ETV Bharat / bharat

ಅಮೃತ್​ಸರ್​​ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯೆಗೆ ಲೈಂಗಿಕ ಕಿರುಕುಳ; ದೂರು ದಾಖಲು - FEMALE DOCTOR MOLESTED

ಸರ್ಕಾರಗಳು ಎಷ್ಟೇ ಕಟ್ಟುನಿಟ್ಟಿನ ಕಾನೂನು, ಆದೇಶಗಳನ್ನು ಜಾರಿಗೊಳಿಸಿದರೂ ಮಹಿಳೆಯರು, ವಿದ್ಯಾರ್ಥಿನಿಯರು ವೈದ್ಯೆಯರ ಮೇಲಿನ ಅಟ್ಟಹಾಸಗಳು ಕಡಿಮೆಯಾಗುತ್ತಿಲ್ಲ. ವೈದ್ಯೆಯೊಬ್ಬರು ಹಾಸ್ಟೆಲ್​ಗೆ ಮರಳುವಾಗ ​ಸೈಕಲ್​ನಲ್ಲಿ ಬಂದ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

female-resident-doctor-in-amritsar-government-hospital-molested
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 4, 2024, 5:37 PM IST

Updated : Sep 4, 2024, 5:45 PM IST

ಅಮೃತ್​​ಸರ್ (ಪಂಜಾಬ್​): ಕೋಲ್ಕತ್ತಾದ ಆರ್​ಜಿ ಕರ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ಕೆಸ್​ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಹೀನ ಕೃತ್ಯ ಪಂಜಾಬ್​​ನಲ್ಲಿ ವರದಿಯಾಗಿದೆ. ಸೆಪ್ಟೆಂಬರ್​ 2ರಂದು ಪಂಜಾಬ್​ನಲ್ಲಿ ಮಹಿಳಾ ವೈದ್ಯೆಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಗುರು ನಾನಕ್​ ಆಸ್ಪತ್ರೆಯ ರೆಸಿಡೆಂಟ್​ ಮಹಿಳಾ ವೈದ್ಯೆ ಕರ್ತವ್ಯ ಮುಗಿಸಿ ಹಾಸ್ಟೆಲ್​ಗೆ ಮರಳುವಾಗ ಮೋಟಾರ್ ​ಸೈಕಲ್​ನಲ್ಲಿ ಬಂದ ಇಬ್ಬರು ಯುವಕರು ಆ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಘಟನೆ ಬಳಿಕ ಸಂತ್ರಸ್ತೆ, ಈ ವಿಚಾರವನ್ನು ತಮ್ಮ ವಾರ್ಡ್​​ ವೈದ್ಯರೊಂದಿಗೆ ಹಂಚಿಕೊಂಡಿದ್ದರು. ನಂತರ ಕಾಲೇಜಿನ ಪ್ರಿನ್ಸಿಪಾಲ್​ ಕಚೇರಿಗೂ ದೂರು ನೀಡಿದ್ದಾರೆ. ಈ ಸಂಬಂಧ ಪ್ರಾಂಶುಪಾಲರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಕೇಸ್​ ಕುರಿತು ಹೇಳಿದ್ದು ಹೀಗೆ; ಈ ಪ್ರಕರಣ ಕುರಿತು ಮಾತನಾಡಿರುವ ಪೊಲೀಸ್​ ಅಧಿಕಾರಿ ಹರ್ಮಜಿತ್​ ಸಿಂಗ್​ ಬಲ್​, ನವದೆಹಲಿ ಮೂಲದ ರೆಸಿಡೆಂಟ್​ ವೈದ್ಯರು, ಸೆಪ್ಟೆಂಬರ್​ 2ರಂದು ರಾತ್ರಿ 10 ರಿಂದ 10.30ರ ಸುಮಾರಿಗೆ ಹಾಸ್ಟೆಲ್​ಗೆ ಹೋಗುವಾಗ ಈ ಘಟನೆ ನಡೆದಿದೆ. ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿ ಈ ಕೃತ್ಯ ನಡೆದಿದ್ದು, ಈ ವೇಳೆ ನಾವು ಅಲ್ಲೇ ಗಸ್ತಿನಲ್ಲಿದ್ದೆವು. ಆದರೆ, ಆಗ ಪ್ರಕರಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಕುರಿತು ತಡರಾತ್ರಿ ದೂರು ದಾಖಲಾಗಿದ್ದು, ಕಾಮುಕರ ಬಂಧನಕ್ಕೆ ಕಾಯಾಚರಣೆ​ ನಡೆಸಿದೆವು. ಸದ್ಯ ಅಲ್ಲಿನ ಸುತ್ತಮುತ್ತದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ದೇಶದಲ್ಲಿ ಮಹಿಳಾ ವೈದ್ಯರ ಮೇಲೆ ಈ ರೀತಿ ಪ್ರಕರಣಗಳು ಆಗಿಂದಾಗ್ಗೆ ದಾಖಲಾಗುತ್ತಿವೆ. ಕೆಲವು ದಿನದ ಹಿಂದೆ ಆಗಸ್ಟ್​ 19ರಂದು ಉತ್ತರ ಪ್ರದೇಶದ ಜುಲೌನ್ ಜಿಲ್ಲೆಯ ಮೆಡಿಕಲ್​ ಕಾಲೇಜ್​ನ ಕ್ಲರ್ಕ್​, ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಮಹಿಳಾ ವೈದ್ಯೆಯೊಬ್ಬರನ್ನು ಮನೆಯ ಮೂಲೆಗೆ ಎಳೆದೊಯ್ದು ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದರು. ಒರೈಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೂಡ ಈ ರೀತಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮಸೂದೆ ಅಂಗೀಕರಿಸಿದ ಪಶ್ಚಿಮ ಬಂಗಾಳ: ರಾಜ್ಯಪಾಲರ ಅಂಕಿತ ಬಾಕಿ

Last Updated : Sep 4, 2024, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.