ETV Bharat / bharat

ರಾಜಕಾರಣಿಗಳು ಕೊಟ್ಟ ಭರವಸೆ ಮರೆತಿದ್ರೆ ಈ ಮ್ಯಾಜಿಕ್​ ಕುರ್ಚಿ ಮೇಲೆ ತಂದು ಕೂರಿಸಿ: ಎಲ್ಲವೂ ನೆನಪಿಗೆ ಬರುತ್ತೆ! - AI MAGIC CHAIR

author img

By ETV Bharat Karnataka Team

Published : Jun 20, 2024, 5:26 PM IST

Updated : Jun 20, 2024, 5:34 PM IST

ರಾಜಕಾರಣಿಗಳು ಕೊಟ್ಟ ಭರವಸೆಗಳನ್ನು ಈಡೇರಿಸದೇ ಮರೆತಿದ್ದೀರಾ. ಹಾಗಿದ್ದರೆ ಅವರನ್ನು ಈ AI ಕುರ್ಚಿ ಮೇಲೆ ತಂದು ಕೂರಿಸಿ. ಆಗ ಅವರಿಗೆ ಎಲ್ಲವೂ ಜ್ಞಾಪಕಕ್ಕೆ ಬಂದು ಕೆಲಸ ಮಾಡಿಕೊಡಬಹುದು. ಅರೆ.. ಯಾವುದಪ್ಪಾ ಆ ಕುರ್ಚಿ ಅಂತೀರಾ ಮುಂದೆ ಓದಿ ನೋಡಿ.

ರಾಜಕಾರಣಿಗಳಿಗೆ ಭರವಸೆ ನೆನಪಿಸುವ ಎಐ ಖುರ್ಚಿ
ರಾಜಕಾರಣಿಗಳಿಗೆ ಭರವಸೆ ನೆನಪಿಸುವ ಎಐ ಖುರ್ಚಿ (ETV Bharat)

ಗೋರಖ್​ಪುರ (ಉತ್ತರಪ್ರದೇಶ): ಚುನಾವಣೆಯ ವೇಳೆ ರಾಜಕಾರಣಿಗಳು ಭರವಸೆಗಳನ್ನು ನೀಡುವುದು ಸಹಜ. ಅಧಿಕಾರಕ್ಕೆ ಬಂದ ಮೇಲೆ ಅವುಗನ್ನು ಮರೆಯುವುದೂ ಅಷ್ಟೇ ಸಹಜ. ಹೀಗಿದ್ದಾಗ, ಕೊಟ್ಟ ವಾಗ್ದಾನಗಳನ್ನು ಅವರಿಗೆ ನೆನಪಿಸಿದರೆ ಹೇಗಿರುತ್ತದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಉತ್ತರಪ್ರದೇಶದ ಗೋರಖ್​ಪುರ ಐಟಿಎಂ ಇಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿಗಳು.

ನಮ್ಮ ನೇತಾರರಿಗೆ ತಾವು ಕೊಟ್ಟ ಭರವಸೆಗಳನ್ನು ನೆನಪಿಸಲು ವಿಶೇಷ ಕುರ್ಚಿಯನ್ನು ಸಿದ್ಧಪಡಿಸಿದ್ದಾರೆ. ಅದರ ಮೇಲೆ ಕುಳಿತಾಗ ಅವರಿಗೆ ತಾವು ಮಾಡಿದ ವಾಗ್ದಾನಗಳು ನೆನಪಿಗೆ ಬರುತ್ತವಂತೆ. ಜೊತೆಗೆ ಅವರು ಜನಮಾನಸದಲ್ಲಿ ಎಷ್ಟು ಬೇರೂರಿದ್ದಾರೆ. ಜನರಿಗೆ ಅವರು ಇಷ್ಟವೇ, ಇಲ್ಲವೆ ಎಂಬುದನ್ನೂ ಅದು ತಾಳೆ ಹಾಕುತ್ತದೆಯಂತೆ. ಇದೊಂಥರ ಮ್ಯಾಜಿಕ್​ ಕುರ್ಚಿ ಇದ್ದಂಗೆ.

ಎಐ ಕುರ್ಚಿಯನ್ನು ತಪಾಸಣೆ ನಡೆಸುತ್ತಿರುವ ವಿದ್ಯಾರ್ಥಿಗಳು
ಎಐ ಕುರ್ಚಿಯನ್ನು ತಪಾಸಣೆ ನಡೆಸುತ್ತಿರುವ ವಿದ್ಯಾರ್ಥಿಗಳು (ETV Bharat)

ಭರವಸೆ ನೆನಪಿಸುವ ಮ್ಯಾಜಿಕ್​ ಕುರ್ಚಿ: ಇಲ್ಲಿನ ಐಟಿಎಂ ಕಾಲೇಜಿನ ಪ್ರಥಮ ವರ್ಷದ ಕಂಪ್ಯೂಟರ್ ಡೇಟಾ ಸೈನ್ಸ್ ವಿದ್ಯಾರ್ಥಿಗಳಾದ ಅಂಶಿತ್ ಶ್ರೀವಾಸ್ತವ್​, ಪ್ರಣವ್ ಶರ್ಮಾ ಮತ್ತು ಮನ್ವೇಂದ್ರ ತ್ರಿಪಾಠಿ ಈ ಮ್ಯಾಜಿಕ್​ ಕುರ್ಚಿ ನಿರ್ಮಾತೃಗಳು. ಇದಕ್ಕೆ AI ಚೇರ್​ ಎಂದು ಕರೆದಿದ್ದು, ರಾಜಕಾರಣಿಗಳಿಗೆ ಇದು ಎದೆನಡುಗಿಸುವ ಸಾಧನವಾಗಿದೆ. ರಾಜಕಾರಣಿಗಳು ತಾವು ಮಾಡಿದ ವಾಗ್ದಾನಗಳನ್ನು ಈಡೇರಿಸದೇ ಇದ್ದಾಗ, ಜನರ ಅಸಮಾಧಾನ ಮತ್ತು ಕೋಪಕ್ಕೆ ತುತ್ತಾಗಿದ್ದರ ಬಗ್ಗೆಯೂ ಇದೆ ಮಾಹಿತಿ ನೀಡುತ್ತದೆ.

ಉದ್ಯೋಗ, ಶಿಕ್ಷಣ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಹತ್ತು ಹಲವು ಭರವಸೆಗಳನ್ನು ನೀಡಿದ ನೇತಾರರು ಈ ಖುರ್ಚಿಯ ಮೇಲೆ ಕುಳಿತಾಗ ಎಲ್ಲವನ್ನೂ ಅದು ಸ್ಮರಣೆಗೆ ತರುತ್ತದೆ. ಇಲ್ಲವಾದಲ್ಲಿ ಜನರ ತಿರಸ್ಕಾರಕ್ಕೆ ಒಳಗಾಗುತ್ತೀರಿ ಎಂಬುದನ್ನೂ ಅದು ಎಚ್ಚರಿಸುತ್ತದೆ ಎನ್ನುತ್ತಾರೆ ಇದನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿ ಪ್ರಣವ್ ಶರ್ಮಾ.

ಈ ಕುರ್ಚಿಯಲ್ಲಿ ಎಲೆಕ್ಟ್ರಾನಿಕ್​ ಸಾಧನಗಳನ್ನು ಅಳವಡಿಸಲಾಗಿದೆ. ಕೆಂಪು ಮತ್ತು ಹಸಿರು ದೀಪವೂ ಇದರಲ್ಲಿದೆ. ಇದನ್ನು ಸಾಮಾಜಿಕ ಜಾಲತಾಣಗಳಿಗೆ ಸಂಪರ್ಕಿಸಲಾಗಿದ್ದು, ಜನರು ನೇತಾರನ ಬಗ್ಗೆ ಇರುವ ಮನೋಭಾವವನ್ನು ದೀಪಗಳ ಮೂಲಕ ಸೂಚಿಸುತ್ತದಂತೆ. ಕೆಂಪು ಬಣ್ಣ ಹೊತ್ತಿಕೊಂಡಾಗ ಅಂತಹ ನಾಯಕ ಜನರ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದು ಅರ್ಥ. ಹಸಿರು ಬಣ್ಣ ಹೊತ್ತಿಕೊಂಡಲ್ಲಿ ಜನರು ಇಷ್ಟಪಡುವ ಪ್ರತಿನಿಧಿ ಎಂದರ್ಥ. ಅವರ ಒಳ್ಳೆಯ ಅಥವಾ ಕೆಟ್ಟ ನಿರ್ಧಾರಗಳ ಮೇಲೆ ಅಭಿಪ್ರಾಯ ಆಧರಿಸಿ ನಾಯಕರ ಅವರ ಕಾರ್ಯವೈಖರಿ ಮೌಲ್ಯಮಾಪನ ಮಾಡಲಾಗುವುದು ಎಂದು ಪ್ರಣವ್ ವಿವರಿಸುತ್ತಾರೆ.

ಎಐ ಕುರ್ಚಿಯ ಪರಿಶೀಲನೆ
ಎಐ ಕುರ್ಚಿಯ ಪರಿಶೀಲನೆ (ETV Bharat)

ಮ್ಯಾಜಿಕ್​ ಕುರ್ಚಿ ಹೇಗೆ ಕೆಲಸ ಮಾಡುತ್ತೆ: ವಿನ್ಯಾಸಕಾರರು ತಿಳಿಸಿದಂತೆ, ಈ ಖುರ್ಚಿಗೆ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಪ್ರಧಾನಿ, ಮುಖ್ಯಮಂತ್ರಿ ಅಥವಾ ಯಾವುದೇ ನೇತಾರ ಅದರ ಮೇಲೆ ಕುಳಿತಾಗ ಇಂಥವರೇ ಕುಳಿತಿದ್ದಾರೆ ಎಂದು ಅದು ಗುರುತಿಸುತ್ತದೆ. ಆ ನಾಯಕ ಏನು ಮಾಡುತ್ತಿದ್ದಾರೆ. ಎಷ್ಟು ಜನರು ಅವರನ್ನು ಇಷ್ಟಪಡುತ್ತಾರೆ. ಎಷ್ಟು ಜನರು ವಿರೋಧಿಸುತ್ತಾರೆ ಎಂದೂ ತಿಳಿಸುತ್ತದೆ. ಅಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಅಭಿಪ್ರಾಯಗಳ ಮೇಲೆ ಇದು ಲೆಕ್ಕ ಹಾಕುತ್ತದೆ. ಈ ಖುರ್ಚಿಗಾಗಿ ಆಂಡ್ರಾಯ್ಡ್ ಮೊಬೈಲ್, ಕೇಬಲ್, ಪಿಸಿಬಿ ಬೋರ್ಡ್, ಬ್ಯಾಟರಿ ಇತ್ಯಾದಿಗಳನ್ನು ಬಳಸಲಾಗಿದೆ.

15 ದಿನದಲ್ಲಿ ತಯಾರಿ: ಈ AI ಕುರ್ಚಿಯನ್ನು ವಿದ್ಯಾರ್ಥಿಗಳು 35 ಸಾವಿರ ರೂಪಾಯಿ ವೆಚ್ಚದಲ್ಲಿ 15 ದಿನಗಳಲ್ಲಿ ಸಿದ್ಧಪಡಿಸಿದ್ದಾರೆ. ದೇಶದ ಭವಿಷ್ಯವನ್ನು ನಿರ್ಧರಿಸಲು ಇದು ತುಂಬಾ ಉಪಯುಕ್ತವಾಗಲಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತಾಂತ್ರಿಕವಾಗಿ ಅಭಿವೃದ್ಧಿಯಾಗಲಿದೆ. ಈ ಅದ್ಭುತ ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳನ್ನು ಗೋರಖ್‌ಪುರದ ಮದನ್ ಮೋಹನ್ ಮಾಳವಿಯಾ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ದೇಶಕ ಎನ್‌ಕೆ ಸಿಂಗ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಮೋದಿ ಉಕ್ರೇನ್​-ರಷ್ಯಾ ಯುದ್ಧ ನಿಲ್ಸಿದ್ರಂತೆ, ಅವರಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಆಗ್ತಿಲ್ಲ: ರಾಹುಲ್ ವ್ಯಂಗ್ಯ - Rahul Gandhi

Last Updated : Jun 20, 2024, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.