ಅಂಬಲಾ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ರೈತರು ದೆಹಲಿ ಚಲೋ ಪ್ರತಿಭಟನೆ ಇಂದು ರಾಷ್ಟ್ರ ರಾಜಧಾನಿಯತ್ತ ಸಾಗಲಿದೆ. ಮಧ್ಯಾಹ್ನ 1 ಗಂಟೆಗೆ ರೈತರ ಜಾಥಾ ಶಂಭು ಗಡಿ ದಾಟಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬಾಲಾ- ದೆಹಲಿ ಗಡಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ, ಯಾವುದೇ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಜೊತೆಗೆ ರೈತರಿಗೆ ಶಾಂತಿ - ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
11ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಸತ್ಯಾಗ್ರಹ: ರೈತರ ಪಾದಯಾತ್ರೆ 297ನೇ ದಿನಕ್ಕೆ ಕಾಲಿಟ್ಟಿದ್ದು, ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ತಲುಪಿದೆ. ಇಂದು ಮಧ್ಯಾಹ್ನ 1 ಗಂಟೆಗೆ 101 ರೈತರ ಜಾಥಾ (ಮೆರವಣಿ) ಶಂಭು ಗಡಿ ಮೂಲಕ ದೆಹಲಿ ತಲುಪಲಿದೆ. ಕಳೆದ 9 ತಿಂಗಳಿನಿಂದ ನಾವು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಇದೀಗ ದೆಹಲಿ ಚಲೋಗೆ ಮುಂದಾಗಿದ್ದೇವೆ ಎಂದು ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ತಿಳಿಸಿದರು.
#WATCH | Drone visuals from the Shambhu border, from where the farmers will start their march towards Delhi at 1 pm today.
— ANI (@ANI) December 6, 2024
(Drone visuals shot at 9 am) pic.twitter.com/137mQwewE2
ಅನುಮತಿ ಪಡೆಯದೇ ಪ್ರತಿಭಟನೆ, 34 ರೈತರನ್ನು ವಶಕ್ಕೆ ಪಡೆದ ಪೊಲೀಸರು: ಗುರುವಾರ ರೈತರ ಅನುಮತಿ ಪಡೆಯದೇ ನೋಯ್ಡಾದ ರಾಷ್ಟ್ರೀಯ ದಲಿತ್ ಪ್ರೇರ್ಣಾ ಸ್ಥಳದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ 34 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 34 ರೈತರನ್ನು ತಡರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಲಾಯಿತು ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿನ್ನೆಲೆ ಅವರ ಸಮಸ್ಯೆ ಆಲಿಸಲು ಉತ್ತರ ಪ್ರದೇಶ ಸರ್ಕಾರ ಐವರು ಸದಸ್ಯರ ಸಮಿತಿ ರಚಿಸಿದೆ. ಐಎಎಸ್ ಅಧಿಕಾರಿ, ಉತ್ತರ ಪ್ರದೇಶದ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನೇತೃತ್ವದ ಸಮಿತಿ ರಚಿಸಲಾಗಿದೆ
#WATCH | Visuals from the Shambhu border, from where the farmers will start their march towards Delhi at 1 pm today. pic.twitter.com/N1dkpZGB0C
— ANI (@ANI) December 6, 2024
ಸಮಸ್ಯೆ ಬಗೆಹರಿಸಲು ತಜ್ಞರ ತಂಡ ರಚನೆ: ಸಮಿತಿಯ ತಂಡದಲ್ಲಿ ತಜ್ಞರಿದ್ದು, ವಿಷಯವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ತಜ್ಞರ ತಂಡವನ್ನ ರಚಿಸಲಾಗಿದೆ. ಸಮಿತಿಯಲ್ಲಿ ಅನಿಲ್ ಕುಮಾರ್ ಸಾಗರ್, ಪಿಯುಷ್ ವರ್ಮಾ, ಸಂಜಯ್ ಖಠರಿ, ಸೊಮ್ಯಾ ಶ್ರೀವಾತ್ಸವ್, ಕಪಿಲ್ ಸಿಂಗ್ ಇದ್ದಾರೆ. ಒಂದು ತಿಂಗಳಲ್ಲಿ ಈ ಸಮಸ್ಯೆ ರೈತರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ನೀಡುವ ಕುರಿತ ವರದಿ ಮತ್ತು ಶಿಫಾರಸನ್ನು ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ.
ಡಿಸೆಂಬರ್ 3ರಂದು ಉತ್ತರ ಪ್ರದೇಶ ಪೊಲೀಸರು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ಪರಿಹಾರ ಮತ್ತು ಪ್ರಯೋಜನಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿದ್ದರು.
ಇದನ್ನೂ ಓದಿ: ಪಂಜಾಬ್ ರೈತರಿಂದ ನಾಳೆ ದೆಹಲಿ ಚಲೋ: ಸಿಂಘು ಗಡಿಯಲ್ಲಿ ಬಿಗಿ ಭದ್ರತೆ