಪೋಸ್ಟ್​ ಮಾಡಿರುವ ಜಿಎಸ್​ಟಿ ಮಂಡಳಿ 2024ರ ಡಿಸೆಂಬರ್​ 21ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಜಿಎಸ್​ಟಿ ಸಭೆ ನಡೆಯಲಿದೆ ಎಂದು ತಿಳಿಸಿದೆ.

ಮಂಡಳಿಯು ಕಳೆದ ಸಭೆಯನ್ನು ಸೆಪ್ಟೆಂಬರ್​ 9ರಂದು ನಡೆಸಿತ್ತು. ಇಲ್ಲಿ ಸಚಿವರ ಗುಂಪು ಅಕ್ಟೋಬರ್​ ಅಂತ್ಯದೊಳಗೆ ವಿಮೆ ಜಿಎಸ್​ಟಿ ಅಂತ್ಯಗೊಳಿಸುವ ಕುರಿತು ನಿರ್ಣಯ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಸಚಿವರ ಗುಂಪು ಕಳೆದ ತಿಂಗಳು ವಿಮಾ ಪಾಲಿಸಿಗಳಿಗೆ ಪಾವತಿಸಿದ ವಿಮಾ ಕಂತುಗಳನ್ನು ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯನ್ನು ಜಿಎಸ್​ಟಿಯಿಂದ ವಿನಾಯಿತಿ ನೀಡಲು ಒಪ್ಪಿಕೊಂಡಿದೆ.

ಹಿರಿಯ ನಾಗರಿಕರ ಹೊರತಾಗಿ ವೈಯಕ್ತಿಕವಾಗಿ ಪಾವತಿಯಾದ ಐದು ಲಕ್ಷದವರೆಗಿನ ಆರೋಗ್ಯ ವಿಮೆಗೆ ವಿನಾಯಿತಿ ಪ್ರಸ್ತಾಪ ಮಾಡಲಾಗಿದೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.

ಪ್ರತ್ಯೇಕವಾಗಿ ಜಿಎಸ್​ಟಿ ದರ ತರ್ಕಬದ್ಧಗೊಳಿಸುವಿಕೆ ಕುರಿತಾದ ಮಂಡಳಿಯು, ಪ್ಯಾಕ್ ಮಾಡಲಾದ ಕುಡಿಯುವ ನೀರು, ಬೈಸಿಕಲ್‌ಗಳು, ವ್ಯಾಯಾಮ ನೋಟ್‌ಬುಕ್‌ಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಬೂಟುಗಳು ಸೇರಿದಂತೆ ಹಲವಾರು ಸರಕುಗಳ ಮೇಲಿನ ತೆರಿಗೆ ದರಗಳನ್ನು ಕೌನ್ಸಿಲ್ ಮರುಹೊಂದಿಸಲು ಸಲಹೆ ನೀಡಿದೆ. ಈ ದರ ಮರು ಹೊಂದಾಣಿಕೆ ಸುಮಾರು 22,000 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಿದೆ.

20 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್​ಟಿಯನ್ನು ಶೇ 18ರಿಂದ ಶೇ 5 ಕಡಿಮೆ ಮಾಡಲು ಪ್ರಸ್ತಾಪ ಬಂದಿದೆ. ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸನ್ನು ಅಂಗೀಕರಿಸಿದರೆ, 10,000 ರೂ.ಗಿಂತ ಕಡಿಮೆ ಬೆಲೆಯ ಬೈಸಿಕಲ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ ಶೇ 5 ಕ್ಕೆ ಇಳಿಸಲಾಗುವುದು.

ಹಾಗೇ ನೋಟ್‌ಬುಕ್‌ಗಳ ಮೇಲಿನ ಜಿಎಸ್‌ಟಿಯನ್ನು 12 ರಿಂದ 5ಕ್ಕೆ ಇಳಿಸಲಾಗುತ್ತದೆ. 15 ಸಾವಿರ ರೂ. ಮೇಲಿನ ಶೂಗಳ ಮೇಲೆ ಜಿಎಸ್​ಟಿಯನ್ನು 18 ರಿಂದ 28ಕ್ಕೆ ಹಾಗೂ 25 ಸಾವಿರ ರೂ. ಮೇಲಿನ ಕೈ ಗಡಿಯಾರವನ್ನು ಶೇ 18ರಿಂದ 28ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಇದೆ.

ಸದ್ಯ ಜಿಎಸ್​ಟಿಯನ್ನು 5, 12, 18 ಮತ್ತು 28ರಷ್ಟರ ಸ್ಲಾಬ್​ ಜೊತೆಗೆ ನಾಲ್ಕು ಹಂತದ ಜಿಎಸ್​ಟಿ ಹೊಂದಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಪ್ರಕರಣ: ಕ್ರಿಕೆಟಿಗ ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ನಿಂದ ರಿಲೀಫ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.