ETV Bharat / bharat

ಮಣಿಪುರ ಹಿಂಸಾಚಾರ: ಇಂದಿನಿಂದ ಐದು ದಿನ ಇಂಟರ್​ನೆಟ್​ ಸೇವೆ ಬಂದ್​​ - suspended internet services

author img

By PTI

Published : Sep 10, 2024, 5:35 PM IST

ಮಣಿಪುರದಲ್ಲಿ ಮತ್ತೆ ಶುರುವಾಗಿರುವ ಹಿಂಸಾಚಾರದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಸಂಘರ್ಷ ತಡೆಯಲು ಸರ್ಕಾರ ಇಂದಿನಿಂದ ಮುಂದಿನ 5 ದಿನ ರಾಜ್ಯಾದ್ಯಂತ ಇಂಟರ್​​ನೆಟ್​ ಸೇವೆ ಬಂದ್​ ಮಾಡಿದೆ.

ಮಣಿಪುರ ಹಿಂಸಾಚಾರ
ಮಣಿಪುರ ಹಿಂಸಾಚಾರ (ETV Bharat)

ಇಂಫಾಲ (ಮಣಿಪುರ): ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರತಿಭಟನಾಕಾರರ ಘರ್ಷಣೆಯಿಂದಾಗಿ, ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ತೀವ್ರತೆ ಹೆಚ್ಚಿದ ಕಾರಣ ಮಂಗಳವಾರ ಇಡೀ ರಾಜ್ಯದಲ್ಲಿ ಐದು ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಸರ್ಕಾರ ಆದೇಶಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು, ದ್ವೇಷ ಭಾಷಣದ ಆಡಿಯೋ ಮತ್ತು ವಿಡಿಯೋಗಳು ಹರಿದಾಡುವುದನ್ನು ತಡೆಯುವ ಉದ್ದೇಶದಿಂದ ಇಂಟರ್​ನೆಟ್​ ಸೇವೆಗೆ ಕಡಿವಾಣ ಹಾಕಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಎಲ್ಲ ಸೇವೆಗಳು ಬಂದ್​; ರಾಜ್ಯದಲ್ಲಿ ಸೆಪ್ಟೆಂಬರ್ 10 ರ ಮಧ್ಯಾಹ್ನ 3 ರಿಂದ ಸೆಪ್ಟೆಂಬರ್​​ 15ರ ಮಧ್ಯಾಹ್ನ 3 ಗಂಟೆಯವರೆಗೆ ಅಂದರೆ, 5 ದಿನಗಳ ಕಾಲ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆ ಇರುವುದಿಲ್ಲ. ಮೊಬೈಲ್​ ಇಂಟರ್​​ನೆಟ್​, ಲೀಸ್​ ಲೈನ್​​ಗಳು, ಬ್ರಾಡ್​​ಬ್ಯಾಂಡ್​, ವಿಸ್ಯಾಟ್​​, ವಿಪಿಎನ್​​ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಂಗಳವಾರ ಬೆಳಗ್ಗೆ ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ರಾಜಭವನದತ್ತ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದೆ. ಇದನ್ನು ತಡೆಯಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮಿತ್​ ಶಾ ಪ್ರತಿಕೃತಿ ದಹನ: ಇಲ್ಲಿನ ಮಹಿಳಾ ಮಾರುಕಟ್ಟೆಯಲ್ಲಿ ಮೊಕ್ಕಾಂ ಹೂಡಿರುವ ನೂರಾರು ವಿದ್ಯಾರ್ಥಿಗಳು ರಾಜಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದದರು. ಆದರೆ, ಕಾಂಗ್ರೆಸ್ ಭವನದ ಬಳಿ ಭದ್ರತಾ ಪಡೆಗಳು ತಡೆದರು. ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ಥೌಬಲ್‌ನಲ್ಲಿ ಬಿಎನ್​ಎಸ್​​ಎಸ್​ ಕಾಯ್ದೆಯ ಸೆಕ್ಷನ್ 163 (2) ರ ಅಡಿ ನಿಷೇಧಾಜ್ಞೆಗ ವಿಧಿಸಿದೆ.

ರಾಕೆಟ್​ ಸಿಡಿತಲೆಗಳು ವಶ: ಇತ್ತೀಚೆಗೆ ನಡೆದ ಡ್ರೋನ್ ಮತ್ತು ಹೈಟೆಕ್ ಕ್ಷಿಪಣಿ ದಾಳಿಯ ನಂತರ ಅತ್ಯಾಧುನಿಕ ರಾಕೆಟ್‌ಗಳ ಸಿಡಿತಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದಾಳಿಯಲ್ಲಿ ಯಾವುದೇ ಡ್ರೋನ್ ಅಥವಾ ರಾಕೆಟ್‌ಗಳನ್ನು ಬಳಸಲಾಗಿಲ್ಲ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದಾರೆ. ದಾಳಿಯ ವೇಳೆ ರಾಕೆಟ್​, ಡ್ರೋನ್​ಗಳನ್ನು ಬಳಸಲಾಗಿದೆ. ಅವುಗಳಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ (ಆಡಳಿತ) ಕೆ ಜಯಂತ ಸಿಂಗ್ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಮೇ ತಿಂಗಳಿನಿಂದ ರಾಜ್ಯದಲ್ಲಿ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಕಲಹದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಇತ್ತೀಚೆಗೆ ಶುರುವಾದ ಕಲಹದಲ್ಲಿ 9 ಮಂದಿ ಸಾವನ್ನಪ್ಪಿ, 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಗುಂಡಿನ ದಾಳಿಗೆ ಮಹಿಳೆ ಬಲಿ; ಸಾವಿನ ಸಂಖ್ಯೆ 9ಕ್ಕೇರಿಕೆ - Manipur Violence

ETV Bharat Logo

Copyright © 2024 Ushodaya Enterprises Pvt. Ltd., All Rights Reserved.